Drunken Cat Video: ಚಿಕ್ಕ ಮಗುವಿನ ತೂಕಕ್ಕಿಂತ ಹೆಚ್ಚು ತೂಕವಿರುವ ಬೆಕ್ಕು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಇದರ ದಿನಚರಿ ತಿಳಿದ ನೆಟ್ಟಿಗರು ಬೆಚ್ಚಿಬೀಳುತ್ತಿದ್ದಾರೆ. ಅಷ್ಟೇ ಅಲ್ಲ ಈ ಬೆಕ್ಕು ಮದ್ಯ ವ್ಯಸನಿಯಾಗಿದೆ. ತಿನ್ನಲು ಮತ್ತು ಕುಡಿಯಲು ಇಷ್ಟಪಡುವ ಈ ಬೆಕ್ಕಿನ ತೂಕ 17 ಕೆಜಿ. ಅತಿಯಾದ ತೂಕದಿಂದಾಗಿ ಇದಕ್ಕೆ ನಡೆಯಲು ಸಹ ಸಾಧ್ಯವಾಗುತ್ತಿಲ್ಲ.
ಪ್ರಾಣಿ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ ಈ ಬೆಕ್ಕನ್ನು ರಕ್ಷಿಸಿದೆ. ಈ ಪ್ರಕರಣ ರಷ್ಯಾದಿಂದ ವರದಿಯಾಗಿದೆ ಎಂದು ತಿಳಿದುಬಂದಿದೆ. ಬೆಕ್ಕನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬೆಕ್ಕು ಮದ್ಯ, ಮಾಂಸ, ಸೂಪ್ ಮತ್ತು ಬ್ರೆಡ್ ಅನ್ನು ಇಷ್ಟಪಡುತ್ತದೆ. ಆಸ್ಪತ್ರೆಯಲ್ಲಿ ಬೆಕ್ಕಿನ ಮೇಲೆ ಅಲ್ಟ್ರಾಸೌಂಡ್ ಮಾಡಲು ಪ್ರಯತ್ನಿಸಿದಾಗ, ಸೆನ್ಸಾರ್‌ಗಳು ಬೆಕ್ಕನ್ನು ಸ್ಕ್ಯಾನ್ ಮಾಡಲು ಕೂಡ ವಿಫಲವಾಗಿದೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಮೀನಿನ ಹೊಟ್ಟೆ ಸೇರಿದ ಹಾವು !ಮೀನಿನ ದೇಹ ತುಂಬಾ ಹರಿದಾಡಿ ಕಿವಿರಿನ ಮೂಲಕ ಜೀವಂತವಾಗಿ ಹೊರ ಬಂದ ಸರ್ಪ !ಈ ಅಪರೂಪದ ವಿಡಿಯೋ ನೋಡಿ
ಈ ಬೆಕ್ಕಿನ ಹೆಸರು ಕ್ರೋಶಿಕ್. ತನ್ನ ಬೃಹತ್ ಆಕಾರ ಮತ್ತು ಭಾರೀ ತೂಕದಿಂದಾಗಿ ಈ ಬೆಕ್ಕು ಅಂತರ್ಜಾಲದಲ್ಲಿ ಮಾನ್ಸ್ಟರ್ ಕ್ಯಾಟ್ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಈಗ ಎನ್‌ಜಿಒ ಆಹಾರ ಮತ್ತು ಚಿಕಿತ್ಸೆಯ ಮೂಲಕ ಬೆಕ್ಕು ನಡೆಯುವಂತೆ ಮಾಡಲು ಪ್ರಯತ್ನಿಸುತ್ತಿದೆ. ಚಿಕಿತ್ಸೆಯೊಂದಿಗೆ ಬೆಕ್ಕು ಈಗ ತನ್ನ ಕಾಲುಗಳ ಮೂಲಕ ನಿಧಾನವಾಗಿ ಚಲಿಸಲು ಪ್ರಾರಂಭಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಬೆಕ್ಕು ನೆಲದ ಮೇಲೆ ತೆವಳುತ್ತಿರುವ ದೃಶ್ಯವಿದೆ.
ಈ ಬೆಕ್ಕನ್ನು ಯಾರೋ ಅಪರಿಚಿತರು ಆಸ್ಪತ್ರೆಯ ಸೆಲ್ಲಾರ್‌ನಲ್ಲಿ ಬಿಟ್ಟು ಹೋಗಿದ್ದಾರೆ. ಬೆಕ್ಕಿಗೆ ಕ್ರೋಶಿಕ್ ಎಂದು ಹೆಸರಿಸಲಾಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ, ಈ ಬೆಕ್ಕು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದು, ಯಾರೋ ಅದನ್ನು ಇಲ್ಲಿಗೆ ಬಿಟ್ಟು ಹೋಗಿದ್ದಾರೆ. ಬೆಕ್ಕಿನ ಬಣ್ಣ ಕಂದು ಮತ್ತು ಬಿಳಿ. ಸದ್ಯ ಪಶುವೈದ್ಯರು ಬೆಕ್ಕಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಬೆಕ್ಕಿನ ತೂಕವು ಅದರ ಹೃದಯ ಮತ್ತು ದೇಹದ ಇತರ ಅಂಗಗಳ ಮೇಲೆ ಕೂಡ ಪರಿಣಾಮ ಬೀರಿದೆ.
ಇದನ್ನೂ ಓದಿ: ಏಲಿಯನ್ ಮಗು ನೋಡಿದ್ದೀರಾ! ಶಿಶು ಕಂಡು ಬೆಚ್ಚಿಬಿದ್ದ ವೈದ್ಯರು.. ವೈರಲ್ ಆದ ಈ ಫೋಟೋ ನೋಡಿ
ಈ ಬೆಕ್ಕಿನ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಮೆಂಟ್‌ಗಳಲ್ಲಿ ಬೆಕ್ಕಿನ ಆರೋಗ್ಯದ ಬಗ್ಗೆ ಜನರು ಕಾಳಜಿ ವಹಿಸುತ್ತಿದ್ದಾರೆ. ಇದು ವಿಶ್ವದ ಐದು ಅತ್ಯಂತ ದಪ್ಪ ಬೆಕ್ಕುಗಳಲ್ಲಿ ಒಂದಾಗಿದೆ. ಟ್ರೆಡ್ ಮಿಲ್ ಮೇಲೆ ಓಡಿಸಿ, ಕಡಿಮೆ ಕೊಬ್ಬಿನ ಆಹಾರವನ್ನು ತಿನ್ನಿಸುವ ಮೂಲಕ ಬೆಕ್ಕಿನ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.