Viral Video : ಮಕ್ಕಳ ರಕ್ಷಣೆಗಾಗಿ ವಿಷಕಾರಿ ಹಾವಿನೊಂದಿಗೆ ಅಳಿಲಿನ ಕಾದಾಟ.!

Viral Video : ಮನುಷ್ಯರಾಗಲೀ ಪ್ರಾಣಿಗಳಾಗಲೀ ತಾಯಿಯ ಶಕ್ತಿಯೇ ಹಾಗೆ.  ತನ್ನ ಮರಿಗಳ ರಕ್ಷಣೆಗೆ ಎಂಥವರನ್ನೇ ಆಗಲಿ ಎದುರು ಹಾಕಿಕೊಳ್ಳಳು ತಾಯಿ ಸಿದ್ದಳಾಗುತ್ತಾಳೆ. 

Written by - Ranjitha R K | Last Updated : Jan 6, 2023, 05:18 PM IST
  • ನಾಗರಹಾವು ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿದೆ
  • ನಾಗರಹಾವು ಒಂದು ಬಾರಿ ಕುಟುಕಿದರೆ ಎದುರಾಳಿ ಉಳಿಯುವುದಿಲ್ಲ
  • ನಾಗರ ಹಾವನ್ನು ಎದುರು ಹಾಕಿಕೊಂಡ ಅಳಿಲು
 Viral Video : ಮಕ್ಕಳ ರಕ್ಷಣೆಗಾಗಿ ವಿಷಕಾರಿ ಹಾವಿನೊಂದಿಗೆ ಅಳಿಲಿನ ಕಾದಾಟ.!  title=

Viral Video : ನಾಗರಹಾವು ವಿಶ್ವದ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿದೆ. ನಾಗರಹಾವು ಒಂದು ಬಾರಿ ಕುಟುಕಿದರೆ ಸಾಕು ಎದುರಾಳಿ ಉಳಿಯುವುದು ಕಷ್ಟ. ನಾಗರಹಾವನ್ನು ಕಂಡ ಕೂಡಲೇ ಎಂಟೆದೆ ಬಂಟನಾದರೂ ಅಲ್ಲಿಂದ ದೂರ ಸರಿಯುತ್ತಾನೆ. ಆದರೆ ಇಲ್ಲೊಂದು ಪುಟ್ಟ ಅಳಿಲು ನಾಗರವನ್ನು ಎದುರು ಹಾಕಿಕೊಂಡಿದೆ. ಅಷ್ಟಕ್ಕೂ ಅದು ನಾಗರಾಜನೊಂದಿಗೆ ಕಾದಾಟಕ್ಕೆ ನಿಂತದ್ದು ತನಗಾಗಿ ಅಲ್ಲ, ತನ್ನ ಮರಿಗಳ  ರಕ್ಷಣೆಗಾಗಿ . 

ಮರಿಗಳಿಗೆ ಜನ್ಮ ನೀಡಿತ್ತು ಅಳಿಲು : 
ಈ ಅಳಿಲು ಪೊದೆಗಳ ಮಧ್ಯದಲ್ಲಿ ಮರಿಗಳಿಗೆ ಜನ್ಮ ನೀಡಿತ್ತು. ಇದರ ವಾಸನೆ ಪಡೆದ ನಾಗರಹಾವು, ಆ ಮರಿಗಳತ್ತ ಧಾವಿಸಿ ಬರುತ್ತಿತ್ತು. ತನ್ನ ಮಕ್ಕಳಿಗೆ ಯಾರಾದರೂ ಮುಳುವಾದಾಗ ಹೆಣ್ಣು ಹೆಮ್ಮಾರಿಯಾಗುತ್ತಾಳೆ ಎಂದು ಹೇಳುತ್ತಾರೆ. ಅದು ಮನುಷ್ಯರಲ್ಲಿ ಮಾತ್ರವಲ್ಲ. ಪ್ರಾಣಿಗಳಲ್ಲೂ ಅಷ್ಟೇ. ತನ್ನ ಮಕ್ಕಳಿಗೆ ಹಾನಿ ಮಾಡುವ ಉದ್ದೇಶದಿಂದ ಹಾವು ಬರುತ್ತಿದೆ ಎನ್ನುವುದನ್ನು ಅರಿತ ಈ ಅಳಿಲು ಮಕ್ಕಳ ರಕ್ಷಣೆಗೆ ನಿಂತಿದೆ. ಮರಿಗಳ ರಕ್ಷಾ ಕವಚವಾಗಿ ನಿಂತಿರುವ ಅಳಿಲು ಹಾವನ್ನು ಒಂದು ಹೆಜ್ಜೆಯೂ ಮುಂದಕ್ಕೆ ಬರಲು ಬಿಡುವುದಿಲ್ಲ. 

ಇದನ್ನೂ ಓದಿ : Aunty Murga Dance Video: ದೇಸಿ ಆಂಟಿಯ ಹಾಹಾಕಾರ ಸೃಷ್ಟಿಸುವ ಈ ಹುಂಜದ ನೃತ್ಯ ನೋಡಿದ್ರಾ?
 
ಸೋಲೊಪ್ಪಿಕೊಂಡ ನಾಗರ : 
ಒಂದು ಕ್ಷಣಕ್ಕೆ ಈ ವಿಡಿಯೋ ನೋಡುವಾಗ ಹಾವು ನಿಜಕ್ಕೂ ಅಳಿಲಿನೊಂದಿಗೆ ಸೆಣಸುತ್ತಿದೆಯೇ ಅಥವಾ ಮುಂಗುಸಿಯೊಂದಿಗೆ ಕಾದಾಟ ನಡೆಸುತ್ತಿದೆಯೇ ಎನ್ನುವ ಸಂದೇಹ ಮೂಡುತ್ತದೆ. ಯಾಕೆಂದರೆ ಹಾವು  ವಿಷಕಾರಿಯಾಗಿದ್ದರೂ  ಅದು ಸೋತು ಶರಣಾಗುವವರೆಗೂ ಅಳಿಲು  ಬಿಡುವುದಿಲ್ಲ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಹಾವು ವಾಪಾಸಾಗುತ್ತದೆ. 

 

ಇದನ್ನೂ ಓದಿ : Viral Video: ಮಗ ಡ್ರೀಮ್‌ ಬೈಕ್‌ ಗಿಫ್ಟ್‌ ಕೊಟ್ಟಾಗ ತಂದೆಯ ಸಂತೋಷ ನೋಡಿ! ಹೃದಯಸ್ಪರ್ಶಿ ವಿಡಿಯೋ

ಮನುಷ್ಯರಾಗಲೀ ಪ್ರಾಣಿಗಳಾಗಲೀ ತಾಯಿಯ ಶಕ್ತಿಯೇ ಹಾಗೆ.  ತನ್ನ ಮರಿಗಳ ರಕ್ಷಣೆಗೆ ಎಂಥವರನ್ನೇ ಆಗಲಿ ಎದುರು ಹಾಕಿಕೊಳ್ಳಳು ತಾಯಿ ಸಿದ್ದಳಾಗುತ್ತಾಳೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News