ಪತ್ನಿ ಶವವನ್ನು ಮೂಟೆಯಲ್ಲಿ ಹೊತ್ತೊಯ್ದ ಪತಿ!

ಕಳೆದ 15 ದಿನಗಳಿಂದ ರವಿ ಮತ್ತು ಆತನ ಹೆಂಡತಿ ಕಾಳಮ್ಮ ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹತ್ತಿರ ಇರುವ ಆಲೆಮನೆಯಲ್ಲಿ  ಉಳಿದಿಕೊಂಡು ಪ್ಲಾಸ್ಟಿಕ್, ಗುಜರಿ ಸಾಮಗ್ರಿಗಳನ್ನು  ಸಂಗ್ರಹಿಸಿ ಮಾರಾಟ ಮಾಡಿ  ಜೀವನ ಸಾಗಿಸುತ್ತಿದ್ದರು‌.

Written by - Yashaswini V | Last Updated : Dec 7, 2022, 12:47 PM IST
  • ಇದ್ದರೂ ಸುಖವಿಲ್ಲ- ಸತ್ತಾಗಲೂ ಸುಖವಿಲ್ಲ ಎಂಬುದಕ್ಕೆ ಈ ಬಡಕುಟುಂಬವೇ ಸಾಕ್ಷಿ
  • ಹೆಣ ಸಾಗಿಸಲು ದುಡ್ಡಿಲ್ಲದೆ ಮೂಟೆಯಲ್ಲಿ ಪತ್ನಿಯ ಶವ ಹೊತ್ತೊಯ್ದ ಪತಿ
  • ಪಟ್ಟಣದ ಸುವರ್ಣವತಿ ನದಿ ಕಡೆ ಅಂತ್ಯ ಸಂಸ್ಕಾರ ಮಾಡಲು ಹೋಗುತ್ತಿದ್ದ ಪತಿ, ಮುಂದೆ...
ಪತ್ನಿ ಶವವನ್ನು ಮೂಟೆಯಲ್ಲಿ ಹೊತ್ತೊಯ್ದ ಪತಿ!  title=
Dead body in bag

ಚಾಮರಾಜನಗರ: ಇದ್ದರೂ ಸುಖವಿಲ್ಲ- ಸತ್ತಾಗಲೂ ಸುಖವಿಲ್ಲ ಎಂಬುದಕ್ಕೆ ಈ ಬಡಕುಟುಂಬವೇ ಸಾಕ್ಷಿಯಾಗಿದ್ದು ಪತ್ನಿ ಶವವನ್ನು ಸಾಗಿಸಲು ಹಣವಿಲ್ಲದೇ ಮೂಟೆಯಲ್ಲಿ ಹೊತ್ತೊಯ್ದಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.

ಮಂಡ್ಯ ಮೂಲದ ಕಾಳಮ್ಮ(26) ಎಂಬಾಕೆ ಮೃತಳಾಗಿದ್ದು ಪತಿ ರವಿ ಮೂಟೆಯಲ್ಲಿ ಶವ ಸಾಗಿಸುವಾಗ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ‌. ಕಳೆದ 15 ದಿನಗಳಿಂದ ರವಿ ಮತ್ತು ಆತನ ಹೆಂಡತಿ ಕಾಳಮ್ಮ ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹತ್ತಿರ ಇರುವ ಆಲೆಮನೆಯಲ್ಲಿ  ಉಳಿದಿಕೊಂಡು ಪ್ಲಾಸ್ಟಿಕ್, ಗುಜರಿ ಸಾಮಗ್ರಿಗಳನ್ನು  ಸಂಗ್ರಹಿಸಿ ಮಾರಾಟ ಮಾಡಿ  ಜೀವನ ಸಾಗಿಸುತ್ತಿದ್ದರು‌.

ಇದನ್ನೂ ಓದಿ- Viral Video : ಬೈಕ್ ಚಕ್ರದಲ್ಲಿ ಸಿಲುಕಿ ಪರದಾಡಿದ ಕೋತಿ : Video ನೋಡಿ

ಮಂಗಳವಾರ ರಾತ್ರಿ ಕಾಳಮ್ಮ  ಅತಿ ಹೆಚ್ಚು ಮದ್ಯಪಾನ ಮಾಡಿ ಸಾವನ್ನಪ್ಪಿದ್ದು ಪತ್ನಿ ಶವವನ್ನು  ರವಿ  ಹೆಗಲ ಮೇಲೆ ಹೊತ್ತುಕೊಂಡು ಪಟ್ಟಣದ ಸುವರ್ಣವತಿ ನದಿ  ಕಡೆ ಅಂತ್ಯ ಸಂಸ್ಕಾರ ಮಾಡಲು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಪೊಲೀಸರು ಮಾಹಿತಿ ಪಡೆದು  ಆತನಿಂದ ಹೇಳಿಕೆ ಪಡೆದು ಶವವನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ  ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ- Viral Video : ಇಳಿವಯಸ್ಸಲ್ಲೂ ಭರ್ಜರಿ ಸ್ಟೆಪ್ಸ್‌ ಹಾಕಿದ ಅಜ್ಜಿ, ಏನ್‌ ಎನರ್ಜಿ ಗುರು!

ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಿಎಸ್ಐ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News