ನ್ಯೂಜಿಲ್ಯಾಂಡ್‌ನ ಮಸೀದಿಯಲ್ಲಿ ಗುಂಡಿನ ದಾಳಿ, 27 ಸಾವು

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಕ್ರಿಕೆಟ್ ತಂಡ ಸುರಕ್ಷಿತವಾಗಿದೆ ಎಂದು ತಂಡವು ಮಾಧ್ಯಮಗಳಿಗೆ ತಿಳಿಸಿದೆ.

Last Updated : Mar 15, 2019, 10:45 AM IST
ನ್ಯೂಜಿಲ್ಯಾಂಡ್‌ನ ಮಸೀದಿಯಲ್ಲಿ ಗುಂಡಿನ ದಾಳಿ, 27 ಸಾವು title=
Pic Courtesy: Reuters

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್ ನಗರದಲ್ಲಿ ಶುಕ್ರವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಹೆಗ್ಲಿ ಪಾರ್ಕ್ ಪ್ರದೇಶದಲ್ಲಿ ಮಸೀದಿಯ ಮೇಲೆ ಈ ದಾಳಿ ನಡೆದಿದ್ದು, ಘಟನೆಯಲ್ಲಿ 27 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮತ್ತೊಂದೆಡೆ, ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಕ್ರಿಕೆಟ್ ತಂಡ ಸುರಕ್ಷಿತವಾಗಿದೆ ಎಂದು ತಂಡವು ಮಾಧ್ಯಮಗಳಿಗೆ ತಿಳಿಸಿದೆ.

ಬಂದೂಕು ಧಾರಿಯೋರ್ವ ಆಟೋಮ್ಯಾಟಿಕ್ ಮಷಿನ್ ಗನ್ ಮೂಲಕ ಗುಂಡಿನ ದಾಳಿ ನಡೆಸಿದ್ದು, ಇದನ್ನು ಭಯೋತ್ಪಾದಕ ದಾಳಿ ಎಂದು ಶಂಕಿಸಲಾಗಿದೆ. ಪ್ರದೇಶದಲ್ಲಿ ಗುಂಡಿನ ದಾಳಿ ಮುಂದುವರೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ.

ನ್ಯೂಜಿಲೆಂಡ್ ಪೊಲೀಸ್ ಕಮಿಷನರ್ ಮೈಕ್ ಬುಷ್ ಪ್ರಕಾರ, ರಿಸ್ಥಿತಿ ಗಂಭೀರವಾಗಿದ್ದು, ದಾಳಿಕೋರರನ್ನು ಜೀವಂತ ಸೆರೆಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. 

ಇದೇ ಸಮಯದಲ್ಲಿ, ನ್ಯೂಜಿಲೆಂಡ್ ಪ್ರಧಾನಿ ಜಕಂಡಾ ಅರ್ಡೆರ್ನ್ ಈ ಘಟನೆಯನ್ನು ದೇಶದ ಕರಾಳ ದಿನವೆಂದು ಬಣ್ಣಿಸಿದ್ದಾರೆ. ಅವರ ಪ್ರಕಾರ, ಒಂದು ಆರೋಪಿಯನ್ನು ಬಂಧಿಸಲಾಗಿದೆ, ಇತರ ಶಂಕಿತರ ಹುಡುಕಾಟ ಮುಂದುವರೆದಿದೆ.

ಕ್ರೈಸ್ಟ್ ಚರ್ಚ್ ಪ್ರದೇಶದಲ್ಲಿ ಗುಂಡಿನ ದಾಳಿಯಿಂದಾಗಿ ಪರಿಸ್ಥಿತಿ ಗಂಭೀರವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಸ್ಥಳೀಯರನ್ನು ಮನೆಯಿಂದ ಹೊರಬರದಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Trending News