Video Viral: ʼರಾಮ ನಾಮʼ ಹಾಡುತ್ತಿದ್ದಂತೆ ಮಹಿಳೆಯನ್ನು ತಬ್ಬಿಕೊಂಡ ಕೋತಿ!

ಮಹಿಳೆಯೊಬ್ಬರು "ಶ್ರೀ ರಾಮ್.. ಜೈ ರಾಮ್.. ಜೈ ಜೈ ರಾಮ್..., ʼರಾಮ್ ರಾಮ್ ಪಾಹಿಮಾಮ್.. ರಾಮ್ ರಾಮ್ ರಕ್ಷಮಾಮ್.. ಮಂತ್ರ ಪಠಿಸುತ್ತಿದ್ದಾಗ ಇದಕ್ಕಿದ್ದಂತೆಯೇ ಬಂದ ಕೋತಿ ಟೇಬಲ್​ ಮೇಲೆ ಕುಳಿತು ಭಕ್ತಿಯಿಂದ ಕೇಳಿಸಿಕೊಂಡಿದೆ. ಬಳಿಕ ಆ ಮಹಿಳೆಯನ್ನು ತಬ್ಬಿಕೊಂಡು ರಾಮನ ಹಾಡನ್ನು ಆನಂದಿಸುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು.

Written by - Puttaraj K Alur | Last Updated : Aug 28, 2024, 05:57 PM IST
  • ʼರಾಮ ನಾಮʼ ಹಾಡುತ್ತಿದ್ದಂತೆ ಮಹಿಳೆಯನ್ನು ತಬ್ಬಿಕೊಂಡ ಕೋತಿ!
  • ʼರಾಮ ನಾಮʼ ಮಂತ್ರ ಪಠಿಸುತ್ತಿರುವಾಗ ಕುಣಿದಾಡಿದ ಹನುಮಂತ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ
Video Viral: ʼರಾಮ ನಾಮʼ ಹಾಡುತ್ತಿದ್ದಂತೆ ಮಹಿಳೆಯನ್ನು ತಬ್ಬಿಕೊಂಡ ಕೋತಿ! title=
ಮಹಿಳೆಯನ್ನು ತಬ್ಬಿಕೊಂಡ ಕೋತಿ!

Video Viral: ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಈ ಪೈಕಿ ಕೆಲವು ವಿಡಿಯೋಗಳು ಜನರ ಮನಸ್ಸಿಗೆ ಹತ್ತಿರವಾಗುತ್ತವೆ, ಇನ್ನೂ ಕೆಲವು ಮೊಗದಲ್ಲಿ ನಗು ಉಕ್ಕಿಸುತ್ತವೆ. ಪ್ರಾಣಿ-ಪಕ್ಷಿಗಳ ವಿಡಿಯೋಗಳು ಸಹ ಜನರ ಗಮನ ಸೆಳೆಯುತ್ತವೆ. ಅದೇ ರೀತಿ ಮಂಗನ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದೆ. 

ಹೌದು, ಮಹಿಳೆಯೊಬ್ಬರು ರಾಮ ನಾಮ ಹಾಡುತ್ತಿದ್ದಂತೆ ಕೋತಿಯೊಂದು ಹತ್ತಿರ ಬಂದು, ಅವರ ಹಾಡು ಕೇಳುತ್ತಾ ಕುಳಿತುಕೊಂಡಿದೆ. ಬಳಿಕ ಮಹಿಳೆಯನ್ನು ತಬ್ಬಿಕೊಂಡು ರಾಮ ನಾಮ ಕೇಳುತ್ತ ಆಕೆಯ ಹೆಗಲ ಮೇಲೆ ತಲೆಯಿಟ್ಟು ಸುಮ್ಮನೆ ಕುಳಿತುಕೊಂಡಿದೆ. ಈ ಸಂಪೂರ್ಣ ಘಟನೆಯ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ.

ಇದನ್ನೂ ಓದಿ: ಕೊನೆಗೂ ರಾಹುಲ್ ಗಾಂಧಿಗೆ ಕೂಡಿಬಂತಾ ಕಂಕಣ ಭಾಗ್ಯ? ಮದುವೆ ಬಗ್ಗೆ ಕಾಶ್ಮೀರಿ ವಿದ್ಯಾರ್ಥಿನಿಯರ ಬಳಿ ಕಾಂಗ್ರೆಸ್ ನಾಯಕ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ!

@NandiniVenkate3 ಎಂಬ ಟ್ವಟಿರ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಶೇರ್‌ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ರಾಮ ನಾಮ ಹಾಡುತ್ತಿದ್ದ ಮಹಿಳೆಯನ್ನು ಮಂಗ ತಬ್ಬಿಕೊಂಡ ವಿಡಿಯೋ ನೋಡುಗರಲ್ಲಿ ಭಕ್ತ ಭಾವವನ್ನು ಮೂಡಿಸುವಂತಿದೆ. 

ಮಹಿಳೆಯು ರಾಮ ನಾಮ ಹಾಡುತ್ತಿದ್ದಾಗ ಆಕೆಯನ್ನು ಮಂಗ ತಬ್ಬಿಕೊಂಡಿರುವ ದೃಶ್ಯ ಮನಮುಟ್ಟುವಂತಿದೆ. ರಾಮ ನಾಮ ಕೇಳಿಸಿಕೊಳ್ಳುತ್ತಾ ಮಂಗ ಕುಣಿದಾಡಿದೆ. ಈ ವಿಡಿಯೋ ನೋಡಿದ ಅನೇಕರು ʼಹರೇ ರಾಮ ಹರೇ ರಾಮ…ʼ ಎಂದು ಅನೇಕರು ಕಾಮೆಂಟ್​​ ಮಾಡಿದ್ದಾರೆ.  

ಇದನ್ನೂ ಓದಿ: 20 ವರ್ಷಗಳವರೆಗೆ ನರೇಂದ್ರ ಮೋದಿಯವರನ್ನು ಹುಡುಕುತ್ತಿದ್ದರಂತೆ ಈ ಬ್ಯಾಂಕಿನವರು !ತಡವಾಗಿ ಬೆಳಕಿಗೆ ಬಂದ ಸತ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News