Shocking Video: ಬಾಲಕಿಯನ್ನು ಕಿಡ್ನಾಪ್ ಮಾಡಲು ಬಂದ ವ್ಯಕ್ತಿಗೆ ಪಾಠ ಕಲಿಸಿದ ನಾಯಿ... ವಿಡಿಯೋ ನೋಡಿ!

Shocking Video: ಸಾಮಾಜಿಕ ಮಾಧ್ಯಮದಲ್ಲಿ ನಾಯಿಯೊಂದರ ವಿಡಿಯೋ ಸಕತ್ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ನಾಯಿಯೊಂದು ಸತ್ತಂತೆ ನಟನೆ ಮಾಡಿ, ತನ್ನ ಒಡೆಯನ ಮಗಳನ್ನು ಅಪಹರಣದಿಂದ ರಕ್ಷಿಸಿದೆ (Viral News In Kannada)  

Written by - Nitin Tabib | Last Updated : Mar 8, 2024, 11:19 PM IST
  • ಆನಿಮಲ್ ಎಂಪೈರ್ ಹೆಸರಿನ X ಖಾತೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
  • ಈ ವೀಡಿಯೋವನ್ನು ಇದುವರೆಗೆ 8.5 ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು,
  • ಸುಮಾರು 72 ಸಾವಿರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ಜನರು ಕೂಡ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
Shocking Video: ಬಾಲಕಿಯನ್ನು ಕಿಡ್ನಾಪ್ ಮಾಡಲು ಬಂದ ವ್ಯಕ್ತಿಗೆ ಪಾಠ ಕಲಿಸಿದ ನಾಯಿ... ವಿಡಿಯೋ ನೋಡಿ! title=

Shocking Video: ನಾಯಿಗಿಂತ ನಿಷ್ಠಾವಂತ ಪ್ರಾಣಿ ಯಾವುದೂ ಇಲ್ಲ ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಅದನ್ನು ಹೇಳಿದವರು ಸುಮ್ಮನೆ ಹಾಗೆ ಹೇಳಿಲ್ಲ. ಈ ಮಾತು ಹಲವು ಬಾರಿ ನಿಜ ಸಾಬೀತಾಗುವುದನ್ನು ನೀವು ನೋಡಿರಬಹುದು. ಏಕೆಂದರೆ ನೀವು ನಿಷ್ಠಾವಂತ ನಾಯಿಯನ್ನು ಹೊಂದಿದ್ದರೆ, ಅದು ನಿಮಗಾಗಿ ತನ್ನ ಪ್ರಾಣವನ್ನು ಪಣಕ್ಕಿಡಲು ಹಿಂಜರಿಯುವುದಿಲ್ಲ. ನಾಯಿಗಳನ್ನು (Dog Saving Girl From Kidnaper) ಯಾವಾಗಲೂ ಮಾನವರ ಉತ್ತಮ ಸ್ನೇಹಿತ ಎಂದು ಪರಿಗಣಿಸಲಾಗಿದೆ. ಅಂತಹ ಸ್ನೇಹ ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಾಯಿಯೊಂದು ತನ್ನ ಚಾಕಚಕ್ಯತೆಯಿಂದ ತನ್ನ ಮಾಲೀಕನ ಪುಟ್ಟ ಹುಡುಗಿಯ ಪ್ರಾಣ ರಕ್ಷಿಸಿದೆ. (Viral News In Kannada)

ಇದನ್ನೂ ಓದಿ-Viral Video: ಬಾಯ್ಫ್ರೆಂಡ್ ಜೊತೆಗೆ ಮಲಗಿದ್ದೆ ಕಾರಣ, ನಂತರ ಗರ್ಲ್ ಫ್ರೆಂಡ್ ಮಾಡಿದ್ದು ನೀವೇ ನೋಡಿ!

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ (Viral Video), ನಾಯಿಯೊಂದು ಸತ್ತಂತೆ ನಟಿಸಿ ತನ್ನ ಒಡೆಯನ ಮಗಳನ್ನು ಕ್ರಿಮಿನಲ್ ಅಪಹರಣದಿಂದ ಹೇಗೆ ರಕ್ಷಿಸಿದೆ ಎಂಬುದನ್ನು ನೋಡಬಹುದು. ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ನಾಯಿಯ ಮೇಲೆ ಮೊದಲು ಬಂದೂಕಿನಿಂದ ದಾಳಿ ಮಾಡುತ್ತಾನೆ ಎಂಬುದು ವಿಡಿಯೋದಲ್ಲಿ ನೀವು ನೋಡಬಹುದು, ನಾಯಿಯ ಮೇಲೆ ದುಷ್ಕರ್ಮಿ ದಾಳಿ ಮಾಡಿದ ತಕ್ಷಣ ನಾಯಿ ಸತ್ತಂತೆ ನಟಿಸಲು ಪ್ರಾರಂಭಿಸುತ್ತದೆ. ಆಗ, ದುಷ್ಕರ್ಮಿಯು ನಾಯಿಯೊಂದಿಗೆ ಆಟವಾಡುತ್ತಿದ್ದ ಚಿಕ್ಕ ಹುಡುಗಿಯನ್ನು ಎತ್ತಿನೊಂದು ಹೋಗಲು ಆರಂಭಿಸುತ್ತಾನೆ.  ಆಗ, ನಾಯಿ ತಕ್ಷಣವೇ ಎದ್ದು ತನ್ನ ಬಾಯಿಯಿಂದ ಅಪಹರಿಸುವವನ ಕೈ ಹಿಡಿಯುತ್ತದೆ. ಈ ರೀತಿ ಹುಡುಗಿ ಅಪಹರಣದಿಂದ ರಕ್ಷಿಸಲ್ಪಡುತ್ತದೆ. ಜನರು ಈ ವೀಡಿಯೊವನ್ನು ಪೂರ್ವ-ಯೋಜಿತ ಎಂದು ಹೇಳುತ್ತಿದ್ದಾರೆ,  ಏಕೆಂದರೆ ನಾಯಿಗೆ ಗುಂಡು ತಗುಲಿದ್ದರೆ, ಅದಕ್ಕೆ ಎದ್ದೆಳಲು ಆಗುತ್ತಿರಲಿಲ್ಲ. ಹೀಗಾಗಿ ಈ ವಿಡಿಯೋವನ್ನು ತರಬೇತಿ ಉದ್ದೇಶಕ್ಕಾಗಿ ಮಾಡಿರಬಹುದು ಎಂದು ಜನರು ಹೇಳುತ್ತಾರೆ. ವಿಡಿಯೋ ಮಾಡಲು ಕಾರಣವೇನಿದ್ದರೂ ನಾಯಿಯ ಈ ನಟನೆ ನೋಡಿ ಹೊಗಳದೇ ಇರಲು ಸಾಧ್ಯವಿಲ್ಲ.

ಇದನ್ನೂ ಓದಿ-Trending Video: ದೊಡ್ಡವನಾದ ಮೇಲೆ ಪಾನಿಪುರಿ ಮಾರುವವನಾಗಬೇಕಂತೆ ಈ ತುಂಟ, ಕಾರಣ ಏನು ನೀವೇ ಕೇಳಿ!

ಆನಿಮಲ್ ಎಂಪೈರ್ ಹೆಸರಿನ X ಖಾತೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋವನ್ನು ಇದುವರೆಗೆ 8.5 ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಸುಮಾರು 72 ಸಾವಿರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ಜನರು ಕೂಡ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರರು '..ಇದು ತುಂಬಾ ಬುದ್ಧಿವಂತ ನಾಯಿ' ಎಂದು ಬರೆದುಕೊಂಡರೆ, ಮತ್ತೊಬ್ಬ ಬಳಕೆದಾರರು '...ನಾಯಿಯು ತನ್ನ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿದೆ' ಎಂದಿದ್ದಾರೆ...ಮೂರನೇ ಬಳಕೆದಾರ '...ಈ ನಾಯಿಗೆ ತರಬೇತಿ ನೀಡಲಾಗುತ್ತಿದೆ' ಎಂದಿದ್ದಾರೆ. 

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News