ಬಸ್ ನಿಲ್ದಾಣದಲ್ಲಿ ಡ್ರೈವರ್ ಇಲ್ಲದೆ ಏಕಾಏಕಿ ಚಲಿಸಿದ ಬಸ್! ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ!

CCTV Footage: ತೀರ್ಥಹಳ್ಳಿಯ ಮುಖ್ಯ ಬಸ್​ ನಿಲ್ದಾಣದಲ್ಲಿ ಖಾಸಗಿ ಬಸ್​ ನಿಂತಿತ್ತು. ಡ್ರೈವರ್ ಬಸ್​ ನಿಲ್ಲಿಸಿ ಕೆಳಕ್ಕಿಳಿದಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಬಸ್ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿದೆ.

Written by - Puttaraj K Alur | Last Updated : Sep 13, 2023, 12:07 PM IST
  • ತೀರ್ಥಹಳ್ಳಿ ಪೇಟೆ ಬಸ್​ ನಿಲ್ದಾಣದಲ್ಲಿ ಮಂಗಳವಾರ ಅಚ್ಚರಿ ಮೂಡಿಸುವ ಘಟನೆ
  • ಬಸ್​ ನಿಲ್ದಾಣದಲ್ಲಿ ಡ್ರೈವರ್ ಇಲ್ಲದ ಬಸ್‍ವೊಂದು​ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿದೆ
  • ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಭಯಾನಕ ದೃಶ್ಯ ಸಖತ್ ವೈರಲ್
ಬಸ್ ನಿಲ್ದಾಣದಲ್ಲಿ ಡ್ರೈವರ್ ಇಲ್ಲದೆ ಏಕಾಏಕಿ ಚಲಿಸಿದ ಬಸ್! ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ! title=
ಭಯಾನಕ ದೃಶ್ಯ ಸಖತ್ ವೈರಲ್!

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೇಟೆ ಬಸ್​ ನಿಲ್ದಾಣದಲ್ಲಿ ಮಂಗಳವಾರ(ಸೆ.12) ಅಚ್ಚರಿ ಮೂಡಿಸುವ ಘಟನೆಯೊಂದು ಸಂಭವಿಸಿದೆ. ಬಸ್​ ನಿಲ್ದಾಣದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‍ವೊಂದು​ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ ಮೆಟ್ಟಿಲಿನಿಂದ ಇಳಿದು ರೋಡಿಗೆ ಬಂದು ನಿಂತಿದೆ. ಈ ಭಯಾನಟಕ ಘಟನೆಯ ದೃಶ್ಯ ಹತ್ತಿರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಜನರಲ್ಲಿ ಕುತೂಹಲ ಮೂಡಿಸುತ್ತಿದೆ.

ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ತೀರ್ಥಹಳ್ಳಿಯ ಮುಖ್ಯ ಬಸ್​ ನಿಲ್ದಾಣದಲ್ಲಿ ಖಾಸಗಿ ಬಸ್​ ನಿಂತಿತ್ತು. ಡ್ರೈವರ್ ಬಸ್​ ನಿಲ್ಲಿಸಿ ಕೆಳಕ್ಕಿಳಿದಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಬಸ್ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿದೆ. ನೇರವಾಗಿ ಮುಂದಕ್ಕೆ ಬಂದ ಬಸ್ ಬಸ್‍ಸ್ಟ್ಯಾಂಡ್​ ಮೆಟ್ಟಿಲಿನ ಮೇಲೆ ಇಳಿದಿದೆ. ಅಲ್ಲಿಂದ ರೋಡಿಗೆ ಇಳಿದು ಸಿರಿಬೈಲ್​ ಲಾಡ್ಜ್​ ಬದಿಗೆ ಹೋಗಿ ನಿಂತಿದೆ.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶ ಹಿನ್ನೆಲೆ: ಸಿಎಂ ಅಧ್ಯಕ್ಷತೆಯಲ್ಲಿ ತುರ್ತು ಸಭೆ

ಇನ್ನೂ ಬಸ್ ಚಲಿಸುತ್ತಿದ್ದಂತೆ ಅಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಹೌಹಾರಿದ್ದಾರೆ. ಇನ್ನೂ ರೋಡಿಗೆ ಬಸ್ ಇಳಿಯುತ್ತಿದ್ದಂತೆ ಜನರು ತಮ್ಮ ಜೀವ ಉಳಿಸಿಕೊಳ್ಳಲು ಬೇರೆ ಬೇರೆ ಕಡೆ ಓಡಿಹೋಗಿದ್ದಾರೆ. ಬಸ್ ನಿಲ್ದಾಣದ ಕೆಳಗೆ ಆಟೋ ನಿಲ್ದಾಣವಿತ್ತು. ಅದೃಷ್ಟಕ್ಕೆ ಯಾರಿಗೂ ಅಪಾಯವಾಗಿಲ್ಲ.

ಮೊದಲು ಬಸ್ ಚಾಲನೆಗೊಂಡಿದ್ದು, ಡ್ರೈವರ್‍ನಿಂದಲೇ ಎಂದು ಜನರು ಅಂದುಕೊಂಡಿದ್ದರು. ನಂತರ ನೋಡಿದಾಗ ಬಸ್​ನಲ್ಲಿ ಚಾಲಕ ಇರಲಿಲ್ಲ. ತದನಂತರ ವಿಚಾರ ಮಾಡಿ ನೋಡಿದಾಗ ಬಸ್​ನ ಹ್ಯಾಂಡ್ ಬ್ರೇಕ್ ಹಾಕದೇ ಡ್ರೈವರ್ ತೆರಳಿದ್ದರು. ಹೀಗಾಗಿ ಬಸ್ ಮುಂದಕ್ಕೆ ಮೂವ್ ಆಗಿ ರಸ್ತೆಗೆ ಇಳಿದಿದೆ ಎಂಬುದು ಗೊತ್ತಾಗಿದೆ. ಇನ್ನೂ ಈ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಜನರಿಗೆ ಸಿಹಿ ಸುದ್ದಿ: KSRTCಯಿಂದ 1200ಕ್ಕೂ ಹೆಚ್ಚುವರಿ ಬಸ್ ವ್ಯವಸ್ಥೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News