Turkey-Syria Earthquake: ಸೋಮವಾರ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಬಳಿಕ ಸಿರಿಯಾದ ಅಲೆಪ್ಪೊದಲ್ಲಿ ಕುಸಿದ ಕಟ್ಟಡದ ಅಡಿಯಲ್ಲಿ ಗರ್ಭಿಣಿ ತಾಯಿ ತನ್ನ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ರಕ್ಷಣಾ ಕಾರ್ಯಕರ್ತರು ಮಗುವನ್ನು ರಕ್ಷಿಸಿ ಆಕೆಯನ್ನು ಕಾಡಲೆಂದು ಅಲ್ಲಿಗೆ ಧಾವಿಸುವ ಮೊದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಸ್ಥಳೀಯ ಕಾರ್ಯಕರ್ತರು ವರದಿ ಮಾಡಿದ್ದಾರೆ. ಆಕೆಯ ನವಜಾತ ಶಿಶುವನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ.
ಕತ್ಮಾ ಗ್ರಾಮದಲ್ಲಿ ಭೂಕಂಪದ ಅವಶೇಷಗಳಿಂದ ಎಳೆಯ ಮಗುವನ್ನು ಹೊರತೆಗೆಯುವ ವೀಡಿಯೊವನ್ನು ಸಿರಿಯನ್ ಸ್ವಯಂಸೇವಕ ಸಂಸ್ಥೆ ಹಂಚಿಕೊಂಡಿದೆ. ಈ ವಿಡಿಯೋ ಕಂಡ ನೆಟ್ಟಿಗರು ಕಣ್ಣೀರು ಸುರಿಸಿದ್ದಾರೆ.
ಇದನ್ನೂ ಓದಿ: ಟರ್ಕಿಯಲ್ಲಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 4,300ಕ್ಕೆ ಏರಿಕೆ! ಭಾರತ ಸೇರಿದಂತೆ ಹಲವು ದೇಶಗಳಿಂದ ಸಹಾಯ ಹಸ್ತ
ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪ ಮತ್ತು ಆ ಬಳಿಕ ನಡೆದ ಆಘಾತಗಳಿಂದ ಸಿರಿಯಾ ಮತ್ತು ಟರ್ಕಿ ನಲುಗಿ ಹೋಗಿವೆ. ಈಗಾಗಲೇ ಸಾವಿನ ಸಂಖ್ಯೆ 17,500 ದಾಟಿದೆ ಎಂದು ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವಲ್ಲಿ ಶ್ರಮವಹಿಸುತ್ತಿದೆ. ಈ ಕ್ರೂರ ದಿನಗಳನ್ನು “ಸಮಯದ ವಿರುದ್ಧ ಓಟ” ಎಂದು ಹೇಳಿದೆ.
12 ವರ್ಷಗಳ ಕ್ರೂರ ಅಂತರ್ಯುದ್ಧದ ನಂತರ ಈಗಾಗಲೇ ನಿರಾಶ್ರಿತರ ಬಿಕ್ಕಟ್ಟನ್ನು ಹೊಂದಿರುವ ಸಿರಿಯಾ ಇದೀಗ ಮತ್ತೊಮ್ಮೆ ತೊಂದರೆಯನ್ನು ಎದುರಿಸುತ್ತಿದೆ. ಭೂಕಂಪದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶವು ಸಿರಿಯನ್ ಅಧ್ಯಕ್ಷ ಬಶರ್ ಅಲ್-ಅಸ್ಸಾದ್‌ನಿಂದ ನಿಯಂತ್ರಿಸಲ್ಪಡುವ ಸರ್ಕಾರದ ಹಿಡಿತದ ಪ್ರದೇಶ ಮತ್ತು ಟರ್ಕಿಯ ಗಡಿಯಲ್ಲಿರುವ ಹಾಗೂ ಸರ್ಕಾರಿ ಪಡೆಗಳಿಂದ ಸುತ್ತುವರಿದಿರುವ ವಿರೋಧದ ಹಿಡಿತದ ಪ್ರದೇಶದ ನಡುವೆ ವಿಭಜಿಸಲ್ಪಟ್ಟಿದೆ.
ಸೋಮವಾರದ ಭೂಕಂಪದ ವಿನಾಶಕ್ಕೆ ಪ್ರತಿಕ್ರಿಯಿಸುವ ಪ್ರಬಲ ಸಾಮರ್ಥ್ಯವನ್ನು ಟರ್ಕಿ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಸಿರಿಯಾದಲ್ಲಿ ಇದೀಗ ಅಗತ್ಯತೆಗಳು ಹೆಚ್ಚು ತೀವ್ರವಾಗಿವೆ.
"ಸಿರಿಯಾದಾದ್ಯಂತ ಸುಮಾರು 12 ವರ್ಷಗಳ ಸುದೀರ್ಘ, ಸಂಕೀರ್ಣ ಬಿಕ್ಕಟ್ಟಿನ ನಂತರ ಅಗತ್ಯಗಳು ಅತ್ಯಧಿಕವಾಗಿದೆ. ಮಾನವೀಯ ನಿಧಿಯು ಕ್ಷೀಣಿಸುತ್ತಲೇ ಇದೆ" ಎಂದು WHO ಹಿರಿಯ ತುರ್ತು ಅಧಿಕಾರಿ ಅಡೆಲ್ಹೀಡ್ ಮಾರ್ಸ್ಚಾಂಗ್ ಹೇಳಿದರು.
ಸಿರಿಯಾದ ರಾಷ್ಟ್ರೀಯ ಭೂಕಂಪ ಕೇಂದ್ರದ ಮುಖ್ಯಸ್ಥ ರೇದ್ ಅಹ್ಮದ್, ಇದನ್ನು "ಕೇಂದ್ರದ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಭೂಕಂಪ" ಎಂದು ಕರೆದಿದ್ದಾರೆ.
ಟರ್ಕಿಯಲ್ಲಿ 1939ರಲ್ಲಿ 7.8-ತೀವ್ರತೆ ಭೂಕಂಪನವು ಸಂಭವಿಸಿದ್ದು, ಅದರಲ್ಲಿ ಪೂರ್ವ ಎರ್ಜಿಂಕನ್ ಪ್ರಾಂತ್ಯದ 33,000 ಮಂದಿ ಸಾವನ್ನಪ್ಪಿದ್ದರು.
ಸೋಮವಾರ ಸಂಭವಿಸಿದ ಮೊದಲ ಭೂಕಂಪವು ಮುಂಜಾನೆ 4.17 (01.17 GMT)ಕ್ಕೆ ಸುಮಾರು 18 ಕಿಲೋಮೀಟರ್ (11 ಮೈಲಿ) ಆಳದಲ್ಲಿ ಟರ್ಕಿಯ ನಗರವಾದ ಗಜಿಯಾಂಟೆಪ್ ಬಳಿ ಸಂಭವಿಸಿದೆ. ಇದು ಸುಮಾರು ಎರಡು ಮಿಲಿಯನ್ ಜನರಿಗೆ ನೆಲೆಯಾಗಿದ್ದ ಪ್ರದೇಶವಾಗಿದೆ ಎಂದು ಯುಎಸ್ ಜಿಯಾಲಾಜಿಕಲ್ ಸರ್ವೆ ಹೇಳಿದೆ.
ಇದನ್ನೂ ಓದಿ: Photos : ಭೂಕಂಪದ ನಂತರ 17 ಗಂಟೆಗಳವರೆಗೆ ತನ್ನ ಪುಟ್ಟ ತಮ್ಮನನ್ನು ಸುರಕ್ಷಿತವಾಗಿರಿಸಿದ ಏಳು ವರ್ಷದ ಬಾಲಕಿ
ಟರ್ಕಿಯಲ್ಲಿ ನಡುಕ ಸಂಭವಿಸಿದ ಎಂಟು ನಿಮಿಷಗಳ ನಂತರ ಮುಖ್ಯ ಭೂಕಂಪದ ನಡುಕ ಗ್ರೀನ್‌ಲ್ಯಾಂಡ್‌ನ ಪೂರ್ವ ಕರಾವಳಿಯ ಬಳಿ ಸಂಭವಿಸಿದೆ ಎಂದು ಡೆನ್ಮಾರ್ಕ್‌ನ ಭೂವೈಜ್ಞಾನಿಕ ಸಂಸ್ಥೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.