Viral Video: ಬೆಕ್ಕಿಗೆ ಮುತ್ತಿಡಲು ಆರಂಭಿಸಿದ ಹಾವು.! ಬೆಕ್ಕಿನ ಪ್ರತಿಕ್ರಿಯೆ ಹೇಗಿದೆ ನೋಡಿ

Cat Snake ViralVideo : ಹಾವು ಮತ್ತು ಬೆಕ್ಕಿಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಲ್ಲಿ ಹಾವು ಎದುರಿಗೆ ನಿಂತಿರುವ ಬೆಕ್ಕಿಗೆ ಮುತ್ತು ಕೊಡಲು ಯತ್ನಿಸುತ್ತಿರುವುದನ್ನು ಕಾಣಬಹುದು. 

Written by - Ranjitha R K | Last Updated : Aug 30, 2022, 12:22 PM IST
  • ವೈರಲ್ ಆಗಿದೆ ಹಾವು ಬೆಕ್ಕಿನ ವಿಡಿಯೋ
  • ಬೆಕ್ಕಿನ ಮುಖದ ಬಳಿಯೇ ಬರುತ್ತಿರುವ ಹಾವು
  • ಹಾವನ್ನು ಕಂಡು ಹೇಗಿತ್ತು ನೋಡಿ ಬೆಕ್ಕಿನ ಪ್ರತಿಕ್ರಿಯೆ
Viral Video: ಬೆಕ್ಕಿಗೆ ಮುತ್ತಿಡಲು ಆರಂಭಿಸಿದ ಹಾವು.! ಬೆಕ್ಕಿನ ಪ್ರತಿಕ್ರಿಯೆ ಹೇಗಿದೆ ನೋಡಿ  title=
Viral video snake and cat (photo instagram)

Cat Snake ViralVideo : ಸಾಮಾಜಿಕ ಜಾಲತಾಣಗಳ ಬೆರಗುಗೊಳಿಸುವ ಜಗತ್ತಿನಲ್ಲಿ, ಯಾವಾಗ ಯಾವ ದೃಶ್ಯ ನೋಡ ಸಿಗುವುದೋ ಊಹಿಸುವುದು ಕೂಡಾ ಕಷ್ಟ. ಪ್ರತಿದಿನ ಇಲ್ಲಿ ಸಾವಿರಾರುಗಟ್ಟಲೆ   ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಇವುಗಳಲ್ಲಿ ಕೆಲವು ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗು ತರಿಸುತ್ತವೆ. ಇನ್ನು ಕೆಲವು ವಿಡಿಯೋಗಳನ್ನು ನೋಡುವಾಗ ಮೈ ಜುಮ್ಮೆನ್ನುತ್ತದೆ, ಗಾಬರಿ ಹುಟ್ಟುತ್ತದೆ.   ಹಾವು ಮತ್ತು ಬೆಕ್ಕಿಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಲ್ಲಿ ಹಾವು ಎದುರಿಗೆ ನಿಂತಿರುವ ಬೆಕ್ಕಿಗೆ ಮುತ್ತು ಕೊಡಲು ಯತ್ನಿಸುತ್ತಿರುವುದನ್ನು ಕಾಣಬಹುದು. 

ಬೆಕ್ಕನ್ನು ಚುಂಬಿಸಲು ಮುಂದಾದ ಹಾವು : 
ಕೆಲವು ಸೆಕೆಂಡುಗಳ ವೀಡಿಯೊದಲ್ಲಿ, ಅಪಾಯಕಾರಿ ಹಾವು ತನ್ನ ಸಮೀಪ ಬಂದಾಗಲೂ ಒಂಚೂರೂ ಅಳುಕಿಲ್ಲದೆ ಬೆಕ್ಕು ಅಲ್ಲೇ ಕುಳಿತಿರುವುದನ್ನು ಕಾಣಬಹುದು. ಹಾವು  ತನ್ನ ದೇಹದ ಅರ್ಧ ಭಾಗವನ್ನು ಮೇಲಕ್ಕೆತ್ತಿ ಬೆಕ್ಕಿನ ಕಡೆಗೆ ಚಲಿಸಲು ಪ್ರಾರಂಭಿಸುತ್ತದೆ. ಪದೇ ಪದೇ ಹಾವು ತನ್ನ ಬಾಯಿ ತೆರೆದುಕೊಂಡು ಬೆಕ್ಕಿನ ಮುಖದ ಬಳಿ ಬರುತ್ತದೆ. ಬೆಕ್ಕು ಕೂಡ ಏನೂ ಆಗೇ ಇಲ್ಲ ಎನ್ನುವಂತೆ ತನ್ನ ಪಾಡಿಗೆ ತಾನು ಕುಳಿತಿದೆ.  ಆದರೆ ಆಮೇಲೆ ಬೆಕ್ಕು ಹಾವು ಹೀಗೆ ತನ್ನ ಮುಖ ಬಳಿ ಬರುತ್ತಿರುವುದನ್ನು ಗಮನಿಸಿ ಬಿಡುತ್ತದೆ. 

 ಇದನ್ನೂ ಓದಿ : Viral Video : ನಾಗರ ಹಾವು - ಮುಂಗುಸಿ ಕಾದಾಟದ ವಿಡಿಯೋ ವೈರಲ್‌

 

 ಇದನ್ನೂ ಓದಿ : Viral Video : 14 ಸಿಂಹಿಣಿಗಳ ನಡುವೆ ಒಂಟಿ ಸಲಗ..! ಯಾರು ಗೆಲ್ಲುತ್ತಾರೆ ಈ ಕದನ?

ಬೆಕ್ಕು ತನಗೆ ಅಪಾಯ ಇದೆ ಎಂದು ಗಮನಿಸಿದ ಕೂಡಲೇ ತನ್ನ ಪಂಜೆಯಿಂದ ಹಾವಿನ ಮೇಲೆ ದಾಳಿ ಮಾಡಿ ಬಿಡುತ್ತದೆ. ಬೆಕ್ಕು ಮತ್ತು ಹಾವಿನ ಈ ವೀಡಿಯೊವನ್ನು ಇದುವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಇದನ್ನು ಲೈಕ್ ಮಾಡಿದ್ದಾರೆ. ಮೀವ್‌ಕ್ಯಾಟ್_ಹ್ಯಾಪಿಪೆಟ್ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News