ಕೃಷ್ಣನಲ್ಲ, ಅರ್ಜುನನಲ್ಲ… ಮಹಾಭಾರತದ ಈ ಪಾತ್ರವೆಂದರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಿಗೆ ಅಚ್ಚುಮೆಚ್ಚು!

mahabharat and abdul kalam: ಬಹಳ ಸರಳವಾಗಿ ಜೀವನ ನಡೆಸುತ್ತಿದ್ದ ಅಬ್ದುಲ್ ಕಲಾಂ ಅವರಿಗೆ ಪುಸ್ತಕಗಳೆಂದರೆ ಪಂಚಪ್ರಾಣ ಎಂಬುದು ನಮಗೆಲ್ಲಾ ತಿಳಿದಿದೆ. ಇವೆಲ್ಲದರ ಹೊರತಾಗಿ ಕಲಾಂ ಜಿಗೆ ಮಹಾಭಾರತದ ಒಂದು ವ್ಯಕ್ತಿತ್ವವೆಂದರೆ ತುಂಬಾ ಇಷ್ಟವಂತೆ.

Written by - Bhavishya Shetty | Last Updated : Aug 27, 2023, 11:51 AM IST
    • ಬಹಳ ಸರಳವಾಗಿ ಜೀವನ ನಡೆಸುತ್ತಿದ್ದ ಅಬ್ದುಲ್ ಕಲಾಂ ಅವರಿಗೆ ಪುಸ್ತಕಗಳೆಂದರೆ ಪಂಚಪ್ರಾಣ
    • ಅಬ್ದುಲ್ ಕಲಾಂ ಅವರನ್ನ ಭಾರತದ ಮಿಸೈಲ್ ಮ್ಯಾನ್ ಎಂದು ಕರೆಯುತ್ತಾರೆ
    • ಮಹಾಭಾರತದಲ್ಲಿ ಬರುವ ‘ವಿಧುರಾ’ ಪಾತ್ರವೆಂದರೆ ತುಂಬಾ ಇಷ್ಟವಂತೆ.
ಕೃಷ್ಣನಲ್ಲ, ಅರ್ಜುನನಲ್ಲ… ಮಹಾಭಾರತದ ಈ ಪಾತ್ರವೆಂದರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಿಗೆ ಅಚ್ಚುಮೆಚ್ಚು!  title=
mahabharat and abdul kalam

Abdul Kalam favorite mahabharata character: ಭಾರತದ ರಾಷ್ಟ್ರಪತಿಗಳ ಪಟ್ಟಿಯಲ್ಲಿ ಎಂದೆಂದೂ ಅಗ್ರಗಣ್ಯ ಹೆಸರೆಂದರೆ ಅಬ್ದುಲ್ ಕಲಾಂ ಅವರನ್ನು ಎನ್ನಬಹುದು. ಕೇವಲ ರಾಷ್ಟ್ರಪತಿಯಲ್ಲದೆ, ವಿಜ್ಞಾನ ಕ್ಷೇತ್ರದಲ್ಲೂ ತಮ್ಮ ಕೊಡುಗೆ ನೀಡಿದ್ದಾರೆ ಕಲಾಂ ಜಿ ಅವರು. ಇವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ರಾಮೇಶ್ವರಂನಲ್ಲಿ. ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ವಿಷಯದಲ್ಲಿ ಅಧ್ಯಯನ ಮಾಡಿದ್ದ ಕಲಾಂ ಅವರು ಭಾರತದ ಪ್ರತಿಯೊಬ್ಬ ಪ್ರಜೆಯ ಅಚ್ಚುಮೆಚ್ಚಿನ ವ್ಯಕ್ತಿ.

ಇದನ್ನೂ ಓದಿ: 1983ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರ ಸಂಬಳ ಎಷ್ಟಿತ್ತು ಗೊತ್ತಾ?

ಬಹಳ ಸರಳವಾಗಿ ಜೀವನ ನಡೆಸುತ್ತಿದ್ದ ಅಬ್ದುಲ್ ಕಲಾಂ ಅವರಿಗೆ ಪುಸ್ತಕಗಳೆಂದರೆ ಪಂಚಪ್ರಾಣ ಎಂಬುದು ನಮಗೆಲ್ಲಾ ತಿಳಿದಿದೆ. ಇವೆಲ್ಲದರ ಹೊರತಾಗಿ ಕಲಾಂ ಜಿಗೆ ಮಹಾಭಾರತದ ಒಂದು ವ್ಯಕ್ತಿತ್ವವೆಂದರೆ ತುಂಬಾ ಇಷ್ಟವಂತೆ. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಅಬ್ದುಲ್ ಕಲಾಂ ಅವರನ್ನ ಭಾರತದ ಮಿಸೈಲ್ ಮ್ಯಾನ್ ಎಂದು ಕರೆಯುತ್ತಾರೆ. ಉದ್ದನೆಯ ಕೂದಲು ಮತ್ತು ಸರಳ ನಡವಳಿಕೆಯಿಂದ ಜನಮನ ಗೆದ್ದಿದ್ದ ಕಲಾಂ ಅವರಿಗೆ ಮಹಾಭಾರತದಲ್ಲಿ ಬರುವ ‘ವಿಧುರಾ’ ಪಾತ್ರವೆಂದರೆ ತುಂಬಾ ಇಷ್ಟವಂತೆ.

‘ವಿಧುರ’ ಪಾಂಡವರ ಚಿಕ್ಕಪ್ಪ ಮತ್ತು ಮಹಾನ್ ಭಕ್ತನಾದ ಧೃತರಾಷ್ಟ್ರನ ಸಲಹೆಗಾರ ಮತ್ತು ಸಹೋದರ ಎಂದು ಮಹಾಭಾರತದಲ್ಲಿ ಪ್ರಸಿದ್ಧನಾಗಿದ್ದಾನೆ. ವಿಧುರನ ಸದಾಚಾರ, ಸಹಿಷ್ಣುತೆ, ಸೇವೆ ಮಾಡುವ ಧ್ಯೇಯ ಮತ್ತು ಸೇವಾ ಮನೋಭಾವದಂತಹ ಉತ್ತಮ ಗುಣಗಳೇ ಅಬ್ದುಲ್ ಕಲಾಂ ಅವರಿಗೆ ಮನ ಮುಟ್ಟಿದೆಯಂತೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲೇ ಕ್ರಿಕೆಟಿಗ ಶಿಖರ್ ಧವನ್ ಕಾಲರ್ ಹಿಡಿದೆಳೆದ ವ್ಯಕ್ತಿ! ಶಾಕಿಂಗ್ ವಿಡಿಯೋ

ವಿಧುರ ಮಹಾ ಬುದ್ಧಿವಂತ. ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ವಿಧುರನನ್ನು ಕುರು ಸಾಮ್ರಾಜ್ಯದ ಪ್ರಧಾನ ಮಂತ್ರಿ ಎಂದು ಕಾವ್ಯದಲ್ಲಿ ವಿವರಿಸಲಾಗಿದ್ದು, ಪಾಂಡವರು ಮತ್ತು ಕೌರವರಿಬ್ಬರ ತಂದೆಯ ಚಿಕ್ಕಪ್ಪ ಎಂಬುದು ಕೂಡ ಗಮನಾರ್ಹ ವಿಷಯ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News