ಕಲಿಯಲು ಉತ್ತಮ ಮಾರ್ಗ ಯಾವುದು? ಪುಸ್ತಕ ಅಥವಾ ಗ್ಯಾಜೆಟ್ ಕಲಿಕೆ..!

ಕಾಗದದ ಓದುವಿಕೆ ಗ್ರಹಿಕೆಯನ್ನು ಸುಧಾರಿಸುತ್ತದೆ ಮತ್ತು ಪರೀಕ್ಷೆಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಸಂಶೋಧನಾ ಫಲಿತಾಂಶಗಳು ಕಂಡುಕೊಂಡಿವೆ.

Written by - Puttaraj K Alur | Last Updated : Oct 24, 2021, 02:00 PM IST
  • ಕಲಿಯುವ ಉತ್ತಮ ಮಾರ್ಗ ಯಾವುದು ಎಂಬುದರ ಬಗ್ಗೆ ಸಂಶೋಧನೆಗಳು ಹೇಳಿದ್ದೇನು..?
  • ಗ್ಯಾಜೆಟ್ ಗಿಂತಲೂ ಪುಸ್ತಕದ ಓದು ಅತ್ಯಂತ ಪರಿಣಾಮಕಾರಿ ಎಂದು ಹೇಳಿರುವ ಸಂಶೋಧನೆಗಳು
  • ಗ್ಯಾಜೆಟ್ ಓದು ಪ್ರಾರಂಭದಲ್ಲಿ ಮಾತ್ರ ಖುಷಿ ನೀಡುತ್ತದೆ, ಬಳಿಕ ಆಸಕ್ತಿ ಕಳೆದುಹೋಗುತ್ತದೆ
ಕಲಿಯಲು ಉತ್ತಮ ಮಾರ್ಗ ಯಾವುದು? ಪುಸ್ತಕ ಅಥವಾ ಗ್ಯಾಜೆಟ್ ಕಲಿಕೆ..!

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಕಾರಣ ಇಂದು ಎಲ್ಲವೂ ಆನ್‌ಲೈನ್‌ ಆಗಿದೆ. ಮಕ್ಕಳ ಶಿಕ್ಷಣವೂ ಆನ್‌ಲೈನ್‌ನಲ್ಲಿ ಸಾಗುತ್ತಿದೆ. ಆದರೆ ಆನ್‌ಲೈನ್ ಕಲಿಕೆ(Online Study)ಯು ಪುಸ್ತಕಗಳಂತೆ ನಿಜವಾಗಿಯೂ ಪರಿಣಾಮಕಾರಿಯಾಗಿದೆಯೇ? ಇತ್ತೀಚೆಗೆ ಸಂಶೋಧಕರು ಇದರ ಬಗ್ಗೆ ಸಂಶೋಧನೆ ನಡೆಸಿದ್ದು, ಕಲಿಯಲು ಉತ್ತಮ ಮಾರ್ಗ ಯಾವುದು ಎಂಬುದರ ಬಗ್ಗೆ ತಿಳಿಸಿದ್ದಾರೆ.

ಸಂಶೋಧನೆ ಮಾಡಿದವರು ಯಾರು?

ಉತ್ತರ ಡಕೋಟಾ(North Dakota)ವಿಶ್ವವಿದ್ಯಾನಿಲಯದ ಶಿಕ್ಷಣ, ಆರೋಗ್ಯ ಮತ್ತು ನಡವಳಿಕೆಯ ಪ್ರಾಧ್ಯಾಪಕರಾದ ವರ್ಜೀನಿಯಾ ಕ್ಲಿಂಟನ್ ಅವರು ಈ ಸಂಶೋಧನೆಯನ್ನು ನಡೆಸಿದ್ದಾರೆ. ಇದರಲ್ಲಿ ಅವರು ಗ್ಯಾಜೆಟ್ ಕಲಿಕೆ ಮತ್ತು ಕಾಗದದಿಂದ ಓದುವ ನಡುವಿನ ಸಣ್ಣ ಆದರೆ ಗಮನಾರ್ಹ ವ್ಯತ್ಯಾಸವನ್ನು ಕಂಡುಕೊಂಡಿದ್ದಾರೆ. ಈ ಸಂಶೋಧನೆಯನ್ನು ಅವರು ಓದುವ ಕಾರ್ಯಕ್ಷಮತೆ, ಓದುವ ವೇಗ ಮತ್ತು ಆಲೋಚನಾ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಲು ಬಯಸಿದ್ದರು.

ಇದನ್ನೂ ಓದಿ: Yogi Adityanath: ‘ರಾಮ ದ್ರೋಹಿ’ಗಳಿಂದ ಅಂತರ ಕಾಯ್ದುಕೊಳ್ಳಿ ಎಂದ ಯೋಗಿ ಆದಿತ್ಯನಾಥ್

ಈಗಾಗಲೇ ಸಂಶೋಧನೆ ಮಾಡಲಾಗಿದೆ

ಗ್ಯಾಜೆಟ್ ವ್ಯಕ್ತಿಯ ಓದುವ(Gadget Learn) ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಸಂಶೋಧಕರು ಹಲವು ವರ್ಷಗಳಿಂದ ಸಂಶೋಧನೆ ಮಾಡುತ್ತಿದ್ದಾರೆ. ಸೈಂಟಿಫಿಕ್ ಅಮೇರಿಕನ್ ಜರ್ನಲ್ ಪ್ರಕಾರ 1980 ರಿಂದ ಈ ವಿಷಯದ ಬಗ್ಗೆ ಕನಿಷ್ಠ 100ಕ್ಕೂ ಹೆಚ್ಚು ಸಂಶೋಧನಾ ಪ್ರಪಂಧಗಳನ್ನು ಪ್ರಕಟಿಸಲಾಗಿದೆ.

ಗ್ಯಾಜೆಟ್ ಮೂಲಕ ಓದು ಉತ್ತಮವಾಗಿಲ್ಲ  

1990ರ ದಶಕದ ಆರಂಭದ ವೇಳೆಗೆ ಜನರು ಕಾಗದಕ್ಕೆ ಹೋಲಿಸಿದರೆ ಗ್ಯಾಜೆಟ್(Gadget Learn)ನಲ್ಲಿ ನಿಧಾನವಾಗಿ ಮತ್ತು ಕಡಿಮೆ ನಿಖರತೆಯೊಂದಿಗೆ ಓದುತ್ತಾರೆಂಬುದನ್ನು ಅನೇಕ ಸಂಶೋಧನಾ ಫಲಿತಾಂಶಗಳು ಕಂಡುಕೊಂಡಿವೆ. ಆದಾಗ್ಯೂ ನಂತರದ ಸಂಶೋಧನೆಯು ವಿಭಿನ್ನ ಫಲಿತಾಂಶಗಳನ್ನು ತೋರಿಸಿವೆ. ಕಾಗದಕ್ಕೆ ಹೋಲಿಸಿದರೆ ಗ್ಯಾಜೆಟ್ ಮೂಲಕ ಓದುವುದು ಉತ್ತಮವಾಗಿಲ್ಲವೆಂಬ ಅಂಶ ತಿಳಿದುಬಂದಿದೆ.

ಇದನ್ನೂ ಓದಿ: ಎರಡು ಮಹತ್ವದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಮತ್ತು ಯುಕೆಗೆ ಪ್ರಧಾನಿ ಮೋದಿ ಪ್ರಯಾಣ

ಸ್ಕ್ರೀನ್ ರೀಡಿಂಗ್ ಸುಧಾರಿಸಿದೆ

ಕಳೆದ ಕೆಲವು ವರ್ಷಗಳ ಸಂಶೋಧನೆಯು ತಾಂತ್ರಿಕ ಸುಧಾರಣೆಗಳು(Screen Reading)ಗ್ಯಾಜೆಟ್ ಗಳಲ್ಲಿ ಜನರ ಓದುವ ಗುಣಮಟ್ಟದಲ್ಲಿ ಸುಧಾರಣೆ ಕಂಡಿದೆ ಎಂದು ತೋರಿಸಿವೆ.

ಸಂಶೋಧನಾ ಫಲಿತಾಂಶಗಳು

ಕ್ಲಿಂಟನ್ ಸೇರಿದಂತೆ ಕಳೆದ 2008 ರಿಂದ 2018ರವರೆಗೆ ಇಂತಹ 33 ಸಂಶೋಧನೆಗಳ ಫಲಿತಾಂಶಗಳು ಹೊರಬಿದ್ದಿವೆ. ಇದರಲ್ಲಿ ಕಾಗದ ಮತ್ತು ಗ್ಯಾಜೆಟ್ ಓದುವಿಕೆಯನ್ನು ಪರೀಕ್ಷಿಸಲಾಯಿತು. ಕಾಗದದ ಓದುವಿಕೆ(Paper Reading)ಗ್ರಹಿಕೆಯನ್ನು ಸುಧಾರಿಸುತ್ತದೆ ಮತ್ತು ಪರೀಕ್ಷೆಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಸಂಶೋಧನಾ ಫಲಿತಾಂಶಗಳು ಕಂಡುಕೊಂಡಿವೆ. ಕಾಗದದ ಓದುವಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಕಂಡುಬಂದಿದೆ. ಏಕೆಂದರೆ ನೀವು ಕಾಗದದಿಂದ ಓದುತ್ತಿದ್ದರೆ ಅದು ನಿಮ್ಮ ಮನಸ್ಸನ್ನು ಹೆಚ್ಚು ಯೋಚಿಸುವಂತೆ ಮಾಡುತ್ತದೆ. ಇದರಿಂದ ವಿಷಯಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಇದೇ ಸಮಯದಲ್ಲಿ ಸ್ಕ್ರೀನ್ ರೀಡರ್‌ಗಳಲ್ಲಿ ಓದುವುದು ಪ್ರಾರಂಭದಲ್ಲಿ ನಿಮಗೆ ಖುಷಿ ನೀಡಿದರೂ ಕೂಡ ಬಳಿಕ ಆಸಕ್ತಿ ಕಡಿಮೆಯಾಗುತ್ತದೆ. ಅತಿಯಾದ ಆತ್ಮವಿಶ್ವಾಸದಿಂದ ಓದಲು ತೊಡಗುವ ವ್ಯಕ್ತಿಗಳು ಹೆಚ್ಚು ವಿಚಲಿತರಾಗಬಹುದು, ವಿಷಯದ ಬಗ್ಗೆ ಕಡಿಮೆ ಗಮನಹರಿಸಬಹುದು ಎಂದು ಸಂಶೋಧನೆಯಿಂದ ಸಾಬೀತಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News