ನವದೆಹಲಿ : ಒಬ್ಬ ಮಹಿಳೆ ಏಕಕಾಲದಲ್ಲಿ ಮೂರು ಅಥವಾ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಪ್ರಕರಣಗಳನ್ನು ಕೇಳಿರಬಹುದು. ಆದರೆ ಇಲ್ಲೊಂದು ವಿಶಿಷ್ಟವಾದ ಪ್ರಕರಣ ಬೆಳಕಿಗೆ ಬಂದಿದೆ. ಯುಕೆಯಲ್ಲಿ ವಾಸಿಸುತ್ತಿರುವ ಮಹಿಳೆ ಒಂದೇ ವರ್ಷದಲ್ಲಿ 3 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಲ್ಲಿ ಮಹಿಳೆ ಒಂದೇ ಬಾರಿ ತ್ರಿವಳಿಗಳಿಗೆ ಜನ್ಮ ನೀಡಿಲ್ಲ. ಬದಲಾಗಿ ಕೇವಲ 10 ತಿಂಗಳಲ್ಲಿ ಎರಡು ಬಾರಿ ಗರ್ಭವತಿಯಾಗಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ವರ್ಷಕ್ಕೆ ಎರಡು ಬಾರಿ ಗರ್ಭವತಿಯಾದ ಮಹಿಳೆ :
ದಿ ಸನ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, 23 ವರ್ಷದ ಶೈರ್ನಾ ಸ್ಮಿತ್, 2020ರ ಜನವರಿ 6 ರಂದು, ತನ್ನ ಮೊದಲ ಮಗನಿಗೆ ಜನ್ಮ ನೀಡಿದ್ದಾಳೆ. ಇದರ ನಂತರ ಮತ್ತೆ ಗರ್ಭಿಣಿಯಾಗಿದ್ದು, ಅಕ್ಟೋಬರ್ 30 ಕ್ಕೆ ಮತ್ತೆ ಅವಳಿ ಹೆಣ್ಣುಮಕ್ಕಳಿಗೆ (Twins) ಜನ್ಮ ನೀಡಿದ್ದಾರೆ.
ಇದನ್ನೂ ಓದಿ : Spook fest: 13 ಹಾರರ್ ಸಿನಿಮಾ ನೋಡಿ 95 ಸಾವಿರ ರೂ. ಜೇಬಿಗಿಳಿಸಿಕೊಳ್ಳಿ..!
ಗರ್ಭಧಾರಣೆಯ ಸುದ್ದಿ ಕೇಳಿ ಆಘಾತ :
ತನ್ನ ಮಗ Laighton ಮೂರು ತಿಂಗಳ ಮಗುವಾಗಿದ್ದಾಗ, ಶೈರ್ನಾ , ಮತ್ತೆ ಗರ್ಭಿಣಿಯಾಗಿರುವ (Pregnent) ವಿಚಾರ ತಿಳಿದಿದೆ. ತನ್ನ ಮಗನಿಗೆ ಕೇವಲ 3 ತಿಂಗಳಾಗಿರುವ ಕಾರಣ ಸುದ್ದಿ ಕೇಳಿ, ಶೈರ್ನಾ ಆಘಾತಕ್ಕೊಳಗಾಗಿದ್ದರು. ತಪಾಸಣೆಗಾಗಿ ಆಸ್ಪತ್ರೆಗೆ (Hospital) ತಲುಪಿದ ಶೈರ್ನಾ ಗರ್ಭದಲ್ಲಿ ಅವಳಿ ಮಕ್ಕಳು ಬೆಳೆಯುತ್ತಿರುವ ಬಗ್ಗೆ ವೈದ್ಯರು ಹೇಳಿದ್ದಾರೆ. ಈ ವಿಶಿಷ್ಟ ಪ್ರಕರಣದಿಂದ ವೈದ್ಯರು ಕೂಡಾ ಗೊಂದಲಕ್ಕೀಡಾಗಿದ್ದರು.
'ವೈದ್ಯರ (Doctor)ಮಾತು ಕೇಳಿ ಮೊದಲು ನನಗೂ ಆಶ್ಚರ್ಯವಾಯಿತು ಎನ್ನುತ್ತಾರೆ ಶೈರ್ನಾ. ಅವಳಿ ಮಕ್ಕಳು ಗರ್ಭದಲ್ಲಿ ಬೆಳೆಯುತ್ತಿರುವ ಬಗ್ಗೆ ತಿಳಿದು , ದುಃಖಿಸಬೇಕೆ ಎನ್ನುವುದು ಕೂಡಾ ತಿಳಿಯಲಿಲ್ಲ ಎನ್ನುತ್ತಾರೆ ಅವರು. ಏಕೆಂದರೆ ಈ ಸುದ್ದಿ ತಿಳೀಯುವ ಹೊತ್ತಿಗಾಗಲೇ ಶೈರ್ನಾ ಮತ್ತು ಅವಳ ಪತಿ ಬೇರ್ಪಟ್ಟಿದ್ದರು. ಸದ್ಯಕ್ಕೆ ಶೈರ್ನಾ ತನ್ನ ಮೂವರೂ ಮಕ್ಕಳೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ.
ಇದನ್ನೂ ಓದಿ : Covid-19 Vaccine For Under 12 Years Old Children: 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೂ ಕರೋನಾ ಲಸಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ