Fish viral video : ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇವುಗಳಲ್ಲಿ ಹಲವು ವಿನೋದ ಮತ್ತು ಹಾಸ್ಯಮಯವಾಗಿದ್ದರೆ ಇನ್ನೂ ಕೆಲವು ದೃಶ್ಯಗಳು ಭಯಾನಕ ಮತ್ತು ಸಂವೇದನಾಶೀಲವಾಗಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಸಧ್ಯ ಮೀನಿಗೆ ಸಂಬಂಧಪಟ್ಟ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ.
ಹೌದು.. ಇಂದಿನ ದಿನದಲ್ಲಿ ಇಂಟರ್ನೆಟ್ ಮಾನವನ ಜೀವನದ ಒಂದು ಭಾಗವಾಗಿದೆ. ಅಲ್ಲಿ ವೈರಲ್ ಆಗುವ ವಿಡಿಯೋಗಳು ಕೆಲವು ಪಾಠಗಳನ್ನು ಕಲಿಸಿದರೆ ಇನ್ನೂ ಕೆಲವು ಭಯಾನಕ ಮತ್ತು ಹಾಸ್ಯಮಯವಾಗಿರುತ್ತದೆ. ಮೀನಿಗೆ ಸಂಬಂಧಪಟ್ಟ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಮೀನೊಂದು ಮಹಿಳೆಯ ಕೈ ನುಂಗಿದ ವಿಡಿಯೋ ಅಂತರ್ಜಾಲದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಮೆರಿಕದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ ಎಂದು ಯುಎಸ್ ಟುಡೇ ವರದಿ ಮಾಡಿದೆ.
omg pic.twitter.com/VFz6GB7J8z
— Enezator (@Enezator) August 3, 2023
ಇದನ್ನೂ ಓದಿ: "ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಹತ್ಯೆಗೈದಿದ್ದೀರಿ"- ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ
ವೀಡಿಯೊದ ಆರಂಭದಲ್ಲಿ ಯುವತಿಯೊಬ್ಬಳು ದಡದಲ್ಲಿ ನಿರ್ಮಿಸಲಾಗಿದ್ದ ಬೋಟ್ ಕಟ್ಟೆಯ ಮೇಲೆ ಮಲಗಿ ಆಹಾರದ ತುಂಡನ್ನು ಕೈಯಲ್ಲಿ ಹಿಡಿದು ಮೀನಿಗಾಗಿ ಕಾಯುತ್ತಿರುತ್ತಾಳೆ. ಆಗ ದಿಢಿರನೇ ಬರುವ ದೈತ್ಯ ಮೀನು ಯುವತಿಯ ಅರ್ಧದಷ್ಟು ಕೈಯನ್ನು ನುಂಗುತ್ತದೆ. ಸಧ್ಯ ಈ ವಿಡಿಯೋವನ್ನು ನೋಡಿದ ಜನರು ಆಚ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ವೈರಲ್ ಆಗುತ್ತಿದೆ.
ಎನೆಝೇಟರ್ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದೈತ್ಯ ಮೀನು ಯುವತಿಯ ಕೈಯನ್ನು ನುಂಗಿದ ನಂತರ ಅವಳು ಪ್ರಯತ್ನ ಪಟ್ಟು ಬಿಡಿಸಿಕೊಳ್ಳುತ್ತಾಳೆ. ಈ ವೇಳೆ ಯುವತಿಯ ಕೈಗೆ ಯಾವುದೇ ಗಾಯಗಳಾಗಿರುವುದು ಕಾಣಿಸುವುದಿಲ್ಲ. ಯುವತಿ ತನ್ನ ಕೈಯನ್ನು ನೋಡಿಕೊಂಡು ಸಂತೋಷದಲ್ಲಿ ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಈಗಾಗಲೇ 29 ಲಕ್ಷ ಮಂದಿ ವೀಕ್ಷಿಸಿದ್ದಾರೆ. ವಿಡಿಯೋಗೆ ಹಲವರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.