Snake viral video : ಇಂದಿನ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನ ಒಂದು ಭಾಗವಾಗಿ ಬೆಸೆದುಕೊಂಡಿದೆ. ಸ್ವಲ್ಪ ಸಮಯ ಫ್ರೀ ಸಿಕ್ಕರೂ ಸಾಕು ಆ ಟೈಮ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯಲು ಜನ ಇಷ್ಟಪಡುತ್ತಾರೆ. ಸಾಮಾಜಿಕ ಜಾಲತಾಣ ಅಥವಾ ಸಾಮಾಜಿಕ ಮಾಧ್ಯಮ ನಮ್ಮ ಮೇಲೆ ಕೆಟ್ಟ ಪರಿಣಾಮಗಳನ್ನು ಮಾತ್ರ ಬೀರುತ್ತವೆ ಎಂದರೆ ತಪ್ಪು. ಸಾಮಾಜಿಕ ಮಾಧ್ಯಮಗಳಲ್ಲಿ ಇರುವ ಅದೆಷ್ಟೋ ಕಂಟೆಂಟ್ ಗಳು ನಮ್ಮ ಜ್ಞಾನವನ್ನು ಕೂಡಾ ಹೆಚ್ಚಿಸುತ್ತವೆ. ಇದು ಮನರಂಜನೆಯ ಅತ್ಯುತ್ತಮ ಮಾರ್ಗ ಕೂಡಾ ಹೌದು. ಇಲ್ಲಿ ಅನೇಕ ಬಗೆಯ ವಿಡಿಯೋಗಳು ನಮ್ಮ ಕಣ್ಣಿಗೆ ಬೀಳುತ್ತವೆ.
ನೆಟ್ಟಿಗರು ಯಾವಾಗಲೂ ಹಾವಿನ ವೀಡಿಯೊಗಳ ಮೇಲೆ ವಿಶೇಷ ಆಕರ್ಷಣೆ ಹೊಂದಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಅತಿ ಹೆಚ್ಚು ತಮ್ಮತ್ತ ಸೆಳೆದ ವಿಡಿಯೋಗಳೆಂದರೆ ಅದು ಹಾವುಗಳ ವಿಡಿಯೋ. ಹಾವು ಎಂದ ಕೂಡಲೇ ಎಂಥವರ ಕೈ ಕಾಲು ಕೂಡಾ ಒಂದು ಸಲಕ್ಕೆ ನಡುಗುತ್ತದೆ. ಕೆಲವು ಸಂಪ್ರದಾಯಗಳಲ್ಲಿ, ಹಾವಿಗೆ ದೇವರ ಸ್ಥಾನ ಮಾನ ನೀಡಲಾಗಿದೆ. ಅದಕ್ಕೆ ತಕ್ಕಂತೆ ಹಾವುಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ : Optical Illusion: 4 ರ ಮಧ್ಯೆ ಅಡಗಿದ 8 ನ್ನು ಹುಡುಕಿ ತೋರಿಸಿ, ಪ್ರಶ್ನೆಯಲ್ಲೇ ಇದೆ ಉತ್ತರ! ನೀವೇಷ್ಟು ಚುರುಕು ನೋಡೋಣ!
ಇತ್ತೀಚೆಗೆ ಹಾವಿನ ವಿಡಿಯೋವೊಂದು ಶೇರ್ ಆಗಿದ್ದು, ವೈರಲ್ ಆಗಿದೆ. ಇದರಲ್ಲಿ ವಿಷಪೂರಿತ ಹಾವಿನ ವಿಡಿಯೋ ನಗುವಂತೆ ಬರಿಸುತ್ತದೆ. ಮಾಹಿತಿಯ ಪ್ರಕಾರ, ಈ ವೀಡಿಯೊ ಟೆಕ್ಸಾಸ್ ನದ್ದು ಎನ್ನಲಾಗಿದೆ. ಈ ಹಾವು ಸಾಯುವಂತೆ ನಟಿಸುವುದನ್ನು ಈ ವಿಡಿಯೋದಲ್ಲಿ ಗಮನಿಸಬಹುದು.
ಈ ವಿಷಕಾರಿ ಹಾವು ತನ್ನ ಎದುರಾಳಿಯ ಮೇಲೆ ದಾಳಿ ಮಾಡುವ ಬದಲು ತಾನೇ ಸತ್ತಂತೆ ನಟಿಸುತ್ತಿದೆ. ಈ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು 2017 ರಲ್ಲಿ ಚಿತ್ರೀಕರಿಸಲಾಗಿದೆ. . ಈ ವಿಡಿಯೋದಲ್ಲಿ ವಿಷಪೂರಿತ ಹಾವು ಸಾಯುವಂತೆ ನಟಿಸುತ್ತಿರುವುದನ್ನು ಸ್ಪಷ್ಟವಾಗಿ ನೋಡಬಹುದು. ಹಾವುಗಳ ಇಂತಹ ನಾಟಕವನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ.
ಇದನ್ನೂ ಓದಿ : Viral Video: ಪಿಬಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹಿಲಿಂಗ್ ಪುಂಡರ ಅಟ್ಟಹಾಸ: ಕಣ್ಮುಚ್ಚಿ ಕುಳಿತ ಖಾಕಿ
ವಿಷಕಾರಿ ಹಾವಿನ ನಾಟಕೀಯ ವೀಡಿಯೊವನ್ನು ಇಲ್ಲಿ ಕಾಣಬಹುದು:
ವೈರಲ್ ಆಗಿರುವ ವಿಡಿಯೋವನ್ನು 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಸಾವಿರಾರು ಕಾಮೆಂಟ್‌ಗಳು ಬಂದಿವೆ. ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನಲ್ಲೂ ವಿಡಿಯೋ ಶೇರ್ ಆಗಿದೆ.
(ಸೂಚನೆ : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ