Viral Video: ಹಾವಿನ ಮೇಲೆ ಕಪ್ಪೆರಾಯನ ಜಾರುಬಂಡಿ ಆಟ: ಪ್ರಕೃತಿ ವೈಚಿತ್ರ್ಯದ ವಿಡಿಯೋ

Snake and Frog Viral Video: ವೀಡಿಯೊದಲ್ಲಿ ಕಪ್ಪೆ ಹಾವಿನ ಬೆನ್ನಿನ ಮೇಲೆ ಆರಾಮವಾಗಿ ಕುಳಿತಿರುವುದು ಮತ್ತು ಹಾವು ತೆವಳಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.

Written by - Bhavishya Shetty | Last Updated : Aug 27, 2023, 12:53 PM IST
    • ಕಪ್ಪೆ ಹಾವಿನ ಮೇಲೆ ಸವಾರಿ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?
    • ಇಲ್ಲೊಂದು ಕಪ್ಪೆಯೊಂದು ಅಪಾಯಕಾರಿ ಹಾವಿನ ಮೇಲೆ ಕುಳಿತು ಸವಾರಿ ಮಾಡುತ್ತಿದೆ
    • ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.
Viral Video: ಹಾವಿನ ಮೇಲೆ ಕಪ್ಪೆರಾಯನ ಜಾರುಬಂಡಿ ಆಟ: ಪ್ರಕೃತಿ ವೈಚಿತ್ರ್ಯದ ವಿಡಿಯೋ  title=
Snake and Frog viral Video

Snake and Frog Viral Video: ಹಾವು ಕಪ್ಪೆಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಆದರೆ ಕಪ್ಪೆ ಹಾವಿನ ಮೇಲೆ ಸವಾರಿ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?

ಇದನ್ನೂ ಓದಿ:  ಸಾರ್ವಜನಿಕ ಸ್ಥಳದಲ್ಲೇ ಕ್ರಿಕೆಟಿಗ ಶಿಖರ್ ಧವನ್ ಕಾಲರ್ ಹಿಡಿದೆಳೆದ ವ್ಯಕ್ತಿ! ಶಾಕಿಂಗ್ ವಿಡಿಯೋ

ಹೌದು, ಇಲ್ಲೊಂದು ಕಪ್ಪೆಯೊಂದು ಅಪಾಯಕಾರಿ ಹಾವಿನ ಮೇಲೆ ಕುಳಿತು ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಕಪ್ಪೆ ಹಾವಿನ ಬೆನ್ನಿನ ಮೇಲೆ ಆರಾಮವಾಗಿ ಕುಳಿತಿರುವುದು ಮತ್ತು ಹಾವು ತೆವಳಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ದಟ್ಟವಾದ ಹುಲ್ಲುಗಾವಲಿನ ಮೇಲೆ ಹಾವು ತೆವಳಿಕೊಂಡು ಹೋಗುತ್ತಿದ್ದರೆ ಅದರ ಮೇಲೆ ಕಪ್ಪೆ ಜಾರಿಕೊಂಡು ಹೋಗುತ್ತಿರುವುದನ್ನು ನೋಡಬಹುದು. ಕಪ್ಪೆಗೆ ಹಾವಿನ ಬಗ್ಗೆ ಭಯವೇ ಇಲ್ಲವೇನೋ ಅನಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ವೀಡಿಯೊ ನೋಡಿ:

 

ಇದನ್ನೂ ಓದಿ: Video Viral: ಆಟಗಾರ್ತಿಯ ತುಟಿಗೆ ಚುಂಬಿಸಿದ್ದ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಸಸ್ಪೆಂಡ್!

ಈ ವೀಡಿಯೊವನ್ನು ಕಂಡ ಟ್ವಿಟರ್ ಬಳಕೆದಾರರು, “ಇದು ವಿಶ್ವದ ಅತ್ಯಂತ ಅಪಾಯಕಾರಿ ಸ್ಲೈಡ್” ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಅನೇಕ ಮಂದಿ ವೀಕ್ಷಿಸಿದ್ದು ಶಾಕ್ ಆಗಿದ್ದಾರೆ. ಇನ್ನು ಈ ವಿಡಿಯೋ ಶೇರ್ ಮಾಡಿರುವ ವ್ಯಕ್ತಿ ಆಕರ್ಷಕ ಶೀರ್ಷಿಕೆ ನೀಡಿದ್ದು, “ಧೈರ್ಯ ಎಂದರೆ ಭಯ ಇಲ್ಲದಿರುವುದಲ್ಲ, ಮುಂದಿರುವ ಭಯವನ್ನು ಎದುರಿಸುವ ಧೈರ್ಯವೇ ಧೈರ್ಯ..!” ಎಂದು ಬರೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

 

Trending News