Afghanistan Crisis: China-Russia ಗುಪ್ತಚರ ಇಲಾಖೆಯ ಮುಖ್ಯಸ್ಥರ ಜೊತೆಗೆ ISI ಚೀಫ್ ಮಾತುಕತೆ, ಭಾರತದ ಬಗ್ಗೆ ಹೇಳಿದ್ದೇನು?

Afghanistan Crisis: ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥ ಫೈಜ್ ಹಮೀದ್ (ISI Chief Faiz Hameed) ಶನಿವಾರ ರಷ್ಯಾ, ಚೀನಾ, ಇರಾನ್ ಮತ್ತು ತಜಕಿಸ್ತಾನದ ಗುಪ್ತಚರ ಮುಖ್ಯಸ್ಥರನ್ನು (Intellegence Chief) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.  ಮೂಲಗಳ ಪ್ರಕಾರ, "ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಅಫ್ಘಾನಿಸ್ತಾನದ ಹಿಂದಿನ ಸರ್ಕಾರಗಳೊಂದಿಗೆ ಭಾರತದ (India) ಪಾತ್ರ" ದ ಬಗ್ಗೆಯೂ ಅವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Written by - Nitin Tabib | Last Updated : Sep 12, 2021, 12:43 PM IST
  • ರಷ್ಯಾ-ಚೀನಾ ಗುಪ್ತಚರ ಮುಖ್ಯಸ್ಥರ ಜೊತೆಗೆ ISI ಮಾತುಕತೆ
  • ರಷ್ಯಾ, ಚೀನಾ, ಇರಾನ್ ಹಾಗೂ ತಜಕಿಸ್ತಾನ್ ಗುಪ್ತಚರ ಮುಖ್ಯಸ್ತರ ಜೊತೆಗೆ ಫೈಜ್ ಹಮೀದ್ ಮಾತುಕತೆ.
  • ಭಾರತದ ಬಗ್ಗೆ ನೀಡಿರುವ ದೊರು ಏನು ತಿಳಿಯಲು ಸುದ್ದಿ ಓದಿ.
Afghanistan Crisis: China-Russia ಗುಪ್ತಚರ ಇಲಾಖೆಯ ಮುಖ್ಯಸ್ಥರ ಜೊತೆಗೆ ISI ಚೀಫ್ ಮಾತುಕತೆ, ಭಾರತದ ಬಗ್ಗೆ ಹೇಳಿದ್ದೇನು? title=
Afghanistan Crisis (File Photo)

ನವದೆಹಲಿ:  Afghanistan Crisis - ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ನಂತರ, ವಿಶ್ವದ ಹಲವು ದೇಶಗಳ ವಿದೇಶಾಂಗ ನೀತಿ ಬದಲಾಗುತ್ತಿದೆ. ಇದೇ ಸರಣಿಯಲ್ಲಿ ಇದೀಗ ಪಾಕಿಸ್ತಾನದ ಐಎಸ್ ಐ ಮುಖ್ಯಸ್ಥ ಫೈಜ್ ಹಮೀದ್ ರಷ್ಯಾ (Russia), ಚೀನಾ (China), ಇರಾನ್ (Iran) ಮತ್ತು ತಜಕಿಸ್ತಾನದ (Tazakistan) ಗುಪ್ತಚರ ಮುಖ್ಯಸ್ಥರನ್ನು ಶನಿವಾರ ಭೇಟಿ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಸಮಯದಲ್ಲಿ, ಅವರೆಲ್ಲರೂ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ನಂತರ ವಿಶ್ವದಲ್ಲಿ ಬದಲಾಗುತ್ತಿರುವ 'ವರ್ಲ್ಡ್ ಆರ್ಡರ್' (World Order) ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಜೊತೆಗೆ ಚೀನಾ ಕೂಡ ತಾಲಿಬಾನ್ (Taliban) ಅನ್ನು ಬಹಿರಂಗವಾಗಿ ಬೆಂಬಲಿಸಿದೆ ಎಂಬುದು ಇಲ್ಲಿ ಗಮನಾರ್ಹ.

ಮೂಲಗಳ ಪ್ರಕಾರ, ಪಾಕಿಸ್ತಾನವು ಅಫ್ಘಾನಿಸ್ತಾನದ ಹೊಸ ಸರ್ಕಾರದ (Afghanistan New Government) ಬಗ್ಗೆ ಈ ದೇಶಗಳ ಗುಪ್ತಚರ ಪ್ರತಿನಿಧಿಗಳಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ಹೊಸ ಸರ್ಕಾರದಲ್ಲಿ ಯಾವ ಸಂಘಟನೆಗಳು ಮತ್ತು ದೇಶಗಳ ಪಾತ್ರವಿದೆ ಎಂದು ಸಹ ಹೇಳಲಾಗಿದೆ. ಈ ಹಿಂದೆ ಹಮೀದ್ ಕೂಡ ಸರ್ಕಾರ ರಚನೆಗಾಗಿ ಕಾಬೂಲ್‌ಗೆ ಹೋಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಅವರು ತಮ್ಮ ಭೇಟಿಯ ಬಗ್ಗೆ ಮಾಹಿತಿ ಯನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಹೊರತಾಗಿ, "ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಹಿಂದಿನ ಅಫ್ಘಾನ್ ಸರ್ಕಾರಗಳ ಜೊತೆಗೆ ಭಾರತ (India) ವಹಿಸಿದ ಪಾತ್ರ" ದ ಬಗ್ಗೆಯೂ ಅವರು ಮಾತನಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಪಾಕಿಸ್ತಾನದ 'ತಾಲಿಬಾನ್ ಪ್ರೇಮ'
ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನದ ಆರ್ಥಿಕತೆಯನ್ನು ನಿಯಂತ್ರಿಸಲು ಬಯಸುತ್ತಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನವು ಗುರುವಾರ ಅಫ್ಘಾನಿಸ್ತಾನಕ್ಕಾಗಿ ತನ್ನ ಆರ್ಥಿಕ ಯೋಜನೆಗಳನ್ನು ಘೋಷಿಸಿದೆ ಮತ್ತು ಪಾಕಿಸ್ತಾನದ ರೂಪಾಯಿಗಳಲ್ಲಿ ತಾಲಿಬಾನ್ ಜೊತೆ ದ್ವಿಪಕ್ಷೀಯ ವ್ಯಾಪಾರವನ್ನು ಮಾಡಲು ನಿರ್ಧರಿಸಿದೆ. ಇದಕ್ಕೂ ಮೊದಲು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ತಾಲಿಬಾನ್ ದ್ವಿಪಕ್ಷೀಯ ವ್ಯಾಪಾರವು US ಡಾಲರ್ಗಳಲ್ಲಿತ್ತು ಮತ್ತು ಅಫಘಾನ್ ಕರೆನ್ಸಿ ಪ್ರಬಲವಾಗಿತ್ತು. ಈ ಕ್ರಮದಿಂದ, ಪಾಕಿಸ್ತಾನದ ಕರೆನ್ಸಿ ಅಫಘಾನ್ ವ್ಯಾಪಾರಿಗಳು ಮತ್ತು ವ್ಯಾಪಾರ ಸಮುದಾಯದ ಮೇಲೆ ನಿಯಂತ್ರಣ ಸಾಧಿಸಲಿದೆ. 

ಇದನ್ನೂ ಓದಿ-ಮಹಿಳೆಯರು ಮಂತ್ರಿಯಾಗಲು ಸಾಧ್ಯವಿಲ್ಲ, ಅವರು ಮಕ್ಕಳನಷ್ಟೇ ಹೆರಬೇಕು: ತಾಲಿಬಾನ್ ವಕ್ತಾರ

ಪಾಕಿಸ್ತಾನದ (Pakistan) ಹೆಜ್ಜೆಯಿಂದ ಕುಪಿತಗೊಂಡಿದೆಯೇ ತಾಲಿಬಾನ್
ಇದಕ್ಕೂ ಮೊದಲು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ ಪಾಕ್-ತಾಲಿಬಾನ್ ಸಂಬಂಧಗಳಲ್ಲಿ ಇದೀಗ ಹುಳಿ ಕಾಣಿಸಿಕೊಳ್ಳಲು ಆರಂಭಿಸಿದೆ ಎನ್ನಲಾಗಿದೆ. ಶುಕ್ರವಾರ ಫೇಸ್ ಬುಕ್ ಮೇಲೆ ವೈರಲ್ ಆಗಿರುವ ಪೋಸ್ಟ್ ವೊಂದರಲ್ಲಿ ಓರ್ವ ತಾಲಿಬಾನ್ ಕಮಾಂಡರ್ (Taliban Commander Viral Post) ಮತ್ತೋರ್ವ ತಾಲಿಬಾನ್ ಕಮಾಂಡರ್ ಜೊತೆಗೆ ಮಾತುಕತೆ ನಡೆಸುತ್ತಿರುವುದನ್ನು ಕೇಳಬಹುದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತಾಲಿಬಾನ್ ಪ್ರತಿಷ್ಠೆಯನ್ನು ಹಾಳುಮಾಡಿದೆ ಎಂದು ಅವರು ಮಾತನಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ರಚನೆಯಾದ ಹೊಸ ಕ್ಯಾಬಿನೆಟ್ ಪಾಕ್ ಮತ್ತು ತಾಲಿಬಾನ್ ನಡುವಿನ ಬಿರುಕಿಗೆ ಕಾರಣವಾಗಿದೆ ಎನ್ನಲಾಗಿದೆ. ISI ಮುಖ್ಯಸ್ಥ ಈ ಕ್ಯಾಬಿನೆಟ್ ರಚನೆಯ ವೇಳೆ ಹಕ್ಕಾನಿ ಹಾಗೂ ಕ್ವೆಟಾ ಶೂರಾ ಹೆಸರಿನ ಪ್ರಸ್ತಾವನೆ ಸಲ್ಲಿಸಿದ್ದರು ಎನ್ನಲಾಗಿದೆ. ಆದರೆ, ತಾಲಿಬಾನ್ ಮತ ಅದಕ್ಕೆ ವಿರುದ್ಧವಾಗಿತ್ತು. ಜನರಲ್ ಫೈಜ್ ಹಮೀದ್ ತಾಲಿಬಾನ್ ನಡುವೆ ದೊಡ್ಡ ಸಮಸ್ಯೆಯನ್ನೇ ಹುಟ್ಟುಹಾಕಿದ್ದಾರೆ ಎಂದು ತಾಲಿಬಾನ್ ಕಮಾಂಡರ್ ಮಾತುಕತೆಯಲ್ಲಿ ಕೇಳಿಬಂದಿದೆ.

ಇದನ್ನೂ ಓದಿ-ಆಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಸಹೋದರನನ್ನು ಹತ್ಯೆಗೈದ ತಾಲಿಬಾನ್

ಅವಕಾಶಕ್ಕಾಗಿ ಕಾದು ಕುಳಿತ ಚೀನಾ 
ಸುದ್ದಿ ಸಂಸ್ಥೆ ರಾಯಿಟರ್ಸ್ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ರಷ್ಯಾ ಶುಕ್ರವಾರ ತಾಲಿಬಾನ್ ಸರ್ಕಾರದ ಉದ್ಘಾಟನಾ ಸಮಾರಂಭದಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ ಎನ್ನಲಾಗಿದೆ. ಏತನ್ಮಧ್ಯೆ, ಹೊಸ ಅಫ್ಘಾನ್ ಆಡಳಿತದಲ್ಲಿ ಪಾತ್ರವನ್ನು ವಹಿಸಲು ಚೀನಾ ಉತ್ಸುಕವಾಗಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುವ ಮೊದಲು, ಗುಂಪಿನ ಮುಖ್ಯ ಸಂಧಾನಕಾರ ಮುಲ್ಲಾ ಅಬ್ದುಲ್ ಘನಿ ಬರದಾರ್ ನೇತೃತ್ವದ ಉನ್ನತ ತಾಲಿಬಾನ್ ನಾಯಕರಿಗೆ ಚೀನಾ ಆತಿಥ್ಯ ವಹಿಸಿತ್ತು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜುಲೈನಲ್ಲಿ ತಾಲಿಬಾನ್ ನಿಯೋಗ ತಿಯಾನ್ಜಿನ್ ಗೆ ಭೇಟಿ ನೀಡಿದಾಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಒಂದು ಪ್ರಮುಖ ಮಿಲಿಟರಿ ಮತ್ತು ರಾಜಕೀಯ ಶಕ್ತಿಯಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ-ಮಹಿಳಾ ವಿರೋಧಿ ನೀತಿಯನ್ನೇ ಮುಂದುವರೆಸಿದ ತಾಲಿಬಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News