ನವದೆಹಲಿ: ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್ ಕರೆಯಲ್ಲಿ ಕೆನಡಾದ ಸಂಸದ ವಿಲಿಯಂ ಅಮೋಸ್ ಅವರು ಆಕಸ್ಮಿಕವಾಗಿ ನಗ್ನವಾಗಿ ಕಾಣಿಸಿಕೊಂಡಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ.
"ನಾನು ಇಂದು ನಿಜವಾಗಿಯೂ ದುರದೃಷ್ಟಕರ ತಪ್ಪು ಮಾಡಿದ್ದೇನೆ ಮತ್ತು ಅದರಿಂದ ನಾನು ಮುಜುಗರಕ್ಕೊಳಗಾಗಿದ್ದೇನೆ" ಎಂದು 46 ವರ್ಷದ ವಿಲಿಯಂ ಅಮೋಸ್ ಬುಧವಾರ ತಡರಾತ್ರಿ ತಮ್ಮ ಕಚೇರಿಯಲ್ಲಿ ನಡೆದ ಘಟನೆಯನ್ನು ವೈರಲ್ ಆದ ನಂತರ ಟ್ವೀಟ್ ಮಾಡಿದ್ದಾರೆ.
'ನಾನು ಜಾಗಿಂಗ್ ಗೆ ಹೋದ ನಂತರ ಬಟ್ಟೆ ಬದಲಾಯಿಸುವ ಸಂದರ್ಭದಲ್ಲಿ ಕ್ಯಾಮರಾ ಆಕಸ್ಮಿಕವಾಗಿ ಆನ್ ನಲ್ಲಿದೆ. ಸದನದಲ್ಲಿನ ನನ್ನ ಎಲ್ಲ ಸಹೋದ್ಯೋಗಿಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಇದು ಪ್ರಾಮಾಣಿಕ ತಪ್ಪು + ಅದು ಮತ್ತೆ ಸಂಭವಿಸುವುದಿಲ್ಲ. ಎಂದು ಕ್ಷಮೆ ಕೋರಿದ್ದಾರೆ.
ಇದನ್ನೂ ಓದಿ : Post Office ಖಾತೆದಾರರಿಗೆ ಬಿಗ್ ರಿಲೀಫ್! ಮಿನಿಮಂ ಬ್ಯಾಲೆನ್ಸ್ ಬಗ್ಗೆ ಮಹತ್ವದ ನಿರ್ಧಾರ
I made a really unfortunate mistake today & obviously I’m embarrassed by it. My camera was accidentally left on as I changed into work clothes after going for a jog. I sincerely apologize to all my colleagues in the House. It was an honest mistake + it won’t happen again.
— Will Amos (@WillAAmos) April 14, 2021
ಕ್ವಿಬೆಕ್ ಸಂಸದರು ಪ್ರಶ್ನೋತ್ತರ ಅವಧಿಯಲ್ಲಿ ವರ್ಚುವಲ್ ಅಧಿವೇಶನವನ್ನು ಉದ್ದೇಶಿಸಿಸಿ ಮಾತನಾಡುತ್ತಿರಲಿಲ್ಲ, ಆದರೆ ಅವರು ವಿವಸ್ತ್ರಗೊಳ್ಳುವ ಸ್ಥಿತಿಯಲ್ಲಿದ್ದಾಗ ಅದನ್ನು ಮಾಡಿದ್ದರೆ ಅವರು ಹೌಸ್ ಆಫ್ ಕಾಮನ್ಸ್ ಮಾರ್ಗದರ್ಶಿ ಪುಸ್ತಕವನ್ನು ಉಲ್ಲಂಘಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ : Free LPG Cylinder: ಯಾವುದೇ ಪುರಾವೆಯಿಲ್ಲದೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಫ್ರೀ ಆಗಿ ಪಡೆಯಲು ಇದು ಸುಲಭ ಮಾರ್ಗ
'ರೂಲ್ಸ್ ಆಫ್ ಆರ್ಡರ್ ಮತ್ತು ಡೆಕೋರಮ್' ವಿಭಾಗದ ಅಡಿಯಲ್ಲಿ, ಅದನ್ನು ಚರ್ಚೆಯಲ್ಲಿ ಕೂರಿಸಲು ಯಾವುದೇ ಡ್ರೆಸ್ ಕೋಡ್ ಅಗತ್ಯವಿಲ್ಲ, ಆದರೆ ಪುರುಷ ಭಾಷಣಕಾರರು ಜಾಕೆಟ್, ಶರ್ಟ್ ಮತ್ತು ಟೈಗಳಂತಹ ವ್ಯವಹಾರಿಕ ಉಡುಪನ್ನು ಧರಿಸಿರಬೇಕು"ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.