Viral Video: ಕಟುಕನಿಗೆ ಮಾರುತ್ತಿದ್ದಂತೆ ಅಳುತ್ತಾ ಮಾಲೀಕನನ್ನು ತಬ್ಬಿಕೊಂಡ ಮೇಕೆ

Goat Cries and Hugs Owner: ಸೋಶಿಯಲ್ ಮೀಡಿಯಾದಲ್ಲಿ ಹೃದಯವಿದ್ರಾವಕ ವಿಡಿಯೋ ವೈರಲ್ ಆಗಿದ್ದು, ಮೇಕೆಯನ್ನು ಕಟುಕನಿಗೆ ಮಾರಾಟ ಮಾಡಿದಾಗ ಅದು ತನ್ನ ಮಾಲೀಕನನ್ನು ತಬ್ಬಿಕೊಂಡು ಅಳುತ್ತಿರುವುದನ್ನು ಕಾಣಬಹುದು.

Written by - Chetana Devarmani | Last Updated : Jul 20, 2022, 11:25 AM IST
  • ಮಾಲೀಕರ ಭುಜದ ಮೇಲೆ ತಲೆಯಿಟ್ಟು ಮೇಕೆ ಅಳುತ್ತಿರುವ ವಿಡಿಯೋ
  • ಸೋಶಿಯಲ್ ಮೀಡಿಯಾದಲ್ಲಿ ಹೃದಯವಿದ್ರಾವಕ ವಿಡಿಯೋ ವೈರಲ್
  • ಕಟುಕನಿಗೆ ಮಾರುತ್ತಿದ್ದಂತೆ ಅಳುತ್ತಾ ಮಾಲೀಕನನ್ನು ತಬ್ಬಿಕೊಂಡ ಮೇಕೆ
Viral Video: ಕಟುಕನಿಗೆ ಮಾರುತ್ತಿದ್ದಂತೆ ಅಳುತ್ತಾ ಮಾಲೀಕನನ್ನು ತಬ್ಬಿಕೊಂಡ ಮೇಕೆ  title=
ವಿಡಿಯೋ ವೈರಲ್

Viral Video: ಕೆಲವು ದಿನಗಳ ಹಿಂದೆ, ಪ್ರಪಂಚದಾದ್ಯಂತ ಜನರು ಬಕ್ರೀದ್ ಅನ್ನು ಆಚರಿಸಿದರು. ಈ ವೇಳೆ ಮೇಕೆಗಳನ್ನು ಕಡಿಯುತ್ತಾರೆ. ಆದರೆ ಈ ಆಚರಣೆಗೆ ಒಂದು ಮಹತ್ವವಿದೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಈದ್ ಅಲ್-ಅಧಾ ಹಬ್ಬದ ಸಮಯದಲ್ಲಿ, ಪ್ರಪಂಚದಾದ್ಯಂತದ ಮುಸ್ಲಿಮರು ಮೇಕೆ, ಕುರಿ, ಹಸು ಅಥವಾ ಒಂಟೆ ಇವುಗಳಲ್ಲಿ ಒಂದು ಪ್ರಾಣಿಯನ್ನು ಬಲಿ ಕೊಡುತ್ತಾರೆ.  

ಇದನ್ನೂ ಓದಿ: WATCH: ಸೈನಿಕರ ಕಾಲಿಗೆ ನಮಸ್ಕರಿಸಿದ ಪುಟ್ಟ ಬಾಲಕಿ.. ಪುಟಾಣಿಯ ದೇಶಪ್ರೇಮಕ್ಕೆ ನೆಟ್ಟಿಗರು ಫಿದಾ

ಸೋಶಿಯಲ್ ಮೀಡಿಯಾದಲ್ಲಿ ಹೃದಯವಿದ್ರಾವಕ ವಿಡಿಯೋ ವೈರಲ್ ಆಗಿದ್ದು, ಮೇಕೆಯನ್ನು ಕಟುಕನಿಗೆ ಮಾರಾಟ ಮಾಡುವ ಮೊದಲು ಅದರ ಮಾಲೀಕರ ತೋಳುಗಳಲ್ಲಿ ಅಳುತ್ತಿರುವುದನ್ನು ಕಾಣಬಹುದು. ತನ್ನ ಮಾಲೀಕರ ಭುಜದ ಮೇಲೆ ತಲೆಯಿಟ್ಟು ಮೇಕೆ ಅಳುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಮನುಷ್ಯನು ತನ್ನ ಮೇಕೆಯನ್ನು ತಬ್ಬಿಕೊಳ್ಳುತ್ತಿರುವುದನ್ನು ನೋಡಬಹುದು. ಇನ್ನೊಬ್ಬ ವ್ಯಕ್ತಿ ಅಳುತ್ತಿರುವ ಪ್ರಾಣಿಯನ್ನು ಸಮಾಧಾನಪಡಿಸಲು ಮೇಕೆಯ ಮುಖವನ್ನು ಪ್ರೀತಿಯಿಂದ ತಟ್ಟುವುದನ್ನು ಕಾಣಬಹುದು. 

ಇದನ್ನೂ ಓದಿ: ಅಧ್ಯಕ್ಷ ರಾಜಪಕ್ಸೆ ಪಲಾಯನ.. ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ನೆಟಿಜನ್‌ಗಳು ಕ್ಲಿಪ್‌ಗೆ ದುಃಖದ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಅದನ್ನು ಹಂಚಿಕೊಂಡಿದ್ದಾರೆ. 

ವೈರಲ್ ವಿಡಿಯೋ - 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News