Viral vidoe : 20 ಅಡಿ ಉದ್ದದ ಹೆಬ್ಬಾವಿಗೆ ನದಿಯಲ್ಲೇ ನಡೆಯಿತು ಪರೀಕ್ಷೆ !

Python Viral Video : ಇಲ್ಲಿರುವ ಎಷ್ಟೋ ವಿಡಿಯೋಗಳು ಆಶ್ಚರ್ಯವನ್ನು ಉಂಟು  ಮಾಡುತ್ತವೆ. ಕೆಲವು ವಿಡಿಯೋಗಳು ಈ ಸೃಷ್ಟಿಯ ವಿಚಿತ್ರವನ್ನು ತೆರೆದಿಡುತ್ತವೆ. ಇನ್ನು ಕೆಲವು ವಿಡಿಯೋಗಳು ನಮ್ಮನ್ನು ಯೋಚನೆಗೆ ತಳ್ಳುತ್ತವೆ.

Written by - Ranjitha R K | Last Updated : Feb 6, 2023, 04:37 PM IST
  • ಪ್ರಾಣಿಗಳ ವೀಡಿಯೊಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ
  • ಈ ವಿಡಿಯೋಗಳಿಗೆ ಫಾಲೋವರ್ಸ್ ಸಂಖ್ಯೆ ಕೂಡಾ ಹೆಚ್ಚಿದೆ.
  • ಈ ವಿಡಿಯೋ ಅಪಾಯಕಾರಿ ಹೆಬ್ಬಾವಿಗೆ ಸಂಬಂಧಿಸಿದ್ದಾಗಿದೆ.
Viral vidoe : 20 ಅಡಿ ಉದ್ದದ ಹೆಬ್ಬಾವಿಗೆ  ನದಿಯಲ್ಲೇ ನಡೆಯಿತು ಪರೀಕ್ಷೆ ! title=

Python Viral Video : ಇಂಟರ್ನೆಟ್ ಜಗತ್ತೇ ಹಾಗೆ.  ಇಲ್ಲಿ ಪ್ರತಿನಿತ್ಯ ಹಲವಾರು ರೀತಿಯ ವೀಡಿಯೋಗಳು ಕಣ್ಣಿಗೆ ಬೀಳುತ್ತವೆ.  ಇಲ್ಲಿರುವ ಎಷ್ಟೋ ವಿಡಿಯೋಗಳು ಆಶ್ಚರ್ಯವನ್ನು ಉಂಟು  ಮಾಡುತ್ತವೆ. ಕೆಲವು ವಿಡಿಯೋಗಳು ಈ ಸೃಷ್ಟಿಯ ವಿಚಿತ್ರವನ್ನು ತೆರೆದಿಡುತ್ತವೆ. ಇನ್ನು ಕೆಲವು ವಿಡಿಯೋಗಳು ನಮ್ಮನ್ನು ಯೋಚನೆಗೆ ತಳ್ಳುತ್ತವೆ. ಸುಮ್ಮನೆ ಕುಳಿತಿದ್ದಾಗ ಸಮಯ ಕಳೆಯಲು ಈ ಸಾಮಾಜಿಕ ಮಾಧ್ಯಮಗಳಲ್ಲಿರುವ ವಿಡಿಯೋ  ಅನೇಕ ಮಂದಿಗೆ ನೆರವಾಗುತ್ತದೆ. 

ಇಂಟರ್ನೆಟ್ ಜಗತ್ತಿನಲ್ಲಿ ಪ್ರಾಣಿಗಳ ವೀಡಿಯೊಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಈ ವಿಡಿಯೋಗಳಿಗೆ ಫಾಲೋವರ್ಸ್ ಸಂಖ್ಯೆ ಕೂಡಾ ಹೆಚ್ಚಿದೆ. ಕುತೂಹಲಕಾರಿ ವಿಡಿಯೋವೊಂದು ಈಗ ಅಂತರ್ಜಾಲದಲ್ಲಿ  ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಅಪಾಯಕಾರಿ ಹೆಬ್ಬಾವಿಗೆ  ಸಂಬಂಧಿಸಿದ್ದಾಗಿದೆ. 

ಇದನ್ನೂ ಓದಿ : Viral Video: ರೊಟ್ಟಿ ಮಾಡುತ್ತಾ ಹೀಗೊಂದು ಹಾಡು ಹಾಡಿದ ಮಹಿಳೆ, ಬಿಗ್ ಆಫರ್ ಕೊಟ್ಟ ನಟ ಸೋನು ಸೂದ್!

ನದಿಯಲ್ಲಿ 20 ಅಡಿ ಉದ್ದದ ಹೆಬ್ಬಾವು  ಈಜಾಡುತ್ತಿರುವುದನ್ನು ಕಾಣಬಹುದು. ಈ ಹೆಬ್ಬಾವು ಈಜುತ್ತಿರುವ ಪಕ್ಕದಲ್ಲಿಯೇ ದೋಣಿಯೊಂದು ಸಾಗುತ್ತದೆ. ಅಂತ ಭಯಾನಕ ಹೆಬ್ಬಾವಿನ ಪಕ್ಕದಲ್ಲಿಯೇ ದೋಣಿ ಸಾಗುವುದು ನೋಡುವಾಗ ಒಮ್ಮೆ ಮೈ ಜುಮ್ಮೆನ್ನುತ್ತದೆ. 

ಆದರೆ, ಗಮನವಿಟ್ಟು ನೋಡಿದರೆ ತಿಳಿಯುತ್ತದೆ, ಹೆಬ್ಬಾವು ನೀರಿನಲ್ಲಿ ಈಜಾಡುತ್ತಿಲ್ಲ. ಅದು ಸತ್ತು ತೇಲಾಡುತ್ತಿದೆ.   ಸತ್ತಿರುವ ಹೆಬ್ಬಾವನ್ನು ಹೊರ ತೆಗೆದು ಪರೀಕ್ಷೆ ಕೂಡಾ ಮಾಡುತ್ತಾರೆ. ಈ ವೀಡಿಯೊವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ ಮತ್ತು ನೂರಾರು ಜನರು ಇದಕ್ಕೆ ಕಮೆಂಟ್ ಮಾಡಿದ್ದಾರೆ.

 

ಇದನ್ನೂ ಓದಿ :  Viral Video: ಸೆಲ್ಪಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯ ಪೋನ್ ಕಿತ್ತೆಸೆದ ರಣಬೀರ್ ಕಪೂರ್!

ಈ ವೀಡಿಯೊವನ್ನು Instagram ಪುಟದಲ್ಲಿ earth_animals_pixandwild_animal_pix ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳನ್ನು ಪಡೆದುಕೊಂಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News