ಮೀನಿನ ಹೊಟ್ಟೆ ಸೇರಿದ ಹಾವು !ಮೀನಿನ ದೇಹ ತುಂಬಾ ಹರಿದಾಡಿ ಕಿವಿರಿನ ಮೂಲಕ ಜೀವಂತವಾಗಿ ಹೊರ ಬಂದ ಸರ್ಪ !ಈ ಅಪರೂಪದ ವಿಡಿಯೋ ನೋಡಿ

ಮೀನಿನ ಹೊಟ್ಟೆ ಸೇರಿದ ಬಳಿಕವೂ ಬದುಕಿ ಬಂತು ಈ ಹಾವು. ಮೀನಿನ ದೇಹ ತುಂಬಾ ಸುತ್ತಾಡಿ, ಕೊನೆಗೆ ಕಿವಿರಿನ ಮೂಲಕ ಆರಾಮಾಗಿ ಹೊರ ಬಂದ ಹಾವಿನ ವಿಡಿಯೋ ಆಶ್ಚರ್ಯ ಉಂಟು ಮಾಡುತ್ತದೆ.   

Written by - Ranjitha R K | Last Updated : Sep 10, 2024, 11:35 AM IST
  • ಇಂತಹ ಅದ್ಭುತ ದೃಶ್ಯಗಳನ್ನು ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ.
  • ಮೀನಿನ ಹೊಟ್ಟೆಯಲ್ಲಿ ಜೀವಂತ ಹಾವಿನ ಹರಿದಾಟ
  • ಕೊನೆಗೂ ಹೊರ ಬಂತು ಮೀನಿನ ದೇಹದಿಂದ
ಮೀನಿನ ಹೊಟ್ಟೆ ಸೇರಿದ ಹಾವು !ಮೀನಿನ ದೇಹ ತುಂಬಾ ಹರಿದಾಡಿ ಕಿವಿರಿನ ಮೂಲಕ ಜೀವಂತವಾಗಿ ಹೊರ ಬಂದ ಸರ್ಪ !ಈ ಅಪರೂಪದ ವಿಡಿಯೋ ನೋಡಿ

Viral Video : ಇಂತಹ ಅದ್ಭುತ ದೃಶ್ಯಗಳನ್ನು ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ. ಮೀನಿನ ಹೊಟ್ಟೆಯಲ್ಲಿ ಜೀವಂತ ನೀರ ಹಾವಿನ ಮರಿ ಓಡಾಡುತ್ತಿರುವುದನ್ನು ಎಕ್ಸ್-ರೇ ವಿಡಿಯೋ  ಮೂಲಕ ಕಂಡು ಹಿಡಿಯಲಾಗಿದೆ.ಈ ನೀರ ಹಾವನ್ನು ಒಂದು ವೇಳೆ ಮೀನು ತಿಂದರೂ ಅದು ಹಾಗೆಯೆ ಮೀನನ ದೇಹ ತುಂಬಾ ಸಂಚಾರ ಮಾಡುತ್ತಲೇ ಇರುತ್ತವೆಯಂತೆ. ಕೊನೆಗೆ ಮೀನಿನ  ಕಿವಿರುಗಳ ಮೂಲಕ  ಹೊರ ಬರುತ್ತವೆಯಂತೆ. ಈ ಸತ್ಯವನ್ನು ನಾಗಾಸಾಕಿ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡುಕೊಂಡಿದ್ದಾರೆ.ಅವರ ಪ್ರಕಾರ, ಪರಭಕ್ಷಕ ಜೀವಿಗಳ ಹೊಟ್ಟೆ ಸೇರಿದ ಮೇಲೆಯೂ ಜೀರ್ಣವಾಗದೆ ತಪ್ಪಿಸಿಕೊಂಡು ಬದುಕಿ ದೇಹದಿಂದ ಹೊರ ಬರುವ ಪ್ರಕ್ರಿಯೆಗಳನ್ನು ಗಮನಿಸಿದ ಮೊದಲನೆಯ ಅಧ್ಯಯನ ಇದಾಗಿದೆ.  

Add Zee News as a Preferred Source

ಸಮುದ್ರ ಜೀವಶಾಸ್ತ್ರಜ್ಞರಾದ ಯುಹಾ ಹಸೆಗಾವಾ ಮತ್ತು ಯುಕಿ ಕವಾಬಾಟಾ ಅವರ ಪ್ರಕಾರ, ಇದುವರೆಗೆ ಜಪಾನಿನ ನೀರ ಹಾವು ಅಥವಾ ಈಲ್‌ಗಳು ಮಾತ್ರ ಅಂತಹ ಸಾಮರ್ಥ್ಯವನ್ನು ಹೊಂದಿವೆಯಂತೆ. ತನ್ನ ಪರಭಕ್ಷಕನ ಹೊಟ್ಟೆ ಸೇರಿದರೂ ಅಲ್ಲಿಂದ ತಪ್ಪಿಸಿಕೊಂದು ಹೊರ ಬರುವ ಸಾಮರ್ಥ್ಯ ಇರುವ ಏಕೈಕ ಜಾತಿಯ ಮೀನು ಇದು.ಈ ಸಂಶೋಧನೆಯನ್ನು ' ಕರೆಂಟ್ ಬಯಾಲಜಿ 'ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ : ಹಾವು ಹಿಡಿಯಲು ಮುಂದಾದಾಗ ಕುಸಿದ ಸೀಲಿಂಗ್, ಮೇಲ್ಛಾವಣಿಯಲ್ಲಿ ಅವಿತಿದ್ದ ಎರಡು ದೈತ್ಯ ಹೆಬ್ಬಾವು, ಎದೆ ಝಲ್ ಎನಿಸುವ ವಿಡಿಯೋ!

 ಓಡಿಹೋಗುವುದರಲ್ಲಿ ನಿಪುಣ ಈ ನೀರಹಾವು : 
ಇಲ್ಲಿ ಈ ನೀರ ಹಾವು ಮೀನಿನ ಹೊಟ್ಟೆ ತಲುಪಿದ ನಂತರ ಏನು ಮಾಡುತ್ತದೆ ಎಂದು ತಿಳಿಯುವ ಸಲುವಾಗಿ ಎಕ್ಸ್-ರೇ ಮಾಡಲಾಯಿತು.ಮೀನಿನ ಹೊಟ್ಟೆ ಸೇರುವ ಮುನ್ನ ಈ ಈಲ್ ಅಥವಾ ನೀರ ಹಾವಿಗೆ ಬೇರಿಯಮ್ ಸಲ್ಫೇಟ್‌ನ ಚುಚ್ಚುಮದ್ದನ್ನು ನೀಡಲಾಗಿತ್ತು. ಹಾಗಾಗಿ ಇದು ಎಕ್ಸ್-ಕಿರಣಗಳಲ್ಲಿ ಸ್ಪಷ್ಟವಾಗಿ ಗೋಚರಿಸುವುದಕ್ಕೆ ಸಾಧ್ಯವಾಯಿತು.ನಂತರ ಇದನ್ನು ಡಾರ್ಕ್ ಸ್ಲೀಪರ್ ಎಂಬ ಹೆಸರಿನ ಮೀನಿನ ತೊಟ್ಟಿಗೆ ಬಿಡಲಾಯಿತು.ಹೀಗೆ  ಈಲ್‌ಗಳು ಮೀನಿನ ಹೊಟ್ಟೆ ಸೇರಿದ ಬಳಿಕವೂ ಹೇಗೆ ತಪ್ಪಿಸಿಕೊಂಡು ಹೊರ ಬರುತ್ತವೆ ಎನ್ನುವುದನ್ನು ಕಂಡು ಕೊಳ್ಳಲಾಯಿತು.

ಇದನ್ನೂ ನೋಡಿ:ಅಬ್ಬಬ್ಬಾ ಏನಿದು ಅಚ್ಚರಿ!! ಬಾಯ್ತೆರೆದು ಕಾರಂಜಿಯಂತೆ ನೀರು ಉಗುಳುತ್ತಿದೆ ಈ ಮರ: ಬೆರಗುಗೊಳಿಸುವ ಪ್ರಕೃತಿ ವಿಸ್ಮಯದ ವಿಡಿಯೋ ವೈರಲ್
 
ಮೀನಿನ ಹೊಟ್ಟೆಯಿಂದ ಹೊರ ಬಂದ ಹಾವು :  
 ಈ ಮರಿ ಹಾವು ತನ್ನ ಬಾಲವನ್ನು ಮುಂದಕ್ಕೆ ಇರಿಸಿ, ಹಿಂದಕ್ಕೆ ಸ್ಕ್ರಾಂಬಲ್ ಮಾಡಿ,  ನಿಧಾನವಾಗಿ ಮೀನಿನ ಅನ್ನನಾಳವನ್ನು ತಲುಪಿತು. ಇಲ್ಲಿಂದ ಕಿವಿರುಗಳ ಮೂಲಕ ಹೊರಗೆ ನಿರ್ಗಮಿಸಿದೆ. ಈ ಪ್ರಯೋಗದ ವಿಡಿಯೋ ಇಲ್ಲಿದೇ ನೋಡಿ. 

 

ಈ ಅದ್ಭುತ ವಿಡಿಯೋ ನೋಡಿ ಸಾವಿರಾರು ಮಂದಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News