Trending: ರಭಸವಾಗಿ ಹರಿಯುತ್ತಿರುವ ನದಿಗೆ ಧುಮುಕಿದ 70ರ ಅಜ್ಜಿ, ವಿಡಿಯೋ ನೋಡಿ

ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರನ್ನು ನಿಬ್ಬೆರಗಾಗಿಸುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ಅಪಾರ ಸಂಖ್ಯೆಯಲ್ಲಿ ನೋಡುಗರ ಚಿತ್ತವನ್ನು ಆಕರ್ಷಿಸುತ್ತಿದೆ. ಈ ವಿಡಿಯೋದಲ್ಲಿ ವೃದ್ಧ ಮಹಿಳೆಯೋರ್ವಳು ರಭಸವಾಗಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಧುಮುಕುತ್ತಿರುವುದನ್ನು ನೀವು ನೋಡಬಹುದು.   

Written by - Nitin Tabib | Last Updated : Jun 28, 2022, 09:50 PM IST
  • ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರನ್ನು ನಿಬ್ಬೆರಗಾಗಿಸುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.
  • ಈ ವಿಡಿಯೋ ಅಪಾರ ಸಂಖ್ಯೆಯಲ್ಲಿ ನೋಡುಗರ ಚಿತ್ತವನ್ನು ಆಕರ್ಷಿಸುತ್ತಿದೆ.
  • ಈ ವಿಡಿಯೋದಲ್ಲಿ ವೃದ್ಧ ಮಹಿಳೆಯೋರ್ವಳು ರಭಸವಾಗಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಧುಮುಕುತ್ತಿರುವುದನ್ನು ನೀವು ನೋಡಬಹುದು.
Trending: ರಭಸವಾಗಿ ಹರಿಯುತ್ತಿರುವ ನದಿಗೆ ಧುಮುಕಿದ 70ರ ಅಜ್ಜಿ, ವಿಡಿಯೋ ನೋಡಿ title=
Old Lady Viral Video

Viral Video - ಈ ವಿಡಿಯೋದಲ್ಲಿ ಕಾಣುತ್ತಿರುವ ವೃದ್ಧ ಮಹಿಳೆಗೆ 70 ವರ್ಷ ವಯಸ್ಸು ಎಂದು ಹೇಳಲಾಗುತ್ತದೆ. ತನ್ನ ಯೌವನಾವಸ್ಥೆಯಲ್ಲಿ ಟೂರ್ - ಟ್ರಾವೆಲ್ ಮಾಡಲು ಕೂಡ ಸೋಮಾರಿತನ ತೋರುವ ಯುವಕರ ಈ ಕಾಲದಲ್ಲಿ 70ರ ಹರೆಯದ ಈ ಅಜ್ಜಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನದಿಗೆ ಧುಮುಕಿ ಸಲೀಸಾಗಿ ಈಜುತ್ತಿರುವುದನ್ನು ನೀವು ನೋಡಬಹುದು.

ಈಜುತ್ತಾ ದಡ ತಲುಪಿದ ವೃದ್ಧೆ
ಮಹಿಳೆ ಹರ್ ಕಿ ಪೌಡಿ ಸೇತುವೆಯಿಂದ ಗಂಗಾನದಿಗೆ ಧುಮುಕುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಇದಾದ ಬಳಿಕ ಮಹಿಳೆ ಸಲೀಸಾಗಿ ದಡದವರೆಗೂ ಈಜುತ್ತಿರುವುದು ನೀವು ನೋಡಬಹುದು. ಅಜ್ಜಿಯ ಈ ಧೈರ್ಯಕ್ಕೆ ನೆಟ್ಟಿಗರಿಂದ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ-Viral Video : ಸ್ಪೋರ್ಟ್ಸ್ ಬೈಕ್ ಮೇಲೆ ದೈತ್ಯ ಹೆಬ್ಬಾವಿನ ಸವಾರಿ ..!

ಎಲ್ಲರನ್ನು ತನ್ನ ಅಭಿಮಾನಿಯಾಗಿಸಿದ ಅಜ್ಜಿ
ಈ ವಿಡಿಯೋ ವಿಕ್ಷೀಸಿದ ಪ್ರತಿಯೊಬ್ಬರೂ ಅಜ್ಜಿಯ ಫ್ಯಾನ್ ಆಗುತ್ತಿದ್ದಾರೆ. ಇನ್ನೊಂದೆಡೆ ಈ ವಯಸ್ಸಿನಲ್ಲಿ ನದಿಗೆ ಧುಮುಕಿ ಸುಲಭವಾಗಿ ಈಜಿ ದಡಸೇರುವ ಮೂಲಕ ಯುವ ಜನರಿಗೆ ಅಜ್ಜಿ ಭಾರಿ ಸಂದೇಶವನ್ನೇ ನೀಡಿದ್ದಾಳೆ. ಈ ವಿಡಿಯೋ ಜನರಿಗೆ ಎಷ್ಟೊಂದು ರಂಜಿಸಿದೆಯೋ ಅಷ್ಟೇ ಆಶರ್ಯಕ್ಕೆ ಈಡು ಕೂಡ ಮಾಡಿದೆ. ಈ ವಿಡಿಯೋವನ್ನು ವೀಕ್ಷಿಸಿದ ಜನರು ತಮ್ಮ ಕಣ್ಣುಗಳನ್ನು ತಾವೇ ನಂಬುತ್ತಿಲ್ಲ. 

ಇದನ್ನೂ ಓದಿ-ಈ ನದಿಯಲ್ಲಿ ಹೇರಳವಾಗಿ ಸಿಗುತ್ತೆ ಚಿನ್ನ: ಗೋಲ್ಡನ್‌ ನದಿಯಿಂದ ಜೀವನ ಸಾಗಿಸುತ್ತಾರೆ ಇಲ್ಲಿನ ಜನ

ಭಾರಿ ವೈರಲ್ ಆಗಿದೆ ಈ ವಿಡಿಯೋ
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಆಗಿರುವ ಟ್ವಿಟ್ಟರ್ ಮೇಲೆ ಹಂಚಿಕೊಳ್ಳಲಾಗಿದೆ. ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು 9 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಕೇವಲ 24 ಸೆಕೆಂಡ್ ಕಾಲಾವಧಿಯ ಈ ವಿಡಿಯೋ, ಅಜ್ಜಿಗೆ ಭಾರಿ ಪ್ರಸಿದ್ಧಿಯನ್ನು ತಂದು ಕೊಟ್ಟಿದೆ. ಅಷ್ಟೇ ಅಲ್ಲ ಜನರು ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News