Viral Video : ಹಾರ ಬದಲಾಯಿಸುವ ವೇಳೆ ರೊಮ್ಯಾಂಟಿಕ್ ಆಗಲು ಹೋದ ವಧು! ಆದರೆ ಮನೆಯವರ ಕೃತ್ಯಕ್ಕೆ ಬೆಚ್ಚಿ ಬಿದ್ದ ವರ !

Wedding Viral Video : ಒಟ್ಟಿನಲ್ಲಿ ಮದುವೆ ಅನ್ನುವುದು ಪ್ರತಿಯೊಬ್ಬನ ಜೀವನದಲ್ಲಿ ಒಮ್ಮೆ ಘಟಿಸಬಹುದಾದ ಸುಂದರ ಕ್ಷಣ. ಆ ಸುಂದರ ಕ್ಷಣಗಳನ್ನು ಇನ್ನಷ್ಟು ಮಧುರಗೊಳಿಸುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ನಡೆಯುತ್ತವೆ. 

Written by - Ranjitha R K | Last Updated : Mar 1, 2023, 02:03 PM IST
  • ಸಾಮಾಜಿಕ ಮಾಧ್ಯಮಗಳಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋಗಳದ್ದೇ ಕಾರುಬಾರು.
  • ಕೆಲವು ವಿಡಿಯೋಗಳು ಮನಮುಟ್ಟುವಂತಿದ್ದರೆ, ಕೆಲವು ವಿಡಿಯೋಗಳು ಬೆಚ್ಚಿ ಬೀಳಿಸುತ್ತವೆ.
  • ಇಲ್ಲೊಂದು ವಿಡಿಯೋ ವೈರಲ್ ಆಗಿದೆ.
Viral Video : ಹಾರ ಬದಲಾಯಿಸುವ ವೇಳೆ ರೊಮ್ಯಾಂಟಿಕ್ ಆಗಲು ಹೋದ ವಧು! ಆದರೆ ಮನೆಯವರ ಕೃತ್ಯಕ್ಕೆ ಬೆಚ್ಚಿ ಬಿದ್ದ ವರ ! title=

 Wedding Viral Video : ಇದು ಮದುವೆಯ ಸೀಸನ್. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಮದುವೆಗೆ  ಸಂಬಂಧಿಸಿದ ವಿಡಿಯೋಗಳದ್ದೇ ಕಾರುಬಾರು. ಕೆಲವು ವಿಡಿಯೋಗಳು ಮನಮುಟ್ಟುವಂತಿದ್ದರೆ, ಕೆಲವು ವಿಡಿಯೋಗಳು ಬೆಚ್ಚಿ ಬೀಳಿಸುತ್ತವೆ.      ಕೆಲವು ವಿಡಿಯೋಗಳಲ್ಲಿ ವಧು ವರರ ಎಂಟ್ರಿ ಎಲ್ಲರ ಗಮನ ಸೆಳೆದರೆ, ಇನ್ನು ಕೆಲವೆಡೆ ವಧು ವರರ ಪೋಷಾಕುಗಳು ಎಲ್ಲರನ್ನು ಹಿಡಿದಿಟ್ಟುಕೊಳ್ಳುತ್ತವೆ. ಮತ್ತೆ ಕೆಲವೆಡೆ ವಧು ವರರ ಮನೆಯವರು ನೀಡುವ ಸರ್ಪ್ರೈಸ್ ಕಣ್ಣಂಚು ಒದ್ದೆ ಮಾಡಿಬಿಡುತ್ತದೆ. 

ಒಟ್ಟಿನಲ್ಲಿ ಮದುವೆ ಅನ್ನುವುದು ಪ್ರತಿಯೊಬ್ಬನ ಜೀವನದಲ್ಲಿ ಒಮ್ಮೆ ಘಟಿಸಬಹುದಾದ ಸುಂದರ ಕ್ಷಣ. ಆ ಸುಂದರ ಕ್ಷಣಗಳನ್ನು ಇನ್ನಷ್ಟು ಮಧುರಗೊಳಿಸುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ನಡೆಯುತ್ತವೆ. ಇದಕ್ಕಾಗಿ ಮೊದಲೇ ಎಲ್ಲಾ ತಯಾರಿಗಳನ್ನು ನಡೆಸಲಾಗುತ್ತದೆ. ಕೆಲವೊಮ್ಮೆ ವಧುವಾಗಲೀ, ವರನಾಗಲೀ ತಾನು ಏನು ಮಾಡಬೇಕು ಎಂದು ಅಂದುಕೊಂಡಿರುವುದನ್ನು ಯಾರೊಂದಿಗೂ ಹಂಚಿಕೊಂಡಿರುವುದಿಲ್ಲ. ಯಾಕೆಂದರೆ ತಮ್ಮ ಹೊಸ ಆಲೋಚನೆ ಮೂಲಕ ತಮ್ಮ ಸಂಗಾತಿಗೆ ಸರ್ ಪ್ರೈಸ್ ನೀಡುವ ಉದ್ದೇಶ ಅಲ್ಲಿರುತ್ತದೆ. ಆದರೆ ಈ ಹೊತ್ತಿನಲ್ಲಿ ಮಧ್ಯ ಪ್ರವೇಶಿಸುವ ಮನೆಯವರು, ಸ್ನೇಹಿತರು  ಎಲ್ಲಾ ಸರ್ ಪ್ರೈಸ್ ಗೆ ನೀರೆರೆದು ಬಿಡುತ್ತಾರೆ. ಇಲ್ಲಿ ಆಗಿರುವುದು ಕೂಡಾ ಇದೇ. 

ಇದನ್ನೂ ಓದಿ : Monkey Video : ಸಖತ್‌ ಸ್ಟೈಲಾಗಿ ಸಿಗರೇಟ್‌ ಸೇದುವ ಕೋತಿ.. ನಶೆಯಲ್ಲಿ ತೇಲಾಡಿದ ಮಂಗಣ್ಣ

ಪಾಪ ವಧು ಹಾರ ಬದಲಾಯಿಸುವ ವೇಳೆ ರೊಮ್ಯಾಂಟಿಕ್ ಆಗಿರಲಿ ಎಂದು ತನ್ನ ಮಂಡಿಯೂರಲು ಹೋಗುತ್ತಾಳೆ. ಆದರೆ ಅಲ್ಲೇ ನಿಂತಿದ್ದ ವಧುವಿನ ಮನೆಯವರಿಗೆ ಅದೇನನಿಸಿತೋ ಏನೋ ವಧುವನ್ನು ಹಿಂದಕ್ಕೆ ಎಳೆದು ಬಿಡುತ್ತಾರೆ. ಪಾಪ ರೊಮ್ಯಾಂಟಿಕ್ ಆಗಲು ಹೋದ ವಧು ನೆಲಕ್ಕೆ ಬೀಳುತ್ತಾಳೆ. ಒಂದು ಕ್ಷಣಕ್ಕೆ ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ವರನಿಗೆ ತಿಳಿಯದೆ ತಬ್ಬಿಬ್ಬಾಗಿ ಬಿಡುತ್ತಾನೆ.  ನಂತರ ವಧುವಿನ ಕೊರಳಿಗೆ ಹಾರ ಹಾಕುತ್ತಾನೆ.

 

 
 
 
 
 

ಇದನ್ನೂ ಓದಿ : ಮನುಷ್ಯರಂತೆ ನೆಲದ ಮೇಲೆ ಎದ್ದು ನಿಂತ 12 ಅಡಿ ಉದ್ದದ ಹಾವನ್ನು ನೆವೆಂದಾದರು ನೋಡಿದ್ದೀರಾ...? ಇಲ್ಲಿದೆ ನೋಡಿ   

ಒಟ್ಟಿನಲ್ಲಿ ವಧುವಿನ ಸರ್ ಪ್ರೈಸ್ ಅನ್ನು ಎಲ್ಲರೂ ಸೇರಿ ಹಾಳು ಮಾಡಿ ಬಿಡುತ್ತಾರೆ. actor_abhishek_yadav2 ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಧುವಿನ ಮನೆಯವರ ವರ್ತನೆಗೆ ಬಳಕೆದಾರರಿಂದ ಆಕ್ರೋಶ ವ್ಯಕ್ತವಾಗಿದೆ. ವಧುವಿನ ಜೀವನದ ಅತ್ಯಂತ ಸುಂದರ ಕ್ಷಣ ಕಸಿದುಕೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದರೆ. ವಧು ತಾನಾಗಿಯೇ ತಲೆ ಬಾಗಲು ಸಿದ್ದರಿಳುವಾಗ ತಡೆಯುವುದಕ್ಕೆ ನೀವ್ಯಾರು ಎಂದು ಪ್ರಶ್ನಿಸಿದ್ದಾರೆ.  

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News