ಮತ್ತೆ ಬಾಲ ಬಿಚ್ಚುತ್ತಿರುವ ಚೀನಾ, ಹೊಸ ಕಾನೂನು ರಚನೆ, ಭಾರತದ ಮೇಲೆ ಹೆಚ್ಚಲಿದೆಯೇ ಒತ್ತಡ

 ಪೂರ್ವ ಲಡಾಖ್‌ನಲ್ಲಿ ಭಾರತದೊಂದಿಗೆ ನಡೆಯುತ್ತಿರುವ ಗಡಿ ವಿವಾದ ಮತ್ತು ಅರುಣಾಚಲ ಪ್ರದೇಶದ ಪರಿಸ್ಥಿತಿಯ ನಡುವೆ ಚೀನಾ ಈ ಕಾನೂನನ್ನು ಅನುಮೋದಿಸಿದೆ ಎನ್ನಲಾಗಿದೆ.

Written by - Ranjitha R K | Last Updated : Oct 25, 2021, 10:06 AM IST
  • ಭೂ ಸಂರಕ್ಷಣೆ ಕುರಿತು ಹೊಸ ಕಾನೂನು ರಚಿಸಿದ ಚೀನಾ
  • ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಕಾನೂನು
  • ಭಾರತದೊಂದಿಗಿನ ಸಂಬಂಧದ ಮೇಲೆ ಬೀರಬಹುದು ಪರಿಣಾಮ
ಮತ್ತೆ ಬಾಲ ಬಿಚ್ಚುತ್ತಿರುವ ಚೀನಾ, ಹೊಸ ಕಾನೂನು ರಚನೆ, ಭಾರತದ ಮೇಲೆ ಹೆಚ್ಚಲಿದೆಯೇ ಒತ್ತಡ title=
ಭೂ ಸಂರಕ್ಷಣೆ ಕುರಿತು ಹೊಸ ಕಾನೂನು ರಚಿಸಿದ ಚೀನಾ (file photo)

ಬೀಜಿಂಗ್ : ಚೀನಾ (China) ತನ್ನ ಕುತಂತ್ರದಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಈಗ ಅದು ಭೂ ಸಂರಕ್ಷಣೆ ಕುರಿತು ಹೊಸ ಕಾನೂನನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದೊಂದಿಗಿನ ಗಡಿ ವಿವಾದವನ್ನು (Border Dispute) ಹೆಚ್ಚಿಸಲು ಪ್ರಯತ್ನಿಸಿದೆ. ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ಸುದ್ದಿಯ ಪ್ರಕಾರ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (NPC)ನ ಸ್ಥಾಯಿ ಸಮಿತಿಯ ಸದಸ್ಯರು ಶನಿವಾರ ಸಂಸತ್ತಿನ ಮುಕ್ತಾಯ ಸಭೆಯಲ್ಲಿ ಈ ಕಾನೂನನ್ನು ಅನುಮೋದಿಸಿದ್ದಾರೆ. ಈ ಕಾನೂನು ಮುಂದಿನ ವರ್ಷ ಜನವರಿ 1 ರಿಂದ ಜಾರಿಗೆ ಬರಲಿದೆ. 

ಅರುಣಾಚಲ ಪ್ರದೇಶದ ವಿವಾದ:
ಹೊಸ ಕಾನೂನು "ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪವಿತ್ರ ಮತ್ತು ಅಖಂಡ" ಎಂದು ವಿವರಿಸುತ್ತದೆ. ಕ್ಸಿನ್ಹುವಾ ವರದಿಯ ಪ್ರಕಾರ, ಗಡಿ ಭದ್ರತೆಯನ್ನು (Border issue) ಬಲಪಡಿಸಲು, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ, ಗಡಿ ಪ್ರದೇಶಗಳನ್ನು ತೆರೆಯಲು, ಸಾರ್ವಜನಿಕ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು, ಇಂತಹ ಪ್ರದೇಶಗಳಲ್ಲಿ ಪ್ರಚಾರ ಮತ್ತು ಉತ್ತೇಜನ ನೀಡಲು ಕಾನೂನಿನಲ್ಲಿ ಸೂಚಿಸಲಾಗಿದೆ. ಪೂರ್ವ ಲಡಾಖ್‌ನಲ್ಲಿ (Ladakh) ಭಾರತದೊಂದಿಗೆ ನಡೆಯುತ್ತಿರುವ ಗಡಿ ವಿವಾದ ಮತ್ತು ಅರುಣಾಚಲ ಪ್ರದೇಶದ ಪರಿಸ್ಥಿತಿಯ ನಡುವೆ ಚೀನಾ (China) ಈ ಕಾನೂನನ್ನು ಅನುಮೋದಿಸಿದೆ ಎನ್ನಲಾಗಿದೆ. 

ಇದನ್ನೂ ಓದಿ : ಪಾಕಿಸ್ತಾನದ ಧಾರಾವಾಹಿಗಳಲ್ಲಿ ಇನ್ಮುಂದೆ ಅಪ್ಪುಗೆಯ ದೃಶ್ಯಗಳು ಇರುವಂತಿಲ್ಲ..!

ವಶಪಡಿಸಿಕೊಂಡ ಭೂಮಿ ಅವರಿಗೇ ಸೇರಿದ್ದು : 
ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯು ಪರಿಶುದ್ಧತೆಯಾಗಿರಬೇಕು ಅದನ್ನು ಯಾವುದೇ ರೀತಿಯಲ್ಲಿ ಬದಲಾಯಿಸಲಾಗುವುದಿಲ್ಲ ಎಂದು ಕಾನೂನು ಹೇಳುತ್ತದೆ. ಅಂದರೆ, ಚೀನಾದ ವಶದಲ್ಲಿರುವ ಭೂಮಿ ಚೀನಾಗೇ ಸೇರಿದ್ದು ಎಂದು ಪರಿಗಣಿಸಲಾಗುತ್ತದೆ. ಅದರಿಂದ ಹಿಂದೆ ಸರಿಯುವುದು ಎಂದರೆ ಕಾನೂನಿನ ಉಲ್ಲಂಘನೆ ಮತ್ತು ದೇಶದ ಸಾರ್ವಭೌಮತ್ವದ ಮೇಲೆ ರಾಜಿ ಮಾಡಿಕೊಳ್ಳುವುದು ಎಂದರ್ಥ. ಆದ್ದರಿಂದ, ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು, ಚೀನಾ ಗಡಿಗಳಲ್ಲಿ (China Border)ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತದೆ ಮತ್ತು ಅದರ ಸಮಗ್ರತೆಗೆ ಹಾನಿಯಾಗುವ ಎಲ್ಲಾ ಕ್ರಮಗಳಿಗೆ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದೆ.

ಇವು ಗಡಿ ಕಾನೂನಿನ ಎರಡು ಅಂಶಗಳು :
ಈ ಕಾನೂನು ಗಡಿ ಭದ್ರತೆಯನ್ನು ಬಲಪಡಿಸಲು ಮತ್ತು ಗಡಿ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ. ಈ ಕಾನೂನಿಗೆ ಎರಡು ಅಂಶಗಳಿರುತ್ತವೆ. ಮೊದಲನೆಯದಾಗಿ, ಚೀನಾ ತನ್ನ ನೆರೆಯ ರಾಷ್ಟ್ರಗಳೊಂದಿಗೆ ನಡೆಯುತ್ತಿರುವ ಗಡಿ ವಿವಾದವನ್ನು ಈ ಮೂಲಕ ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ. ಎರಡನೆಯದಾಗಿ, ಚೀನಾ ತನ್ನ ವಶದಲ್ಲಿರುವ ಭೂಮಿಯನ್ನು ತನ್ನದೆಂದು ಪರಿಗಣಿಸಿ ಅದನ್ನು ಉಳಿಸಿಕೊಳ್ಳಲು ಅಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಕಾನೂನು ಭೂಮಿ ಮತ್ತು ಸಮುದ್ರ ಗಡಿ ಪ್ರದೇಶಗಳಿಗೆ ಅನ್ವಯಿಸುತ್ತದೆ. ಗಡಿ ವಿವಾದವನ್ನು ಪರಿಹರಿಸಲು ಚೀನಾ ಭಾರತ ಮತ್ತು ಭೂತಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. 

ಇದನ್ನೂ ಓದಿ : ಕಲಿಯಲು ಉತ್ತಮ ಮಾರ್ಗ ಯಾವುದು? ಪುಸ್ತಕ ಅಥವಾ ಗ್ಯಾಜೆಟ್ ಕಲಿಕೆ..!

ತೈವಾನ್ ಬಗ್ಗೆ ಮುಂದುವರೆದ ವಿವಾದ :
ದಕ್ಷಿಣ ಚೀನಾ ಸಮುದ್ರದಲ್ಲಿ ನೆರೆಯ ರಾಷ್ಟ್ರಗಳೊಂದಿಗೆ ಚೀನಾದ ಕಡಲ ಗಡಿ ವಿವಾದ ಮುಂದುವರಿದಿದೆ. ಚೀನಾ ತೈವಾನ್‌ನ ಸ್ವತಂತ್ರ ಅಸ್ತಿತ್ವವನ್ನು ಒಪ್ಪಿಕೊಳ್ಳುವುದಿಲ್ಲ, ಅದು ಚೀನಾದ ಭಾಗ ಎಂದೇ ಹೇಳುತ್ತದೆ. ಚೀನಾ ಕೂಡ ಟಿಬೆಟ್ (Tibet) ಅನ್ನು ತನ್ನ ಭಾಗವೆಂದು ಪರಿಗಣಿಸುತ್ತಿದೆ. ಆದರೆ ಟಿಬೆಟ್ ಭಾರತ ಮತ್ತು ಚೀನಾ ನಡುವಿನ ಬಫರ್ ರಾಜ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News