ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿ

Laughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.   

Written by - Ranjitha R K | Last Updated : Aug 20, 2024, 10:28 AM IST
  • ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
  • ಇವುಗಳ ಪೈಕಿ ಕೆಲವೊಂದು ವಿಡಿಯೋಗಳು ನಂಬುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತೆ ಇರುತ್ತವೆ.
  • ಹಾವಿಗೆ ಸಂಬಂಧ ಪಟ್ಟ ಈ ವಿಡಿಯೋದಿಂದ ಇಂಟರ್ ನೆಟ್ ನಲ್ಲಿ ಸಂಚಲನ
ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿ   title=

Laughing snake video : ಸೋಶಿಯಲ್ ಮಿಡಿಯಾದಲ್ಲಿ ಒಂದು ಸಣ್ಣ ತುಂಡು ವಿಡಿಯೋ ಹಾಕಿದರೂ ಸಾಕು ಅದು ಶರ ವೇಗದಲ್ಲಿ ಜನರನ್ನು ತಲುಪಿ ಬಿಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.ಇವುಗಳ ಪೈಕಿ ಕೆಲವೊಂದು ವಿಡಿಯೋಗಳು ನಂಬುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತೆ ಇರುತ್ತವೆ.  ಒತ್ತಡದ ಬದುಕಿನ ಮಧ್ಯೆ ಒತ್ತಡವನ್ನು ಮರೆತು ಸ್ವಲ್ಪ ರಿಲಾಕ್ಸ್ ಆಗಲು ಕೂಡಾ ಈ ವಿಡಿಯೋಗಳು ಸಹಾಯ ಮಾಡುತ್ತದೆ.ಇತ್ತೀಚಿನ ದಿನಗಳಲ್ಲಿ,ಹಾವುಗಳ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.ಇದೀಗ ಹಾವಿಗೆ ಸಂಬಂಧ ಪಟ್ಟ ಈ ವಿಡಿಯೋ ಕೂಡಾ ಇಂಟರ್ ನೆಟ್ ನಲ್ಲಿ ಸಂಚಲನ ಉಂಟು ಮಾಡಿದೆ. 

ಹಾವಿಗೂ ಕಚಕುಳಿ : 
ಈ ಹಾವಿನ ವಿಡಿಯೋ ನೋಡುವಾಗ ನಾವು ಕೂಡಾ ಬಿದ್ದುಬಿದ್ದು ನಗುವಂತೆ ಮಾಡುತ್ತದೆ. ನಾವು ಮುಟ್ಟಿದರೆ ಮುನಿ ಸಸ್ಯವನ್ನು ನೋಡಿರುತ್ತವೆ.ಆ ಸಸ್ಯದ ಎಲೆಯನ್ನು ಮುಟ್ಟಿದ ಕೂಡಲೇ ಅದು ಮುದುಡಿಕೊಳ್ಳುತ್ತದೆ. ಹಾಗೆಯೇ ಈ ಹಾವು ಮುಟ್ಟಿದರೆ ನಗು ಎನ್ನುವ ಹಾಗೆ. ಈ ಹಾವನ್ನು ಮುಟ್ಟಿದರೆ ಸಾಕು  ಕಚಕುಳಿ ಆದಂತೆ ಹಾವು ಪ್ರತಿಕ್ರಿಯೆ ನೀಡುತ್ತದೆ. ಈ ವೇಳೆಯಲ್ಲಿ ಅದು  ಬಾಯಿ ಬಿಟ್ಟು ಉಲ್ಟಾ ಆಗುವ ರೀತಿ ನೋಡಿದರೆ ಜೋರು ನಗುವ ರೀತಿಯಲ್ಲಿಯೇ ಭಾಸವಾಗುತ್ತದೆ. 

ಇದನ್ನೂ ಓದಿ : Viral Video: ಯಾವತ್ತಾದರೂ ಬಿಳಿ ನವಿಲು ನೋಡಿದ್ದೀರಾ? ಸಂಗಾತಿ ಒಲಿಸಲು ಗರಿಬಿಚ್ಚಿ ಕುಣಿದ ಶ್ವೇತ ಮಯೂರದ ಅಪರೂಪದ ವಿಡಿಯೋ ವೈರಲ್ 

ನಗುವ ಹಾವು : 
ಇಲ್ಲಿ ನೆಲದ ಮೇಲೆ ತನ್ನ ಪಾಡಿಗೆ ಹರಿದಾಡಿಕೊಂಡು ಹೋಗುತ್ತಿರುವ ಹಾವನ್ನು ಕಾಣಬಹುದು.ಹೀಗೆ ಹರಿದಾಡುತ್ತಿದ್ದ ಹಾವಿನ  ಹೊಟ್ಟೆಯ ಭಾಗವನ್ನು ವ್ಯಕ್ತಿಯೊಬ್ಬರು ಮುಟ್ಟುತ್ತಾರೆ.ಆಗ ಹಾವು ನೀಡುವ ಪ್ರತಿಕ್ರಿಯೆಯೇ ಇಲ್ಲಿ ಹೈ ಲೈಟ್. 

 

ಇದನ್ನೂ ಓದಿ : ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋ

ಹಾವು ಈ ರೀತಿ ನಗುವ ವೀಡಿಯೊವನ್ನು ಇಲ್ಲಿಯವರೆಗೆ ವಿವಿಧ  ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿದೆ.ಇದನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಕೂಡಾ ಮಾಡಿದ್ದಾರೆ.ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.ಈ ಹಾವು ಯಾವುದು? ಇದು ವಿಷಕಾರಿಯೇ ಎನ್ನುವ ಬಗ್ಗೆ ಮಾಹಿತಿ ಇಲ್ಲ. 
 
ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ :  
ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ.ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.ಅನೇಕರು ಈ ವಿಡಿಯೋ ನೋಡಿ ತಮಾಷೆಯಾಗಿ ಕಾಮೆಂಟ್‌ಗಳನ್ನು ಕೂಡಾ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News