Viral Video: ಒಂದೆಡೆ ವಧು ವರನಿಗೆ ಆರತಿ ಬೆಳಗಿದರೆ, ಇನ್ನೊಂದೆಡೆ ಅತಿಥಿಗಳ ಮಧ್ಯೆ ಭಾರಿ ಗರ್ದಿ ಗಮ್ಮತ್ತು

Fight In Wedding: ಮದುವೆ ಸಮಾರಂಭವೊಂದರಲ್ಲಿ ನೀವು ಹಿಂದೆಂದೂ ನೋಡಿರದ ಒಂದು ಘಟನೆ ಸಂಭವಿಸಿದೆ. ಮದುವೆಯಲ್ಲಿನ ವರಮಾಲೆ ಕಾರ್ಯಕ್ರಮದ ವೇಳೆ ಸಮಾರಂಭದಲ್ಲಿ ಹಾಜರಿದ್ದ ಮತ್ತು ಮಂಟಪದ ಕೆಳಗೆ ನಿಂತಿದ್ದ ಅತಿಥಿಗಳ ಮಧ್ಯೆ ಭಾರಿ ಹೊಡೆದಾಟವೆ ನಡೆದ್ಹೋಗಿದೆ. ಈ ಕಾದಾಟ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ವರಮಾಲೆ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ಮೊಟಕುಗೊಳಿಸಬೇಕಾದ ಸಂದರ್ಭ ಎದುರಾಗಿದೆ.  

Written by - Nitin Tabib | Last Updated : Dec 12, 2022, 04:35 PM IST
  • ನಮ್ಮ ಊಹೆಗೂ ಮೀರಿದ ಕೆಲ ಘಟನೆಗಳು ಮದುವೆ ಸಮಾರಂಭದಲ್ಲಿ ನಡೆದ್ಹೋಗುತ್ತವೆ.
  • ಅಂತಹುದೇ ಒಂದು ಘಟನೆ ಮದುವೆ ಸಮಾರಂಭದ
  • ವರಮಾಲೆ ಕಾರ್ಯಕ್ರಮದ ವೇಳೆ ನಡೆದಿದ್ದು
Viral Video: ಒಂದೆಡೆ ವಧು ವರನಿಗೆ ಆರತಿ ಬೆಳಗಿದರೆ, ಇನ್ನೊಂದೆಡೆ ಅತಿಥಿಗಳ ಮಧ್ಯೆ ಭಾರಿ ಗರ್ದಿ ಗಮ್ಮತ್ತು  title=
Marriage Viral Video

Wedding Video:  ನಮ್ಮ ಊಹೆಗೂ ಮೀರಿದ ಕೆಲ ಘಟನೆಗಳು ಮದುವೆ ಸಮಾರಂಭದಲ್ಲಿ ನಡೆದ್ಹೋಗುತ್ತವೆ. ಇದೇ ರೀತಿಯ ಘಟನೆಯೊಂದು ಮದುವೆ ಸಮಾರಂಭದ  ವರಮಾಲೆ ಕಾರ್ಯಕ್ರಮದ ವೇಳೆ ನಡೆದಿದ್ದು, ಇದರಲ್ಲಿ ಮದುವೆಗೆ ಆಗಮಿಸಿದ ಅತಿಥಿಗಳೆಲ್ಲರೂ ಕೂಡ ವೇದಿಕೆಯನ್ನು ಸುತ್ತುವರೆದಿದ್ದಾರೆ. ಕೆಲವರು ಈ ಕಾರ್ಯಕ್ರಮವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲು ತವಕಿಸುತ್ತಿದ್ದರೆ, ಇನ್ನೂ ಕೆಲವರು ವಧುವರರನ್ನು ನೋಡಲು ವೇದಿಕೆಯತ್ತ ಧಾವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ವಧು ನೃತ್ಯಮಾಡಲು ಪ್ರಾರಂಭಿಸಿದರೆ, ವರ ಮಂಡಿಯೂರಿ ಪ್ರಪೋಸ್ ಮಾಡುವ ಮೂಲಕ ವಧುವಿಗೆ ಸರ್ಪರೈಸ್ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ, ಒಂದು ಮದುವೆ ಸಮಾರಂಭದಲ್ಲಿ ಇದಕ್ಕೆ ವಿಪರೀತವೆ ನಡೆದುಹೋಗಿದೆ. ಮದುವೆಯ ವರಮಾಲೆ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳು ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ವರಮಾಲೆ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಪ್ರಸಂಗ ಎದುರಾಗಿದೆ.

ಇದನ್ನೂ ಓದಿ-Trending Video: ಪೆಟ್ರೋಲ್ ಬಾಂಬ್ ಜೊತೆ ಸ್ಟಂಟ್ ಮಾಡಲು ಹೋಗಿ ಬ್ಯಾಕ್ ಸುಟ್ಟಿಕೊಂಡ ಬಾಲಕ: ವಿಡಿಯೋ ನೋಡಿ

ವರಮಾಲೆಯ ವೇಳೆ ಅತಿಥಿಗಳ ನಡುವೆ ಮಾರಾಮಾರಿ ನಡೆದಿದೆ
ವಿಡಿಯೋದಲ್ಲಿ ನೀವು ವರಮಾಲೆ ಕಾರ್ಯಕ್ರಮಕ್ಕಾಗಿ ರಿವಾಲ್ವಿಂಗ್ ಸ್ಟೇಜ್ ಸಿದ್ಧಪಡಿಸಿರುವುದನ್ನು ನೀವು ನೋಡಬಹುದು. ವಧುವರರು ಆ ವೇದಿಕೆಯಲ್ಲಿ ನಿಂತಿದ್ದಾರೆ ಮತ್ತು ವಧು ಕೈಯಲ್ಲಿ ಆರತಿ ತಟ್ಟೆಯೊಂದಿಗೆ ನಿಂತಿದ್ದಾಳೆ. ವೇದಿಕೆ ನಾಲ್ಕು ದಿಕ್ಕುಗಳಲ್ಲಿ ತಿರುಗುತ್ತಿದ್ದು, ವರಮಾಲೆ ಕಾರ್ಯಕ್ರಮ ವಿಧಿ ವಿಧಾನದ ಮೂಲಕ ನೆರವೇರುತ್ತಿದೆ. ಈ ವೇಳೆ ಡ್ರೋನ್ ಕ್ಯಾಮರಾ ಕೂಡ ವಧು-ವರರ ಮುಂದೆ ಇದ್ದು ರೆಕಾರ್ಡ್ ಸಂಪೂರ್ಣ ದೃಶ್ಯವನ್ನು ಸೆರೆಸಿಡಿಯುತ್ತಿದೆ. ಈ ಸಂದರ್ಭದಲ್ಲಿ ಏಕಾಏಕಿ ಕೆಳಗಡೆ ಕೆಲ ಅತಿಥಿಗಳ ನಡುವೆ ಜಗಳ ನಡೆದಿದ್ದು, ನಂತರ ಅದು ಭಾರಿ ಮಾರಾಮಾರಿಗೆ ತಿರುಗಿದೆ. ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಈ ಕಿಡಿ ಹೊತ್ತಿಕೊಂಡಿದ್ದು, ವೇದಿಕೆಯ ಕೆಳಗೆ ನಿಂತ  ಅತಿಥಿಗಳು ಪರಸ್ಪರ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದರು. ಮೊದಮೊದಲು ಒಂದಿಬ್ಬರು ಹೊಡೆದಾಟ ನಡೆಸಿದ್ದಾರೆ, ನಂತರ ಕ್ರಮೇಣ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಜನರು ಒಬ್ಬರ ಮೇಲೊಬ್ಬರು ಕುರ್ಚಿಗಳನ್ನು ಎಸೆಯತೊಡಗಿದ್ದಾರೆ.

ಇದನ್ನೂ ಓದಿ- ​Wedding Viral Video: ಮದುವೆ ಮನೆಯಲ್ಲಿ ಪಾತ್ರೆ ಹಿಡಿದು ಕುಣಿದಾಡಿದ ಅತಿಥಿಗಳು: ವಧು-ವರನ ಕಥೆ ಏನು ನೋಡಿ

ಮದುವೆ ಸಮಾರಂಭದಲ್ಲಿ ಪರಸ್ಪರ ಮಾರಾಮಾರಿ ನಡೆಸಿದ ಅತಿಥಿಗಳು
ಈ ತಿರುಗುವ ವೇದಿಕೆಯ ಮೇಲೆ ನಿಂತಿದ್ದ ಅಳಿಯನ ಗಮನವೂ ವಿಚಲಿತಗೊಂಡು ಜಗಳವನ್ನು ನೋಡತೊಡಗಿತು. ಅಲ್ಲಿದ್ದ ಹುಡುಗಿಯೊಬ್ಬಳು ವರನ ಕೈ ಹಿಡಿದು ತಡೆಯಲು ಯತ್ನಿಸಿದಳು. ಜಗಳ ಎಷ್ಟರಮಟ್ಟಿಗೆ ಹೆಚ್ಚಿತೆಂದರೆ ಜನರು ಬಹಳ ಹೊತ್ತು ಹೊಡೆದಾಡುತ್ತಿದ್ದರು. ಕೆಲವರು ಹೊಡೆದಾಡಿಕೊಂಡು ಮದುವೆಯ ವಾತಾವರಣದಿಂದ ಹೊರ ಹೋಗತೊಡಗಿದರೂ ಜನರ ಆಕರ್ಷಣೆ ಮಾತ್ರ ಆ ಕಡೆ ಇತ್ತು. ಕೆಲವೇ ಸೆಕೆಂಡ್‌ಗಳ ಈ ವೀಡಿಯೋ ವೇಗವಾಗಿ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದನ್ನು rajuraj2794 ಹೆಸರಿನ ಖಾತೆಯ ಮೂಲಕ Instagram ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಇದುವರೆಗೆ ಸುಮಾರು 80 ಸಾವಿರ ಜನರು ಈ ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಈ ವೀಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಕುದ್ರಿತು ಬರೆದುಕೊಂಡಿರುವ ಬಳಕೆದಾರರೊಬ್ಬರು, 'ಡ್ರೋನ್ ಸಂಚಾಲಕ ಹೋರಾಟದ ಉತ್ತಮ ಕವರೇಜ್ ಮಾಡುತ್ತಿದ್ದಾರೆ, 'ದುಲ್ಹನ್ ಕಿ ಆರತಿ ಗೋ ಟು ಹೆಲ್' ಎಂದು ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Rk Raj (@rajuraj2794)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News