ಸ್ಕೂಟರ್ ಮೇಲೆ ಯುವತಿಯ ಈ ಸ್ಟಂಟ್ ನೋಡಿ ನೆಟ್ಟಿಗರು ಎನನ್ನುತ್ತಿದ್ದಾರೆ ಗೊತ್ತಾ?

Viral Video: ಈ ವಿಡಿಯೋದಲ್ಲಿ ಯುವತಿಯೊರ್ವಳು ಬಾಲಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿರುವುದನ್ನು ನೀವು ನೋಡಬಹುದು. ಆಕೆ ಸ್ಕೂಟರ್ ನ ಹಿಂಬದಿಯಲ್ಲಿ ಕುಳಿತಿದ್ದಾಳೆ. ಅವರ ಕೈಯಲ್ಲಿ ಒಂದು ದೊಡ್ಡ ಸೂಟ್‌ಕೇಸ್ ಮತ್ತು ಇನ್ನೊಂದು ಕೈಯಲ್ಲಿ ಬಿಯರ್ ಬಾಟಲಿ ಇದೆ. (Viral News In Kannada)  

Written by - Nitin Tabib | Last Updated : Dec 5, 2023, 06:41 PM IST
  • ವೈರಲ್ ಆಗಿರುವ ವಿಡಿಯೋಗೆ ಜನ ಸಖತ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ,
  • 'ಶೌಕ್ ಬಡಿ ಚೀಜ್ ಹೈ (ಹವ್ಯಾಸವು ಒಂದು ದೊಡ್ಡ ವಿಷಯವಾಗಿದೆ)' ಎಂದಿದ್ದಾರೆ, 'ಇಂತಹ ಜನರಿಗೆ ತಮ್ಮ ಜೀವದ ಪರಿವೆ ಇರುವುದಿಲ್ಲ ಎಂದು' ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
  • ಮೂರನೇ ಬಳಕೆದಾರೆ, 'ಹವ್ಯಾಸಕ್ಕಾಗಿ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಲಾಗಿದೆ' ಎಂದು ಬರೆದಿದ್ದಾರೆ.
ಸ್ಕೂಟರ್ ಮೇಲೆ ಯುವತಿಯ ಈ ಸ್ಟಂಟ್ ನೋಡಿ ನೆಟ್ಟಿಗರು ಎನನ್ನುತ್ತಿದ್ದಾರೆ ಗೊತ್ತಾ? title=

ಬಾಲಿ: ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಕೆಲ ವಿಡಿಯೋಗಳನ್ನು ನೋಡಿದರೆ, ಕಣ್ಣುಗಳು ಸ್ಥಬ್ದಗೊಳ್ಳುತ್ತವೆ. ಇಂತಹ ವೀಡಿಯೊಗಳು ನಿಮ್ಮನ್ನು ಒಂದಿಷ್ಟು ಯೋಚಿಸಲು ಒತ್ತಾಯಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಬಾಲಿ ದ್ವೀಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಒಂದು ಕೈಯಲ್ಲಿ ಸೂಟ್‌ಕೇಸ್‌ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಬಿಯರ್‌ ಕುಡಿಯುತ್ತಾ ವೇಗವಾಗಿ ಸ್ಕೂಟರ್ ಮೇಲೆ ಸಾಗುತ್ತಿರುವುದನ್ನು ನೀವು ನೋಡಬಹುದು. ವೈರಲ್ ಆಗಿರುವ ವೀಡಿಯೋ ನೋಡಿದ ಜನರು ನಿಬ್ಬೆರಬಾಗಿದ್ದಾರೆ ಮತ್ತು  ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಯುವತಿ ಹೆಲ್ಮೆಟ್ ಕೂಡ ಹಾಕಿಲ್ಲ ಎನ್ನುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಪ್ರಸ್ತುತ ಜನರು ಈ ವೀಡಿಯೊವನ್ನು ವೇಗವಾಗಿ ಹಂಚಿಕೊಳ್ಳುತ್ತಿದ್ದಾರೆ. (Viral News In Kannada)

ವೈರಲ್ ಆಗುತ್ತಿರುವ ಬಾಲಿ ದ್ವೀಪದ ಈ ವಿಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯಲ್ಲಿ ಸ್ಕೂಟರ್ ಮೇಲೆ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಆಕೆ ಸ್ಕೂಟರ್ ಹಿಂಬದಿಯಲ್ಲಿ ಕುಳಿತಿದ್ದಾಳೆ. ಆಕೆಯ ಒಂದು ಕೈಯಲ್ಲಿ ಒಂದು ದೊಡ್ಡ ಸೂಟ್‌ಕೇಸ್ ಮತ್ತು ಇನ್ನೊಂದು ಕೈಯಲ್ಲಿ ಬಿಯರ್ ಬಾಟಲಿ ಇದೆ. ಅವಳು ಸಂತೋಷದಿಂದ ಬಿಯರ್ ಕುಡಿಯುತ್ತಿದ್ದಾಳೆ. ಈ ದೃಶ್ಯವನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಹುಡುಗಿ ತನ್ನ ಪ್ರಾಣದ ಬಗ್ಗೆ ಕಾಳಜಿ ವಹಿಸದಿರುವುದು ಇಲ್ಲಿ ಮಾತೊಂದು ದೊಡ್ಡ ವಿಷಯ. ಆಕೆ ಹೆಲ್ಮೆಟ್ ಕೂಡ ಧರಿಸಿಲ್ಲ. ಈ ವೀಡಿಯೋ ನೋಡಿದ ಜನ ಈಗ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 

ಇದನ್ನೂ ಓದಿ-ಇಂಥಾ ರೆಸ್ಟೋರೆಂಟ್‌ ನೀವು ಲೈಫಲ್ಲೆ ನೋಡಿರಲಿಕ್ಕಿಲ್ಲ, ಒಳಹೊದ್ರೆ ವೇಟ್ರೆಸ್ ಏನ್ ಮಾಡ್ತಾಳೆ ಗೊತ್ತಾ!

ವೈರಲ್ ವಿಡಿಯೋ  ಜನರ ಪ್ರತಿಕ್ರಿಯೆ ಹೀಗಿದೆ
ವೈರಲ್ ಆಗಿರುವ ವಿಡಿಯೋಗೆ ಜನ ಸಖತ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಶೌಕ್ ಬಡಿ ಚೀಜ್ ಹೈ (ಹವ್ಯಾಸವು ಒಂದು ದೊಡ್ಡ ವಿಷಯವಾಗಿದೆ)' ಎಂದಿದ್ದಾರೆ,  'ಇಂತಹ ಜನರಿಗೆ ತಮ್ಮ ಜೀವದ ಪರಿವೆ ಇರುವುದಿಲ್ಲ ಎಂದು' ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಮೂರನೇ ಬಳಕೆದಾರೆ, 'ಹವ್ಯಾಸಕ್ಕಾಗಿ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಲಾಗಿದೆ' ಎಂದು ಬರೆದಿದ್ದಾರೆ.

ಇದನ್ನೂ ಓದಿ-ಸ್ಕೈ ಡೈವಿಂಗ್ ಅಲ್ಲ, ಐಸ್ ಡೈವಿಂಗ್ ನ ಈ ವಿಡಿಯೋ ಭಾರಿ ಚಳಿಯಲ್ಲಿಯೂ ಬೆವರಿಳಿಸುವಂತಿದೆ!

ಈ ವೈರಲ್ ವಿಡಿಯೋವನ್ನು ನೀವೂ ನೋಡಿ...

 
 
 
 

 
 
 
 
 
 
 
 
 
 
 

A post shared by Anne Malambo (@annethenomad)

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News