Viral Video: ನಮ್ಮ ಯುವ ಜನರಿಗೆ ಬೈಕ್ ಅಥವಾ ಮೋಟರ್ ಸೈಕಲ್ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು. ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ತಮ್ಮ ಬಗ್ಗೆ ಇರಲಿ ತಮ್ಮನ್ನು ನಂಬಿಕೊಂಡಿರುವ ಮನೆಯವರ ಬಗ್ಗೆಯೂ ಕೂಡ ಕಿಂಚಿತ್ತು ಯೋಚನೆಯಿಲ್ಲದೆ ಮನಬಂದಂತೆ ಗಾಡಿ ಚಲಾಯಿಸುತ್ತಾರೆ. ತರಾವರಿ ಸ್ಟಂಟ್ ಮಾಡಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಅಂತಹದ್ದೇ ಒಂದು ದೃಶ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ, ಒಂದು ಮೋಟಾರ್ ಸೈಕಲ್‌ನಲ್ಲಿ ಎಷ್ಟು ಜನ ಸವಾರಿ ಮಾಡಬಹುದು ಎಂದು ಕೇಳಿದರೆ ನಿಮ್ಮ ಉತ್ತರ ಎರಡು ಅಥವಾ ಮೂರು ಎಂದಿರಬಹುದು. ಆದರಿಲ್ಲಿ ಒಂದೇ ಮೋಟಾರ್ ಸೈಕಲ್‌ನಲ್ಲಿ ಬರೋಬ್ಬರಿ ಐದು ಜನರು ಸವಾರಿ ಮಾಡುವ ದೃಶ್ಯ ವೈರಲ್ ಆಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್‌ನ ಈ ದೃಶ್ಯವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಒಂದು ಮೋಟಾರ್ ಸೈಕಲ್‌ನಲ್ಲಿ ಐದು ಜನರು ಸವಾರಿ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿರುವ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ಐವರನ್ನು ಸೋಮವಾರ (ನವೆಂಬರ್ 28) ದಂದು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಇದನ್ನೂ ಓದಿ- Bride Groom Video : ಈ ಪ್ರಿ ವೆಡ್ಡಿಂಗ್ ಫೋಟೋ ಶೂಟ್ Video ನೋಡಿದ್ರೆ ಶಾಕ್ ಆಗ್ತೀರಾ!
ಈ ಕುರಿತಂತೆ ಮಾಹಿತಿ ನೀಡಿರುವ, ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಟ್ರಾಫಿಕ್ ಅಶೋಕ್ ಕುಮಾರ್, ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು ಜನರು ಮೋಟಾರ್‌ಸೈಕಲ್‌ನಲ್ಲಿ ಸವಾರಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ದ್ವಿಚಕ್ರವಾಹನದ ನಂಬರ್ ಪ್ಲೇಟ್ ಗೋಚರಿಸಿದ್ದು, ಅದರ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು ಐವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
Hi @UPPViralCheck FYI pls.
How many people can ride a bike?
You might suggest one or two, but this scene from Moradabad in Uttar Pradesh proves that as many as five can fit on one!
Warning: this is not safe, so we do not advise you try it.
via Sputnik news, Russia pic.twitter.com/IrOr7ZjjoF— Bhavika Kapoor (@bhavi_kap) November 29, 2022
ಆರೋಪಿಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ 6,500 ರೂ.ಗಳ ಚಲನ್ ಜಾರಿ ಮಾಡಲಾಗಿದೆ. ಮಾತ್ರವಲ್ಲ, ಸಮಾಜದಲ್ಲಿ ಶಾಂತಿ ಕದಡಿದ್ದಕ್ಕಾಗಿ ಐವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದ್ದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- Viral Video: ಇನ್ನೊಬ್ಬ ಸವಾರನನ್ನು ಒದ್ದು ಉರುಳಿಸಲು ಹೋಗಿ ಬೈಕಿಂದ ಬಿದ್ದ ಯುವತಿ: ಕರ್ಮ ರಿಟರ್ನ್ಸ್ ಅಂದ್ರೆ ಇದೇ
ದ್ವಿಚಕ್ರವಾಹನ ರಯೀಸ್ ಅಹಮದ್ ಎಂಬುವವರಿಗೆ ಸೇರಿದ್ದಾಗಿದೆ. ಆರೋಪಿಗಳನ್ನು ಆರೀಫ್, ಆಸಿಫ್, ಇರ್ಷಾದ್, ಶಮೀಮ್ ಮತ್ತು ವಾಸಿಂ ಎಂದು ಗುರುತಿಸಲಾಗಿದೆ. ಎಲ್ಲರೂ ಮೊರಾದಾಬಾದ್‌ನ ಅಸಲಾತ್‌ಪುರ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ.
ಎಚ್ಚರಿಕೆ: ಇಂತಹ ಸಾಹಸಗಳು ಸುರಕ್ಷಿತವಲ್ಲ, ಆದ್ದರಿಂದ ಇದನ್ನು ಪ್ರಯತ್ನಿಸಲು Zee ಮೀಡಿಯಾ ನಿಮಗೆ ಸಲಹೆ ನೀಡುವುದಿಲ್ಲ.
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...