ಹಿಜಾಬ್ ವಿರೋಧಿ ಪ್ರತಿಭಟನೆಗೆ ಸ್ಕಾರ್ಫ್ ಇಲ್ಲದೆ ಬಂದ ಸುಂದರಿ: ಶೂಟ್ ಮಾಡಿ ಕೊಂದೇಬಿಟ್ಟ ಪೊಲೀಸ್!

22 ವರ್ಷದ ಮಹ್ಸಾ ಅಮಿನಿ ಎಂಬಾಕೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ನಂತರ ದೇಶ ಮತ್ತು ವಿಶ್ವದ ಇತರ ಭಾಗಗಳಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿದೆ. ಈ ಪ್ರಕರಣ ಇರಾನ್‌ನಲ್ಲಿ ದೊಡ್ಡ ಅಶಾಂತಿ ವಾತಾವರಣ ಸೃಷ್ಟಿಸಿದೆ.

Written by - Bhavishya Shetty | Last Updated : Sep 28, 2022, 05:03 PM IST
    • ಹಿಜಾಬ್ ವಿರೋಧಿ ಪ್ರತಿಭಟನೆಗೆ ಬರುತ್ತಿದ್ದ ಇರಾನ್ ಮಹಿಳೆ ಮೇಲೆ ಗುಂಡಿನ ದಾಳಿ
    • ಈ ಪ್ರಕರಣ ಇರಾನ್‌ನಲ್ಲಿ ದೊಡ್ಡ ಅಶಾಂತಿ ವಾತಾವರಣ ಸೃಷ್ಟಿಸಿದೆ
    • ಆಕೆಯ ಹೊಟ್ಟೆ, ಕುತ್ತಿಗೆ, ಹೃದಯ ಮತ್ತು ಕೈಗೆ ಗುಂಡು ಹಾರಿಸಲಾಗಿದೆ
ಹಿಜಾಬ್ ವಿರೋಧಿ ಪ್ರತಿಭಟನೆಗೆ ಸ್ಕಾರ್ಫ್ ಇಲ್ಲದೆ ಬಂದ ಸುಂದರಿ: ಶೂಟ್ ಮಾಡಿ ಕೊಂದೇಬಿಟ್ಟ ಪೊಲೀಸ್! title=
Anti Hijab Protest

ಹರಡಿರುವ ತನ್ನ ಕೂದಲನ್ನು ಕಟ್ಟಿಕೊಂಡು ಹಿಜಾಬ್ ವಿರೋಧಿ ಪ್ರತಿಭಟನೆಗೆ ಬರುತ್ತಿದ್ದ ಇರಾನ್ ಮಹಿಳೆ ಹದಿಸ್ ನಜಾಫಿಯನ್ನು ಪೊಲೀಸ್ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ. ವರದಿಗಳ ಪ್ರಕಾರ, ಆಕೆಯ ಹೊಟ್ಟೆ, ಕುತ್ತಿಗೆ, ಹೃದಯ ಮತ್ತು ಕೈಗೆ ಗುಂಡು ಹಾರಿಸಲಾಗಿದೆ. ಆಕೆಯ ಅಂತ್ಯಕ್ರಿಯೆಯ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಾಧಿಯ ಪಕ್ಕದಲ್ಲಿ ಅವಳ ಚಿತ್ರವನ್ನು ನೋಡಿ ಹಲವಾರು ವ್ಯಕ್ತಿಗಳು ಅಳುತ್ತಿರುವುದನ್ನು ಕಾಣಬಹುದು. 

ಇದನ್ನೂ ಓದಿ: ಶಿಂಜೋ ಅಬೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ

22 ವರ್ಷದ ಮಹ್ಸಾ ಅಮಿನಿ ಎಂಬಾಕೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ನಂತರ ದೇಶ ಮತ್ತು ವಿಶ್ವದ ಇತರ ಭಾಗಗಳಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿದೆ. ಈ ಪ್ರಕರಣ ಇರಾನ್‌ನಲ್ಲಿ ದೊಡ್ಡ ಅಶಾಂತಿ ವಾತಾವರಣ ಸೃಷ್ಟಿಸಿದೆ. ದೇಶದ ಕಾನೂನಿನ ಪ್ರಕಾರ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂಬುದರ ವಿರುದ್ಧ ಮಾತನಾಡಿದ್ದ ಅಮಿನಿಯನ್ನು ಬಂಧಿಸಲಾಗಿತ್ತು.

ಈ ವಾರಾಂತ್ಯದಲ್ಲಿ ನೂರಾರು ಜನರು ಮಹ್ಸಾ ಅಮಿನಿಯ ಸಾವಿನ ವಿರುದ್ಧ ಲಂಡನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಅಮಿನಿ ಸೆಪ್ಟೆಂಬರ್ 16 ರಂದು ನಿಧನರಾದರು.

ವೈದ್ಯಕೀಯ ಪುರಾವೆಗಳ ಪ್ರಕಾರ ಯುವತಿಯ ತಲೆ ಭಾಗಕ್ಕೆ ಬಲವಾದ ಪೆಟ್ಟುಗಳು ಬಿದ್ದಿವೆ ಎಂದು ಹೇಳಿವೆ. ಆದರೆ ಇರಾನ್‌ನ ಅಧಿಕಾರಿಗಳು ಆಕೆ "ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ” ಎಂದು ವರದಿ ಮಾಡಿದೆ. 

ಇದನ್ನೂ ಓದಿ: ಮಿಲಿಟರಿ ದಂಗೆಯ ವದಂತಿಗಳ ನಡುವೆ ಕಾಣಿಸಿಕೊಂಡ ಜಿನ್ಪಿಂಗ್, ವಿಡಿಯೋ ನೋಡಿ...!

1979 ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್‌ನಲ್ಲಿ ಕಾನೂನಿನ ಪ್ರಕಾರ ಮಹಿಳೆಯರು ಹಿಜಾಬ್ ಧರಿಸಬೇಕು. ಈ ನೀತಿಯು ಹೆಚ್ಚು ಜನಪ್ರಿಯವಾಗಿಲ್ಲ, ಇರಾನಿನ ಮಹಿಳೆಯರು ಸಾಮಾನ್ಯವಾಗಿ ತಲೆಗೆ ಸ್ಕಾರ್ಫ್ ಅನ್ನು ತಮ್ಮ ಕಿವಿಯ ಸುತ್ತಲೂ ಸಡಿಲವಾಗಿ ಧರಿಸುತ್ತಾರೆ ಅಥವಾ ಕುತ್ತಿಗೆಗೆ ಬಿಡುತ್ತಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News