ಕಷ್ಟದಲ್ಲಿದ್ದ ತನ್ನನು ರಕ್ಷಿಸಿದವನಿಗೆ ಹುಡುಕಿಕೊಂಡು ಬಂದು ನಾಗಮಣಿ ನೀಡಿದನಂತೆ ನಾಗರಾಜ ! ಈ ವಿಡಿಯೋವನ್ನೂ ಒಮ್ಮೆ ನೀಡಿ

100 ವರ್ಷದವರೆಗೆ ಹಾವು ಬದುಕಬಲ್ಲದೆ ಎಂದು ನೀವು ಯೋಚಿಸುತ್ತಿದ್ದರೆ ಖಂಡಿತವಾಗಿಯೂ ಬದುಕಬಲ್ಲದು. ಹಾವು ನೈಸರ್ಗಿಕವಾಗಿ 108 ವರ್ಷಗಳವರೆಗೆ ಬದುಕಬಲ್ಲದು.   

Written by - Ranjitha R K | Last Updated : Oct 15, 2024, 12:52 PM IST
  • ನಾಗರಹಾವು ನಾಗಮಣಿಗಳ ಬಗ್ಗೆ ಬಹಳಷ್ಟು ಕತೆಗಳನ್ನು ಕೇಳಿದ್ದೇವೆ.
  • ಸಿನಿಮಾ ಧಾರಾವಾಹಿಗಳಲ್ಲಿಯೂ ನಾಗಮಣಿಯ ಉಲ್ಲೇಖ
  • ನಾಗಮಣಿ ಎನ್ನುವುದು ವೀಕ್ಷಕರ ನೆಚ್ಚಿನ ವಿಷಯ.
ಕಷ್ಟದಲ್ಲಿದ್ದ ತನ್ನನು ರಕ್ಷಿಸಿದವನಿಗೆ ಹುಡುಕಿಕೊಂಡು ಬಂದು ನಾಗಮಣಿ ನೀಡಿದನಂತೆ ನಾಗರಾಜ ! ಈ ವಿಡಿಯೋವನ್ನೂ ಒಮ್ಮೆ ನೀಡಿ title=

Nagamani Story : ನಾಗರಹಾವು ನಾಗಮಣಿಗಳ ಬಗ್ಗೆ ಬಹಳಷ್ಟು ಕತೆಗಳನ್ನು ಕೇಳಿದ್ದೇವೆ. ಸಿನಿಮಾ ಧಾರಾವಾಹಿಗಳಲ್ಲಿಯೂ ನಾಗಮಣಿಯಾ ಉಲ್ಲೇಖವನ್ನು ನೋಡಿದ್ದೇವೆ. ನಾಗಮಣಿಯ ಕಥಾಹಂದರವಿರುದ ಎಷ್ಟೋ ಸಿನಿಮಾಗಳು ಬಂದು ಹೋಗಿವೆ. ಈಗಲೂ ನಾಗ, ನಾಗಮಣಿ ಎನ್ನುವುದು ವೀಕ್ಷಕರ ನೆಚ್ಚಿನ ವಿಷಯ. 

ಇನ್ನು ಯಾರ ಬಳಿ ನಾಗಮಣಿ ಇರುತ್ತದೆಯೋ ಅವರು ಈ ಭೂಮಿಯ ಶಕ್ತಿ ಶಾಲಿ ಮನುಷ್ಯರಾಗುತ್ತಾನೆ ಎನ್ನುವುದು ಒಂದು ವಾದ. ಒಂದು ನಂಬಿಕೆಯ ಪ್ರಕಾರ 100 ವರ್ಷ ಪುರಾತನ ಹಾವುಗಳು ನಾಗಮಣಿ ಹೊಂದಿರುತ್ತವೆಯಂತೆ. ಈಗ 100 ವರ್ಷದವರೆಗೆ ಹಾವು ಬದುಕಬಲ್ಲದೆ ಎಂದು ನೀವು ಯೋಚಿಸುತ್ತಿದ್ದರೆ ಖಂಡಿತವಾಗಿಯೂ ಬದುಕಬಲ್ಲದು. ಹಾವು ನೈಸರ್ಗಿಕವಾಗಿ 108 ವರ್ಷಗಳವರೆಗೆ ಬದುಕಬಲ್ಲದು. 

ಇದನ್ನೂ ಓದಿ :  Optical Illusion: ಈ ಫೋಟೋದಲ್ಲಿ 6 ರ ಮಧ್ಯೆ ʻ5ʼ ಸಂಖ್ಯೆ ಅಡಗಿ ಕೂತಿದೆ ಎಲ್ಲಿದೆ ಕಂಡುಹಿಡಿಯಬಲ್ಲಿರಾ..? 100 ರಲ್ಲಿ 98 ಜನ ವಿಫಲರಾಗಿದ್ದಾರೆ‌..ನೀವೂ ಒಮ್ಮೆ ಟ್ರೈ ಮಾಡಿ

ಇದೀಗ ಹಾವು ಮತ್ತು ಅದರ ಮಣಿಗೆ ಸಂಬಂಧಿಸಿದ ಸುದ್ದಿಯೊಂದು ಭರ್ಜರಿ ವೈರಲ್ ಆಗಿದೆ. ಇದರ ಪ್ರಕಾರ,ಇದು ಚೀನಾದ ನಗರವೊಂದರಲ್ಲಿ ನಡೆದ ಘಟನೆ.ವಾಂಗ್ ಎನ್ನುವ ವ್ಯಕ್ತಿ ವಾಕಿಂಗ್ ಹೋಗುತ್ತಿದ್ದ ವೇಳೆ ದೈತ್ಯ ಹಾವು ಅವರ ಕಣ್ಣಿಗೆ ಬಿದ್ದಿದೆ. ಅದನ್ನು ಕಂಡ ಕೂಡಲೇ ಅದು ವಯಸ್ಸಾಗಿರುವ ಹಾವು ಎನ್ನುವುದು ಆ ವ್ಯಕ್ತಿಗೆ ಗೊತ್ತಾಗಿದೆ.ಹಾಗಾಗಿ ನೀರಿನಿಂದ ಹೊರಗಿದ್ದ ಈ ಹಾವನ್ನು ವಾಂಗ್ ತೆಗೆದುಕೊಂಡು ಹೋಗಿ ಮತ್ತೆ ನೀರಿಗೆ ಬಿಟ್ಟಿದ್ದಾರೆ.ಆದರೆ ಇದಾದ ಬಳಿಕ ಅನಿರೀಕ್ಷಿತ ಘಟನೆಯೊಂದು ನಡೆದಿದೆ. 

ಕೆಲ ದಿನಗಳ ಬಳಿಕ ಈ ಹಾವು ಮತ್ತೆ ವಾಂಗ್ ಅವರ ಕಣ್ಣಿಗೆ ಬಿದ್ದಿದೆ.ಆದರೆ ಈ ಬಾರಿ ವಾಂಗ್ ಅವರಿಗೆ ಉಡುಗೊರೆ ನೀಡಲೆಂದೇ ಆ ಹಾವು ಬಂದಿತ್ತಂತೆ.ತನ್ನ ಬಾಯಿಯಿಂದ ನಾಗಮಣಿಯನ್ನು ಹೊರ ಹಾಕಿ ವಾಂಗ್ ಗೆ ನೀಡಿದೆಯಂತೆ.ಈ ಕತೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. 

ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಈ ವೈರಲ್ ಸುದ್ದಿ ನೋಡಿದ ಮೇಲೆ ಒಂದು ಬಾರಿ ಈ ವಿಡಿಯೋದತ್ತ ಕೂಡಾ ಗಮನ ಹರಿಸಿ : 

ಇದನ್ನೂ ಓದಿ : Viral Video: ಅದೇನು ನೀವು ಮಾತ್ರಾನಾ ಎಣ್ಣೆ ಕುಡಿಯೋದು..ನಾನು ಹೊಡಿತೀನಿ ನೋಡಿ ಎಂದು ಬಿಯರ್‌ ಬಾಟಲಿ ಕೈಗೆತ್ತಿಕೊಂಡ ಕೋತಿ! ನಂತರ ಆಗಿದ್ದೇನು..? ವಿಡಿಯೋ ನೋಡಿ

ನಿಜವಾಗಿಯೂ ನಾಗಮಣಿ ಇದೆಯೋ ಇಲ್ಲವೋ ಗೊತ್ತಿಲ್ಲ.ನಾಗಮಣಿ ನಿಜವಾಗಿಯೂ ಇದೆ ಎನ್ನುವುದನ್ನು ಇಲ್ಲಿಯವರೆಗೆ ಕಂಡವರಿಲ್ಲ.ಆದರೆ ವಾಂಗ್  ಅವರ ಕತೆ ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. 

(ಸೂಚನೆ :ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಇಲ್ಲಿ ಹೇಳಲಾಗಿದೆ. ಇದರ ಸತ್ಯಾಸತ್ಯತೆಯನ್ನು ಜೀ ಕನ್ನಡ ನ್ಯೂಸ್ ಖಚಿತ ಪಡಿಸುವುದಿಲ್ಲ.)  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News