Coastal Friends Group Trip For Patients: ಕರ್ನಾಟಕ ಗೆಳೆಯರ ಬಳಗವು ಒಂದು 'ಕರಾವಳಿ ಸ್ನೇಹಿತರು' ಎಂದು ಗುಂಪು ಅನಾರೋಗ್ಯದಿಂದ ಹಾಸಿಗೆಗೆ ಸೀಮಿತರಾದ ಆರು ಜನರಿಗೆ ಅತ್ಯಂತ ವಿಶಿಷ್ಟವಾದ ಮತ್ತು ಹೃದಯ ಸ್ಪರ್ಶಿಸುವ ದಿನವನ್ನು ಏರ್ಪಡಿಸಿತ್ತು. ಇದು ಅವರ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದು ಮತ್ತು ಇದು ರೋಗಿಗಳಿಗೆ ನಿಜವಾಗಿಯೂ ಖುಷಿಯ ತಂದು ಕೊಟ್ಟಿದೆ. ಮೊದಲನೆಯದಾಗಿ, ಆರು ಆಂಬ್ಯುಲೆನ್ಸ್‌ಗಳನ್ನು ಕಾಯ್ದಿರಿಸಲಾಯಿತು ಮತ್ತು ಈ ರೋಗಿಗಳನ್ನು ಸ್ಟ್ರೆಚರ್‌ಗಳು ಮತ್ತು ಗಾಲಿಕುರ್ಚಿಗಳಲ್ಲಿ ಸ್ಥಳಾಂತರಿಸಲಾಯಿತು. ನಂತರ ಯುವಕರ ಗುಂಪುಗಳು ಅವರನ್ನು ಎತ್ತಿಕೊಂಡು ಆಂಬ್ಯುಲೆನ್ಸ್‌ನಿಂದ ದೋಣಿಗೆ ಮತ್ತು ನಂತರ ಉದ್ಯಾನವನಗಳು ಮತ್ತು ಮಾಲ್‌ಗಳಿಗೆ ಸ್ಥಳಾಂತರಿಸಿದವು.
ಅನಾರೋಗ್ಯದಿಂದ ತಮ್ಮ ಹಾಸಿಗೆ ಹಿಡಿದ ರೋಗಿಗಳನ್ನು ʼಸಾಂತ್ವಾನ ಸಂಚಾರʼ ಎಂದು ಪಿಲಿಕುಳ ನಿಸರ್ಗಧಾಮ, ತಣ್ಣೀರುಬಾವಿ ಬೀಚ್ ಮತ್ತು ನೆಕ್ಸಸ್ ಮಾಲ್‌ಗೆ ಕರೆದೊಯ್ದು ಒಂದು ಇಡೀ ದಿನದ ಪ್ರವಾಸವು ನಡೆಯಿತು. ಆ ದಿನದ ಕೊನೆಯಲ್ಲಿ ಮಾಲ್‌ನಲ್ಲಿ ಶಾಪಿಂಗ್ ಮಾಡಲು ಕುಟುಂಬಗಳಿಗೆ ತಲಾ 5,000 ರೂ ನೀಡಲಾಯಿತು. ದಾರಿಯುದ್ದಕ್ಕೂ ಅವರೆಲ್ಲರೂ ಹಾಡುತ್ತಾ ಕುಣಿಯುತ್ತಾ ಇಡೀ ಪರಿಸರವನ್ನು ಹೆಚ್ಚು ಉತ್ಸಾಹಭರಿತವಾಗಿಸಿದರು.ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಹಾಸಿಗೆ ಹಿಡಿದರೆ, ಇಡೀ ಕುಟುಂಬವು ನರಳುತ್ತದೆ. ಅದು ಇವರಲ್ಲ ತಮ್ಮ ಆರೋಗ್ಯ ಸಮಸ್ಯಯಿಂದ ಗೆದ್ದಿದ್ದೆ ಹೆಚ್ಚು.
ಇದನ್ನು ಓದಿ: Rain alert: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!
ʼಕರಾವಳಿ ಸ್ನೇಹಿತರುʼ ಕೋಸ್ಟಲ್ ಫ್ರೆಂಡ್ಸ್ ಸಂಸ್ಥಾಪಕ ಶರೀಫ್ ಅಬ್ಬಾಸ್ "ನಾವು ಇಡೀ ದಿನದ ಪಿಕ್ನಿಕನ್ನು ಯೋಜಿಸಿದ್ದು ಮತ್ತು ಒಂದು ತಿಂಗಳಿನಿಂದಲೇ ತಯಾರಿಯನ್ನು ಪ್ರಾರಂಭಿಸಿದ್ದೇವೆ. ನಾವು ವೈದ್ಯಕೀಯ ಸೌಲಭ್ಯವನ್ನು ಮತ್ತು ಅಂತಹ ಇತರ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಯೋಚಿಸಿ ಕಾರ್ಯಗತಗೊಳಿಸಲಾಯಿತು. ಮಂಗಳೂರಿನ ಪೆರ್ನೆ, ಕಲ್ಲಾಪು, ಕುತ್ತಾರ್, ತೊಕ್ಕೊಟ್ಟು, ಉಳ್ಳಾಲ ಪ್ರದೇಶಗಳಿಂದ ತಲಾ ಒಬ್ಬೊಬ್ಬ ರೋಗಿಯನ್ನು ಆಯ್ಕೆ ಮಾಡಿದ್ದೇವೆ. ರೋಗಿಗಳಿಗೆ ಮಾತ್ರವಲ್ಲದೆ ಮತ್ತು ಅವರ ಕುಟುಂಬಗಳಿಗೆ, ,ನಮ್ಮೆಲ್ಲರಿಗೂ ಉತ್ತಮ ದಿನವಾಗಿ ಹೋಯಿತು” ಎಂದು ಹೇಳಿದರು.
ಆ ಟ್ರೀಪ್‌ನಲ್ಲಿ ಇದ್ದ 25 ವರ್ಷಗಳಿಂದ ಹಾಸಿಗೆಗೆ ಸೀಮಿತವಾಗಿರುವ ರೋಗಿಯೊಬ್ಬರು, "ಇಷ್ಟು ವರ್ಷಗಳ ನಂತರ ಈಗ ನನಗೆ ದೀಪಾವಳಿ ನಿಜವಾಗಿಯೂ ಪ್ರಕಾಶಮಾನವಾಗಿ ಕಾಣುತ್ತಿದೆ. ಇಲ್ಲದಿದ್ದರೆ, ನನ್ನ ಹಾಸಿಗೆಯಲ್ಲಿ ಇನ್ನೊಂದು ದಿನವಾಗಿ ಕಳೆದು, ನಾನು ಜೀವಂತವಾಗಿದ್ದೇನೆ ಎಂದು ನನ್ನ ತಾಯಿ ನನಗೆ ನೆನಪಿಸಬೇಕಾಗಿರುತ್ತಿತ್ತು ”ಎಂದು ಇನ್ನೊಬ್ಬ ರೋಗಿ ಹೇಳಿದರು.
ಇದನ್ನು ಓದಿ: ವಿಮೆ ಹಣ ನಿರಾಕರಿಸಿದ ವಿಮಾ ಕಂಪನಿಗೆ ರೂ. 2 ಲಕ್ಷ 40 ಸಾವಿರ ದಂಡ
ಅಲ್ಲಿದ್ದ ಮತ್ತೊಬ್ಬ ರೋಗಿಯು "ನಾನು ಕಟ್ಟಡದ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದಾಗ ಒಂದು ದಿನ ಭಾರವಾದ ಕಾಂಕ್ರೀಟ್ ಬ್ಲಾಕ್ ನನ್ನ ಮೇಲೆ ಬಿದ್ದು ನನ್ನ ಬೆನ್ನುಹುರಿಯ ನರಕ್ಕೆ ಹಾನಿಯಾಗಿತು. ನನ್ನ ಜೀವಿತಾವಧಿಯಲ್ಲಿ ನನ್ನ ಹಾಸಿಗೆಗೆ ನನ್ನನ್ನು ಸೀಮಿತವಾಯಿತು. 18 ವರ್ಷಗಳು ಕಳೆದಿವೆ ಮತ್ತು ಸುಮಾರು 6 ವರ್ಷಗಳಿಂದ ನಾನು ನನ್ನ ಮನೆಯಿಂದ ಹೊರಗೆ ಬಂದಿಲ್ಲ. ಆದರೆ, ಇವತ್ತು ನನ್ನ ಜೀವನದಲ್ಲಿ ಮರೆಯಲಾಗದ ದಿನ” ಎಂದು ಕರ್ನಾಟಕದ ದಕ್ಷಿಣ ಕನ್ನಡದ ಅರವಿಂದ ಹೇಳಿದರು. ಸಂಘಟಕರು ಮತ್ತು ಸ್ವಯಂಸೇವಕರು ಒಂದು ದಿನವಾದರೂ ಈ ಜನರಿಗೆ ಏನಾದರೂ ಮಾಡಬಹುದೆಂದು ಸಂತೋಷಪಡುತ್ತಾರೆ ಮತ್ತು ಭವಿಷ್ಯದಲ್ಲಿ ಇನ್ನೂ ಅನೇಕರು ಇದನ್ನು ಅನುಸರಿಸುತ್ತಾರೆ ಎಂದು ಭಾವಿಸುತ್ತೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.