King Cobra Shocking Video: ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ದೊಡ್ದವರೇ ಆಗಲಿ ಅಥವಾ ಚಿಕ್ಕವರೇ ಆಗಲಿ ಜನ ಹಾವಿಗೆ ತುಂಬಾ ಹೆದರುತ್ತಾರೆ, ಆದರೆ ಕೆಲವರು ಹಾವನ್ನು ತಮ್ಮ ಕೈಯಲ್ಲಿ ಹಿಡಿಯುತ್ತಾರೆ ಮತ್ತು ಅದನ್ನು ಕೊರಳಿಗೆ ಕೂಡ ಹಾಕಿಕೊಳ್ಳುತ್ತಾರೆ. ಅವರು ಯಾವುದೇ ಭಯವಿಲ್ಲದೆ ಅವರನ್ನು ಹಿಡಿದುಕೊಳ್ಳುತ್ತಾರೆ. ಈ ಜನರಿಗೆ ಹಾವು ಎಂದರೆ ತುಂಬಾ ಇಷ್ಟ. ಹಾಗೆ ನೋಡಿದರೆ ಬಹುತೇಕ ಎಲ್ಲಾ ಪ್ರಜಾತಿಯ ಹಾವುಗಳು ತುಂಬಾ ಅಪಾಯಕಾರಿಯಾಗಿರುತ್ತವೆ, ಆದರೆ ಕೆಲವು ವಿಷಕಾರಿಯಲ್ಲ ಎಂದೂ ಕೂಡ ಹೇಳಲಾಗುತ್ತದೆ. ಕಿಂಗ್ ಕೋಬ್ರಾ ಅಥವಾ ಕಾಳಿಂಗ ಸರ್ಪ ಎಲ್ಲಾ ಹಾವುಗಳ ಪ್ರಜಾತಿಯಲ್ಲಿ ಅತ್ಯಂತ ಅಪಾಯಕಾರಿಯಾಗಿದೆ, ಇದರ ಕಚ್ಚುವಿಕೆಯು ಯಾವುದೇ ವ್ಯಕ್ತಿಯ ಉಸಿರನ್ನು ಕೆಲವೇ ನಿಮಿಷಗಳಲ್ಲಿ ನಿಲ್ಲಿಸಿಬಿಡುತ್ತದೆ. ಇಂತಹ ಹಾವುಗಳಿಂದ ಜನರು ದೂರವಿರಲು ಬಯಸುತ್ತಾರೆ. ಕಿಂಗ್ ಕೋಬ್ರಾ ಹಾವಿನ ವಿದಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಕಿಂಗ್ ಕೋಬ್ರಾ ವೈರಲ್ ವಿಡಿಯೋ ಇಲ್ಲಿದೆ
ಆದರೆ, ಹಾವುಗಳೆಂದರೆ ಭಯಪಡದ ಅನೇಕ ಜನರಿದ್ದಾರೆ. ಅಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಹುಡುಗಿಯೊಬ್ಬಳು ಅಪಾಯಕಾರಿ ಕಿಂಗ್ ಕೋಬ್ರಾಗೆ ಕಿಸ್ ಮಾಡಲು ಪ್ರಯತ್ನಿಸುತ್ತಿರುವುದನ್ನು ನೀವು ಗಮನಿಸಬಹುದು. ಹೌದು, ನಂಬಲಸಾಧ್ಯವಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹುಡುಗಿ ಜನರ ಗುಂಪಿನ ಮುಂದೆ ವೇದಿಕೆಯ ಮೇಲೆ ಕಿಂಗ್ ಕೋಬ್ರಾವನ್ನು ಚುಂಬಿಸಲು ಪ್ರಯತ್ನಿಸುತ್ತಾಳೆ. ಬಾಲಕಿಯ ಕೈಯಲ್ಲಿ ಕಪ್ಪು ಬಟ್ಟೆಯೂ ಕಾಣಿಸುತ್ತಿದೆ. ಹುಡುಗಿ ಹಾವಿನ ಗಮನವನ್ನು ಬಟ್ಟೆಯತ್ತ ಸೆಳೆಯುತ್ತಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ-ಅರಬ್ಬಿ ಸಮುದ್ರದಲ್ಲಿ ಮುಳುಗಿದ ಭಾರತೀಯ ಹಡಗು, 9 ಸಿಬ್ಬಂದಿಯನ್ನು ರಕ್ಷಿಸಿದ ಪಾಕಿಸ್ತಾನ!
ವೇದಿಕೆಯ ಮೇಲೆಯೇ ಕಾಳಿಂಗ ಸರ್ಪವನ್ನು ಚುಂಬಿಸಿದ ಯುವತಿ
ನಂತರ ಹುಡುಗಿ ನಿಧಾನವಾಗಿ ಹೆಡೆ ಎತ್ತಿ ನಿಂತ ನಾಗರಾಜನ ಬಳಿಗೆ ಹೋಗಿ ಮುದ್ದಾಡುತ್ತಾಳೆ. ಆದರೆ ಹಾವಿನ ಗಮನ ಕಪ್ಪು ಬಟ್ಟೆಯ ಮೇಲೆಯೇ ಇದ್ದುದರಿಂದ ಬಾಲಕಿಗೆ ಹಾವು ಏನೂ ಮಾಡುವುದಿಲ್ಲ. ಹುಡುಗಿ ಎರಡನೇ ಬಾರಿಗೆ ಕಿಂಗ್ ಕೋಬ್ರಾಗೆ ಮುತ್ತಿಕ್ಕುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಆದರೆ, ಇಷ್ಟಾದರೂ ಕೂಡ ಕಿಂಗ್ ಕೋಬ್ರಾ ಬಾಲಕಿಗೆ ಯಾವುದೇ ರೀತಿಯ ಹಾನಿ ತಲುಪಿಸುವುದಿಲ್ಲ. ವಿಡಿಯೋದಲ್ಲಿ ಬಾಲಕಿಯ ಧೈರ್ಯವನ್ನು ನೋಡಿ ಸುತ್ತಮುತ್ತಲಿನವರೂ ಚಪ್ಪಾಳೆ ತಟ್ಟುತ್ತಿದ್ದಾರೆ.
ಇದನ್ನೂ ಓದಿ-ನೇಪಾಳ-ಚೀನಿ ಭಾಯಿ ಭಾಯಿ....ಭಾರತಕ್ಕೆ ಟಾರ್ಗೆಟ್ ಮಾಡಿದ ಡ್ರ್ಯಾಗನ್..!
ಅಂತರ್ಜಾಲದಲ್ಲಿ ಈ ವಿಡಿಯೋ ನೋಡಿ ದಂಗಾದ ನೆಟ್ಟಿಗರು
ಕಿಂಗ್ ಕೋಬ್ರಾ ಚುಂಬಿಸುವ ಈ ವೀಡಿಯೊವನ್ನು Instagram ಪುಟ world_of_snakes_ ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊ ಇಲ್ಲಿಯವರೆಗೆ 30.9k ಲೈಕ್‌ಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಹಲವು ಮಂದಿ ವಿಡಿಯೋ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.