Viral Video : ‘ಹುಷಾರು ಟೀಚರ್​, ನಮ್ಮಪ್ಪ ಪೊಲೀಸ್..’ ಶಿಕ್ಷಕಿಗೆ‌ ಸ್ಟೂಡೆಂಟ್ ಅವಾಜ್‌.!

School Teacher: ಬಾಲ್ಯದಲ್ಲಿ, ಮಕ್ಕಳು ತುಂಬಾ ಹಠಮಾರಿಗಳಾಗಿರುತ್ತಾರೆ ಮತ್ತು ಅವರು ಎಲ್ಲವನ್ನೂ ಬಹಳ ಮುಗ್ಧತೆಯಿಂದ ಹೇಳುತ್ತಾರೆ. ಕೆಲವೊಮ್ಮೆ ಚಿಕ್ಕ ಮಕ್ಕಳು ಇಂತಹ ಮಾತುಗಳನ್ನು ಆಡುವುದನ್ನು ಕೇಳಿದರೆ ನೀವು ನಂಬುವುದಿಲ್ಲ.

Written by - Chetana Devarmani | Last Updated : Sep 25, 2022, 04:28 PM IST
  • ಬಾಲ್ಯದಲ್ಲಿ, ಮಕ್ಕಳು ತುಂಬಾ ಹಠಮಾರಿಗಳಾಗಿರುತ್ತಾರೆ
  • "ನಮ್ಮಪ್ಪ ಪೊಲೀಸ್.. ಗುಂಡಿಕ್ಕಿ ಕೊಲ್ಲುತ್ತಾರೆ"
  • ಶಿಕ್ಷಕಿಗೆ‌ ಮುದ್ದುಕಂದನ ಅವಾಜ್
Viral Video : ‘ಹುಷಾರು ಟೀಚರ್​, ನಮ್ಮಪ್ಪ ಪೊಲೀಸ್..’ ಶಿಕ್ಷಕಿಗೆ‌ ಸ್ಟೂಡೆಂಟ್ ಅವಾಜ್‌.! title=
ಸ್ಟೂಡೆಂಟ್ ಅವಾಜ್

School Teacher: ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ನಡೆಯುವ ಹಲವು ಸಂಭಾಷಣೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿವೆ. ಕೆಲವು ಮಕ್ಕಳು ಏನಾದರೂ ಕೆಟ್ಟ ಕೆಲಸ ಮಾಡಿದ ನಂತರ ಕ್ಷಮೆಯಾಚಿಸುವುದನ್ನು ನೋಡಬಹುದು. ಬಾಲ್ಯದಲ್ಲಿ, ಮಕ್ಕಳು ತುಂಬಾ ಹಠಮಾರಿಗಳಾಗಿರುತ್ತಾರೆ ಮತ್ತು ಅವರು ಎಲ್ಲವನ್ನೂ ಬಹಳ ಮುಗ್ಧತೆಯಿಂದ ಹೇಳುತ್ತಾರೆ. ಕೆಲವೊಮ್ಮೆ ಚಿಕ್ಕ ಮಕ್ಕಳು ಇಂತಹ ಮಾತುಗಳನ್ನು ಹೇಳುವುದನ್ನು ಕೇಳಿದರೆ ನೀವು ನಂಬುವುದಿಲ್ಲ. ಇಂತಹದೊಂದು ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ಕೆಲವೇ ಸೆಕೆಂಡುಗಳ ಕಾಲ ಬೆಚ್ಚಿ ಬೀಳುತ್ತೀರಿ. 

ಇದನ್ನೂ ಓದಿ : King Cobra with Nagamani : ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ ದೃಶ್ಯ ವೈರಲ್!

ಎರಡು ಗುಂಪುಗಳು ಅಥವಾ ಯುವಕರ ನಡುವೆ ಜಗಳವಾದಾಗ, ಹೊಡೆದಾಟದ ಸಮಯದಲ್ಲಿ ಬೆದರಿಕೆಗಳು ಕೇಳಿಬರುತ್ತವೆ, ಆದರೆ ನೀವು ಚಿಕ್ಕ ಮಗು ಶಿಕ್ಷಕಿಗೆ ಬೆದರಿಕೆ ಹಾಕುವುದನ್ನು ಎಂದಾದರೂ ನೋಡಿದ್ದೀರಾ? ಈ ವಿಡಿಯೋದಲ್ಲಿ ಚಿಕ್ಕ ಮಗು ಶಾಲೆಯ ತರಗತಿಯಲ್ಲಿದ್ದು ಅಳುತ್ತಿರುವುದನ್ನು ಕಂಡುಬಂದಿದೆ. ಅಳುತ್ತಲೇ ಶಿಕ್ಷಕಿಗೆ ಅವಾಜ್‌ ಹಾಕುವ ವಿಡಿಯೋ ವೈರಲ್‌ ಆಗಿದೆ.

 

 

ಅಳುತ್ತಲೇ, ನನ್ನ ತಂದೆ ಪೊಲೀಸಿದ್ದಾರೆ. ಗುಂಡು ಹೊಡೆದು ನಿಮ್ಮನ್ನು ಸಾಯಿಸುತ್ತಾರೆ ಎಂದು ಅಳುತ್ತಲೇ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ನೋಡಿದ ಜನ ಭಾರೀ ಎಂಜಾಯ್‌ ಮಾಡುತ್ತಿದ್ದಾರೆ. ಕೆಲವು ಸೆಕೆಂಡ್‌ಗಳ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. @Gulzar_sahab ಹೆಸರಿನ ಖಾತೆಯಿಂದ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ 'ನನ್ನ ತಂದೆ ಪೊಲೀಸಿದ್ದಾರೆ' ಎಂದು ಬರೆಯಲಾಗಿದೆ. ಈ ವಿಡಿಯೋವನ್ನು ಇಂಟರ್ನೆಟ್‌ನಲ್ಲಿ 55 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋ 2300ಕ್ಕೂ ಹೆಚ್ಚು ಲೈಕ್‌ಗಳು ಮತ್ತು ನೂರಾರು ರಿಟ್ವೀಟ್‌ಗಳನ್ನು ಗಳಿಸಿದೆ. 

ಇದನ್ನೂ ಓದಿ : Viral Video : ಕೋತಿ - ಹುಂಜದ ಮಧ್ಯೆ ನಡೆಯಿತು ಭೀಕರ ಕಾಳಗ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News