Viral Video: ವಿಮಾನವನ್ನೇ ಕದ್ದು ಕಟ್ಟಡಕ್ಕೆ ಡಿಕ್ಕಿ ಹೊಡೆಸುವೆ ಎಂದ ಭೂಪ! ಹುಚ್ಚಾಟದ ವಿಡಿಯೋ ವೈರಲ್

ಕದ್ದ ವಿಮಾನದಲ್ಲಿ ಗಂಟೆಗಟ್ಟಲೇ ಸುತ್ತಾಡಿದ ಪೈಲೆಟ್ ಬಳಿಕ ಅದನ್ನು ‘ವಾಲ್‌ಮಾರ್ಟ್’ ಶಾಪಿಂಗ್ ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ಬೆದರಿಕೆ ಹಾಕಿದ್ದ.

Written by - Puttaraj K Alur | Last Updated : Sep 4, 2022, 08:02 AM IST
  • ವಿಮಾನ ನಿಲ್ದಾಣದಿಂದಲೇ ವಿಮಾನ ಕದ್ದ ಪೈಲೆಟ್‍ನಿಂದ ಹುಚ್ಚಾಟ
  • ಅಮೆರಿಕದ ಈಶಾನ್ಯ ಮಿಸ್ಸಿಸ್ಸಿಪ್ಪಿ ನಗರದ ಟ್ಯುಪೆಲೋದಲ್ಲಿ ಘಟನೆ
  • ಪೈಲೆಟ್ ಹುಚ್ಚಾಟಕ್ಕೆ ಆತಂಕಕ್ಕೆ ಸಿಲುಕಿದ್ದ ಜನರು ಮತ್ತು ಪೊಲೀಸರು
Viral Video: ವಿಮಾನವನ್ನೇ ಕದ್ದು ಕಟ್ಟಡಕ್ಕೆ ಡಿಕ್ಕಿ ಹೊಡೆಸುವೆ ಎಂದ ಭೂಪ! ಹುಚ್ಚಾಟದ ವಿಡಿಯೋ ವೈರಲ್ title=
ವಿಮಾನ ಕದ್ದ ಪೈಲೆಟ್‍ನಿಂದ ಹುಚ್ಚಾಟ  

ವಾಷಿಂಗ್ಟನ್‌: ವಿಮಾನ ನಿಲ್ದಾಣದಿಂದ ವಿಮಾನವನ್ನೇ ಕದ್ದ ಪೈಲೆಟ್‍ವೊಬ್ಬ ಹುಚ್ಚಾಟ ನಡೆಸಿದ್ದಾನೆ. ಅಮೆರಿಕದ ಈಶಾನ್ಯ ಮಿಸ್ಸಿಸ್ಸಿಪ್ಪಿ ನಗರದ ಟ್ಯುಪೆಲೋದಲ್ಲಿ ಈ ಘಟನೆ ನಡೆದಿದೆ. ಕದ್ದ ವಿಮಾನದಲ್ಲಿ ಗಂಟೆಗಟ್ಟಲೇ ಸುತ್ತಾಡಿದ ಪೈಲೆಟ್ ಬಳಿಕ ಅದನ್ನು ‘ವಾಲ್‌ಮಾರ್ಟ್’ ಶಾಪಿಂಗ್ ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ಬೆದರಿಕೆ ಹಾಕಿದ್ದ.

ಈ ಪೈಲೆಟ್ ಹುಚ್ಚಾಟಕ್ಕೆ ಪೊಲೀಸರು ಗಂಟೆಗಟ್ಟಲೇ ಕಾದು ಕಾದು ಸುಸ್ತಾಗಿದ್ದಾರೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಗವರ್ನರ್ ಟೇಟ್ ರೀವ್ಸ್ ಹೇಳಿದ್ದಾರೆ. 5 ಗಂಟೆಗೂ ಹೆಚ್ಚು ಕಾಲ ಕಾಡಿಸಿದ ಬಳಿಕ ಆ ವಿಮಾನ ಪತನಗೊಂಡಿದ್ದು, ಪೈಲೆಟ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Viral News: ಮನೆ ಕೆಡವಿದ ಮೇಲೆ ಸಿಕ್ಕಳು ‘ಅದೃಷ್ಟ ಲಕ್ಷ್ಮಿ’; ದಂಪತಿಗೆ ಸಿಕ್ತು ಕೋಟಿ ಕೋಟಿ ಮೌಲ್ಯದ ‘ನಿಧಿ’!

ಟ್ಯುಪೆಲೋ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯಾಗಿರೋ ಈ ಪೈಲೆಟ್‌ ಹುಚ್ಚಾಟ ಮೆರೆದಿದ್ದಾನೆ. ಶನಿವಾರ ಬೆಳಗ್ಗೆಯೇ ‘ಬೀಚ್‌ಕ್ರಾಫ್ಟ್ ಕಿಂಗ್‌ ಏರ್‌ 90’ ಹೆಸರಿನ 9 ಸೀಟಿನ ಸಣ್ಣ ವಿಮಾನ ಕದಿದ್ದ ಪೈಲೆಟ್ ಮನಬಂದಂತೆ ನಗರದ ಸುತ್ತಮುತ್ತ ರೌಂಡ್ಸ್ ಹೊಡೆದಿದ್ದಾನೆ. ಇವನ ಹುಚ್ಚಾಟ ಕಂಡು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಹೇಗಾದರೂ ಮಾಡಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿ ಪೈಲೆಟ್ ವಶಕ್ಕೆ ಪಡೆಯಬೇಕೆಂದು ಪೊಲೀಸರು ದೊಡ್ಡ ಹರಸಾಹಸ ಪಟ್ಟಿದ್ದಾರೆ. ಪೊಲೀಸರೊಂದಿಗೆ ನೇರ ಸಂಪರ್ಕಕ್ಕೆ ಬಂದಿದ್ದ ಪೈಲೆಟ್ ವಿಮಾವನ್ನು ನಗರದ ‘ವಾಲ್‌ಮಾರ್ಟ್‌’ ಶಾಪಿಂಗ್ ಕಟ್ಟಡಕ್ಕೆ ಡಿಕ್ಕಿ ಹೊಡೆಸುತ್ತೇನೆ ಅಂತಾ ಬೆದರಿಕೆ ಹಾಕಿದ್ದ. 

ಸುಮಾರು 5 ಗಂಟೆಗಳ ಕಾಲ ಒಂದೇ ಪ್ರದೇಶದಲ್ಲಿ ವಿಮಾನವನ್ನು ಮನಬದಂತೆ ಚಲಾಯಿಸುತ್ತಿದ್ದ ಪೈಲೆಟ್ ಹುಚ್ಚಾಟದಿಂದ ಜನರು ಆತಂಕಗೊಂಡಿದ್ದರು. ಹೀಗಾಗಿ ‘ವಾಲ್‌ಮಾರ್ಟ್‌’ ಹಾಗೂ ಸುತ್ತಲಿನ ಪ್ರದೇಶಗಳ ಜನರನ್ನು ಪೊಲೀಸರು ಬೇರೆಡೆಗೆ ಸ್ಥಳಾಂತರಿಸಿದ್ದರು. ಬಳಿಕ ಪೈಲೆಟ್ ಜೊತೆಗೆ ಮಾತನಾಡಿದ ಪೊಲೀಸರು ಸುರಕ್ಷಿತವಾಗಿ ವಿಮಾನವನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Baba Vanga: 2022 ರಿಂದ 2100ರವರೆಗೆ ಸ್ಫೋಟಕ ಭವಿಷ್ಯ ನುಡಿದಿರುವ ‘ಬಾಬಾ ವಂಗಾ’!

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಗವರ್ನರ್ ಟೇಟ್ ರೀವ್ಸ್, ‘ಆತಂಕದ ಪರಿಸ್ಥಿತಿಯನ್ನು ಪರಿಹರಿಸಲಾಗಿದೆ ಮತ್ತು ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಈ ಪರಿಸ್ಥಿತಿಯನ್ನು ತೀವ್ರ ವೃತ್ತಿಪರತೆಯಿಂದ ನಿರ್ವಹಿಸಿದ ಸ್ಥಳೀಯ, ರಾಜ್ಯ ಮತ್ತು ಫೆಡರಲ್ ಕಾನೂನು ಜಾರಿ ಸಂಸ್ಥೆಗಳಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News