Viral Video: ರಕ್ಷಿಸಲು ಹೋದವನಿಗೆ ಹೆಡೆ ಎತ್ತಿ ಬುಸ್‌.. ಬುಸ್‌... ಎಂದು ಬುಸುಗುಟ್ಟಿದ ಕಾಳಿಂಗ ಸರ್ಪ..!

King cobra Viral Video: ಕಾಳಿಂಗ ಸರ್ಪದ ಈ ವಿಡಿಯೋವನ್ನು @salmanjimcorbett72 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 84 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ.

Written by - Puttaraj K Alur | Last Updated : Oct 14, 2024, 07:01 PM IST
  • ಮನೆಗೆ ಹೊಕ್ಕ ಕಿಂಗ್‌‌ ಕೋಬ್ರಾ ರಕ್ಷಣೆಗೆ ಮುಂದಾದ ಉರಗ ರಕ್ಷಕ
  • ಉರಗ ತಜ್ಞನಿಗೆ ಹೆಡೆ ಎತ್ತಿ ಬುಸುಗುಟ್ಟಿದ ಕಾಳಿಂಗ ಸರ್ಪ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್
Viral Video: ರಕ್ಷಿಸಲು ಹೋದವನಿಗೆ ಹೆಡೆ ಎತ್ತಿ ಬುಸ್‌.. ಬುಸ್‌... ಎಂದು ಬುಸುಗುಟ್ಟಿದ ಕಾಳಿಂಗ ಸರ್ಪ..! title=
ಹೆಡೆ ಎತ್ತಿ ಬುಸುಗುಟ್ಟಿದ ಕಾಳಿಂಗ ಸರ್ಪ!

King cobra Viral Video: ಹಾವು ತುಂಬಾ ಅಪಾಯಕಾರಿ ಜೀವಿ. ಹಾವು ಕಂಡ್ರೆ ಸಾಕು ಜನರು ಮಾರುದ್ದ ಓಡಿ ಹೋಗುತ್ತಾರೆ. ಕಾಳಿಂಗ ಸರ್ಪವನ್ನು ಕಂಡ್ರೆ ಅನೇಕರಿಗೆ ಮಾತೇ ಬರುವುದಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿದಿನವೂ ಅನೇಕ ಹಾವುಗಳ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಇದೀಗ ಮತ್ತೊಂದು ಕಿಂಗ್‌ ಕೋಬ್ರಾದ ವಿಡಿಯೋ ಸಖತ್‌ ಸೌಂಡ್‌ ಮಾಡುತ್ತಿದೆ. 

ಕಾಳಿಂಗ ಸರ್ಪವೊಂದು ಏಕಾಏಕಿ ಮನೆಗೆ ನುಗ್ಗಿದೆ. ಮಾರುದ್ದ ಹಾವನ್ನು ಕಂಡ ಮನೆಯವರು ಜೀವಭಯದಿಂದ ಹೊರಗಡೆ ಓಡಿದ್ದಾರೆ. ಕೂಡಲೇ ಉರಗ ರಕ್ಷರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕರೊಬ್ಬರು ಅದನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಸುಮಾರು 9 ಅಡಿ ಉದ್ದದ ಘಟಸರ್ಪ ಬುಸ್..‌ ಬುಸ್‌... ಅಂತಾ ತನ್ನ ಹೆಡೆಯನ್ನು ಎತ್ತಿ ಬುಸುಗುಟ್ಟಿದೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. 

ಇದನ್ನೂ ಓದಿ: ಚಳಿಗಾಲ ಬರುವ ಮೊದಲು ಈಗಲೇ ಈ ಸಿದ್ಧತೆಗಳನ್ನು ಮಾಡಿಕೊಳ್ಳಿ, ನಂತರ ಯಾವುದೇ ವ್ಯಥೆ ಪಡಬೇಕಾಗಿಲ್ಲ

ವೈರಲ್‌ ಆಗಿರುವ ವಿಡಿಯೋದಲ್ಲಿ ಮನೆಗೆ ನುಗ್ಗಿದ ಕಾಳಿಂಗ ಸರ್ಪವನ್ನು ಉರಗ ತಜ್ಞರೊಬ್ಬರು ರಕ್ಷಿಸಲು ಮುಂದಾಗಿರುವುದನ್ನು ಕಾಣಬಹುದು. ಅವರು ಮೊದಲಿಗೆ ಕಾಳಿಂಗ ಸರ್ಪದ ಬಾಲವನ್ನು ಹಿಡಿದು ಹೊರಗೆ ಎಳೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ದಿಢೀರ್‌ ಅಂತಾ ಹೊರಗಡೆ ಬಂದ ಕಾಳಿಂಗ ಸರ್ಪವು ತನ್ನ ಹೆಡೆಯನ್ನು ಎತ್ತಿ ಬುಸುಗಿಟ್ಟಿದೆ. ಹೆಡೆ ಎತ್ತಿ ನಿಂತ ಕಾಳಿಂಗ ಸರ್ಪ ಕೊಂಚ ಹೊತ್ತು ಬುಸ್..‌ ಬುಸ್‌.. ಅಂತಾ ಬುಸುಗುಟ್ಟಿದೆ. 

ಕಾಳಿಂಗ ಸರ್ಪದ ಈ ವಿಡಿಯೋವನ್ನು @salmanjimcorbett72 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 84 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. ʼಹಾವಿನ ಜೊತೆಗೆ ಸರಸ ಬೇಡʼ ಅಂತಾ ಕೆಲವರು ಸಲಹೆ ನೀಡಿದ್ರೆ, ಕಿಂಗ್‌ ಕೋಬ್ರಾ ನೋಡಲು ತುಂಬಾ ಭಯಾನಕವಾಗಿದೆ ಅಂತಾ ಇನ್ನೂ ಕೆಲವರು ಕಾಮೆಂಟ್‌ ಮಾಡಿದ್ದಾರೆ. ಹಾವಿ ರಕ್ಷಿಸಲು ಹೋದವರಿಗೆ ಕಿಂಗ್‌ ಕೋಬ್ರಾ ಈ ರೀತಿ ಬುಸುಗುಟ್ಟಬಾರದಿತ್ತು ಅಂತಾ ಇನ್ನೂ ಕೆಲವರು ಕಾಮೆಂಟ್‌ ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿದ ಅನೇಕ ನೆಟಿಜನ್ಸ್‌ ಜೀವದ ಹಂಗು ತೊರೆದು ಘಟಸರ್ಪವನ್ನು ರಕ್ಷಿಸಿದ ಉರಗ ತಜ್ಞರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.     

ಇದನ್ನೂ ಓದಿ: "ಸಲ್ಮಾನ್ ಖಾನ್ ಬದುಕಬೇಕೆಂದರೆ ಇರೋದು ಒಂದೇ ದಾರಿ... ಆತ ಪಬ್ಲಿಕ್‌ನಲ್ಲಿ ಹೀಗೆ ಮಾಡಬೇಕು"- ಬಿಷ್ಣೋಯ್ ಗ್ಯಾಂಗ್‌ನಿಂದ ಸಂಚಲನಕಾರಿ ಹೇಳಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News