Viral Video : ಟೀಚರ್ಸ್ ಡೇಯಂದು ಮಕ್ಕಳ ಕೆಲಸದಿಂದ ನೆತ್ತಿಗೇರಿದ ಶಿಕ್ಷಕನ ಕೋಪ, ವಿದ್ಯಾರ್ಥಿಗೆ ಹಿಗ್ಗಾ ಮುಗ್ಗ ಥಳಿತ

Teachers Day Video Viral : ಎಷ್ಟಾದರೂ ಶಿಕ್ಷಕ. ಶಿಸ್ತು ಮೀರಿ ವಿದ್ಯಾರ್ಥಿ ನಡೆದರೆ ಸಹಿಸುವುದು ಸಾಧ್ಯವೇ? ವಿದ್ಯಾರ್ಥಿಯನ್ನು ಮೇಜಿನ ಮೇಲೆ ಬಗ್ಗಿಸಿ ಹಿಗ್ಗಾ ಮುಗ್ಗಾ ಥಳಿಸುತ್ತಾರೆ.  

Written by - Ranjitha R K | Last Updated : Sep 6, 2022, 08:30 AM IST
  • ಸಂಭ್ರಮದಿಂದ ನಡೆಯುತ್ತಿತ್ತು ಶಿಕ್ಷಕರ ದಿನಾಚರಣೆ
  • ವಿದ್ಯಾರ್ಥಿಯ ವರ್ತನೆ ಕಂಡು ನೆತ್ತಿಗೇರಿದ ಶಿಕ್ಷಕನ ಕೋಪ
  • ವೈರಲ್ ಆಯಿತು ಶಿಕ್ಷಕನ ರೌದ್ರಾವತಾರದ ವಿಡಿಯೋ
Viral Video : ಟೀಚರ್ಸ್ ಡೇಯಂದು ಮಕ್ಕಳ ಕೆಲಸದಿಂದ  ನೆತ್ತಿಗೇರಿದ ಶಿಕ್ಷಕನ ಕೋಪ, ವಿದ್ಯಾರ್ಥಿಗೆ ಹಿಗ್ಗಾ ಮುಗ್ಗ ಥಳಿತ   title=
Teachers day viral video (photo instagram)

Teachers Day Video Viral : ನಿನ್ನೆ ಅಂದರೆ ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ವಿದ್ಯೆ ಕಲಿಸಿದ ಗುರುಗಳಿಗೆ ಈ ದಿನ ಮೀಸಲು. ಹಾಗಾಗಿ ಶಿಕ್ಷಕರನ್ನು ಸಂತೋಷಪಡಿಸಲು ವಿದ್ಯಾರ್ಥಿಗಳು ಈ ದಿನ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಟೀಚರ್ಸ್ ಡೇ ಯಂದು ಶಿಕ್ಷಕರಿಗೆ ವಿವಿಧ ರೀತಿಯ ಕಾರ್ಡ್ ಗಳನ್ನು ನೀಡುವುದು ಕೇಕ್ ಕತ್ತರಿಸುವುದು, ಬೇರೆ ಬೇರೆ ರೀತಿಯ ಆಟಗಳನ್ನು ಹಮ್ಮಿಕೊಳ್ಳುವುದು ಕೂಡಾ ಸಾಮಾನ್ಯವಾಗಿ ಬಿಟ್ಟಿದೆ. 

ಇಲ್ಲಿ ಕೂಡಾ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ  ಶಿಕ್ಷಕರ ದಿನದ ಕಾರ್ಯಕ್ರಮ ನಡೆಸುತ್ತಿರುವುದನ್ನು ಕಾಣಬಹುದು. ಇಲ್ಲಿ ಮೇಸ್ಟ್ರು ಕುರ್ಚಿ ಮೇಲೆ ಕುಳಿತಿರುವುದನ್ನು ಕಾಣಬಹುದು. ವಿದ್ಯಾರ್ಥಿಗಳು ಶಿಕ್ಷಕನ ಮೇಲೆ ಹೂವು ಚೆಲ್ಲುತ್ತಿದ್ದಾರೆ. ಹಾಡು ಹೇಳುತ್ತಿದ್ದಾರೆ. ಆದರೆ ಅವರಲ್ಲಿ ಒಬ್ಬ ವಿದ್ಯಾರ್ಥಿ ಪಾರ್ಟಿ  ಫೋಮ್ ಸ್ಪ್ರೇ ಅನ್ನು ಶಿಕ್ಷಕನ ಮೇಲೆ ಬಿಡುತ್ತಾನೆ.  ಪದೇ ಪದೇ ಹುಡುಗ ಆ ರೀತಿ ಮಾಡುವಾಗ ಫೋಮ್ ಟೀಚರ್ ಬಾಯಿಗೆ ಹೋಗುತ್ತದೆ. ಈಗ ಶಿಕ್ಷಕನಿಗೆ ಕೋಪ ತಡೆಯಲಾಗಲಿಲ್ಲ. 

ಇದನ್ನೂ ಓದಿ : Viral Video: ಶಾಲಾ ಬಾಲಕೀಯರ ಇಂತಹ ಫೈಟ್ ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ

ಎಷ್ಟಾದರೂ ಶಿಕ್ಷಕ. ಶಿಸ್ತು ಮೀರಿ ವಿದ್ಯಾರ್ಥಿ ನಡೆದರೆ ಸಹಿಸುವುದು ಸಾಧ್ಯವೇ? ವಿದ್ಯಾರ್ಥಿಯನ್ನು ಮೇಜಿನ ಮೇಲೆ ಬಗ್ಗಿಸಿ ಹಿಗ್ಗಾ ಮುಗ್ಗಾ ಥಳಿಸುತ್ತಾರೆ.  ಅಲ್ಲೇ ಇದ್ದ ವಿದ್ಯಾರ್ಥಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. 

 

ಮೀಮ್ ಸೆಂಟ್ರಲ್ ಎಂಬ ಖಾತೆಯಿಂದ ವೈರಲ್ ವೀಡಿಯೊವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. ಸಾವಿರಾರು ಮಂದಿ ಈ ವಿಡಿಯೋವನ್ನು ಲೈಕ್ ಮಾಡುತ್ತಿದ್ದಾರೆ. ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 

ಇದನ್ನೂ ಓದಿ : Viral Video: ಊ ಅಂಟವಾ ಹಾಡಿಗೆ ಸೀರೆಯುಟ್ಟು ಬೆಲ್ಲಿ ಡ್ಯಾನ್ಸ್‌ ಮಾಡಿದ ನೀರೆಯರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News