ಚೀನಾದ ಭೂಪಟದಲ್ಲಿ ಭಾರತದ ಅರುಣಾಚಲ ಪ್ರದೇಶ.!!

China Released New Map: ಈ ವರ್ಷದ ಏಪ್ರಿಲ್‌ನಲ್ಲಿ ಚೀನಾ 11 ಭಾರತೀಯ ಸ್ಥಳಗಳನ್ನು ಏಕಪಕ್ಷೀಯವಾಗಿ ಮರುನಾಮಕರಣ ಮಾಡಿತ್ತು. ಡ್ರ್ಯಾಗನ್ ತನ್ನ ವಿಸ್ತರಣಾ ನೀತಿಗಾಗಿ ಪ್ರಪಂಚದಾದ್ಯಂತ ಟೀಕೆಗಳನ್ನು ಎದುರಿಸುತ್ತಿದೆ.

Written by - Chetana Devarmani | Last Updated : Aug 29, 2023, 03:34 PM IST
  • ಚೀನಾ ತನ್ನ ಚೇಷ್ಟೆಗಳನ್ನು ಮುಂದುವರೆಸಿದೆ
  • ಚೀನಾದ ಮ್ಯಾಪ್‌ನಲ್ಲಿ ಭಾರತದ ಅರುಣಾಚಲ ಪ್ರದೇಶ
  • ಡ್ರ್ಯಾಗನ್ ವಿಸ್ತರಣಾ ನೀತಿಗೆ ಪ್ರಪಂಚದಾದ್ಯಂತ ಟೀಕೆ
ಚೀನಾದ ಭೂಪಟದಲ್ಲಿ ಭಾರತದ ಅರುಣಾಚಲ ಪ್ರದೇಶ.!!  title=

China Released New Map: ಚೀನಾ ತನ್ನ ಚೇಷ್ಟೆಗಳಿಂದ ಹಿಂಜರಿಯುತ್ತಿಲ್ಲ. ಚೀನಾ ಸರ್ಕಾರ ಸೋಮವಾರ (ಆಗಸ್ಟ್ 28) ದಂದು ಅಧಿಕೃತವಾಗಿ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಅನ್ನು ತನ್ನ ಭೂಪ್ರದೇಶವೆಂದು ಘೋಷಿಸಿದೆ. ಚೀನಾ ಇಂತಹ ವಿಸ್ತರಣಾ ನೀತಿಯನ್ನು ಅನುಸರಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಏಪ್ರಿಲ್ ತಿಂಗಳ ಆರಂಭದಲ್ಲಿ ಅವರು ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಬದಲಾಯಿಸಲು ಅನುಮೋದನೆ ನೀಡಿದ್ದರು.

ವರದಿಯ ಪ್ರಕಾರ, ಹೊಸ ನಕ್ಷೆಯಲ್ಲಿ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ಚೀನಾ ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಚೀನಾದ ಭೂಪ್ರದೇಶದಲ್ಲಿ ಸೇರಿಸಿದೆ. ಭಾರತ ಮತ್ತು ಚೀನಾ ಗಡಿ ವಿಚಾರದಲ್ಲಿ ಮತ್ತೆ ಇದೀಗ ಗೊಂದಲ ಸೃಷ್ಟಿಯಾಗಿದೆ. ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ಒಳಗೊಂಡಂತೆ ವಿವಾದತ್ಮಕ ಪ್ರದೇಶಗಳನ್ನು ಚೀನಾ ತನ್ನ ಹೊಸ ಮ್ಯಾಪ್‌ನಲ್ಲಿ ಉಲ್ಲೇಖಿಸಿದೆ. ಈ ಮೂಲಕ ಚೀನಾ ಗಡಿ ವಿಚಾರದಲ್ಲಿ ತನ್ನ ಮೊಂಡುತನವನ್ನು ಮತ್ತೆ ಮುಂದುವರಿಸಿದೆ. 

ಇದನ್ನೂ ಓದಿ: ಚಂದ್ರನಲ್ಲಿ ಅಡಗಿರುವ ದೊಡ್ಡ ರಹಸ್ಯ ಪತ್ತೆ ಮಾಡಿದ ಇಸ್ರೋ 

ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ಸೋಮವಾರ ಝೆಜಿಯಾಂಗ್ ಪ್ರಾಂತ್ಯದ ಡೆಕಿಂಗ್ ಕೌಂಟಿಯಲ್ಲಿ ಈ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ. 2023ರಲ್ಲಿ ಚೀನಾ ಅಧಿಕೃತವಾಗಿ ಅಪ್‌ಡೇಟ್‌ ಮಾಡಿದ ನಕ್ಷೆಯನ್ನು ರಿಲೀಸ್‌ ಮಾಡಿದೆ. ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದ ಪ್ರಮಾಣಿತ ನಕ್ಷೆಯನ್ನು ಸೇವಾ ವೆಬ್‌ಸೈಟ್‌ನಲ್ಲಿ ಈ ನಕ್ಷೆಯನ್ನು ಬಿಡುಗಡೆ ಮಾಡಿದೆ. ಜಾಗತಿಕ ಭೌಗೋಳಿಕತೆಯ ಮೇಲೆ ಚೀನಾದ ದೃಷ್ಟಿಕೋನದ ಬಗ್ಗೆ ಇದರಲ್ಲಿ ವಿವರಿಸಲಾಗಿದೆ. ಅಕ್ಕಪಕ್ಕದ ರಾಷ್ಟ್ರಗಳೊಂದಿಗಿನ ವಿವಾದದ ನಡುವೆಯೂ ಚೀನಾ ಈ ನಕ್ಷೆ ರಿಲೀಸ್‌ ಮಾಡಿದೆ. 

ಚೀನಾವು ಗಡಿಯನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಿನ ದೇಶಗಳೊಂದಿಗೆ ಪ್ರಾದೇಶಿಕ ವಿವಾದಗಳನ್ನು ಹೊಂದಿದೆ. ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನೀ ಕಮ್ಯುನಿಸ್ಟ್ ಪಕ್ಷ (CCP), ಇತರ ಸಾರ್ವಭೌಮ ಪ್ರದೇಶಗಳ ಮೇಲೆ ಪ್ರಾದೇಶಿಕ ನಿಯಂತ್ರಣವನ್ನು ಪಡೆಯಲು ಹಲವಾರು ಬಾರಿ ಪ್ರಯತ್ನಿಸಿದೆ. ಇದಕ್ಕಾಗಿ ಮೋಸದ ತಂತ್ರ ಹೆಣೆದಿದ್ದಾರೆ. ಹೆಚ್ಚಿನ ಪ್ರದೇಶವನ್ನು ನಿಯಂತ್ರಿಸಲು ಬೀಜಿಂಗ್‌ನ ವಿಸ್ತರಣಾವಾದಿ ಪ್ರಯತ್ನಗಳು ಎಲ್ಲಾ ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿವೆ. ಚೀನಾ ಈಗ ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ಕೆಲವು ಭಾಗಗಳ ಮೇಲೆ ತನ್ನ ಹಕ್ಕು ಸಾಧಿಸಿದೆ, ಈ ಸ್ಥಳಗಳು ಟಿಬೆಟ್‌ನ ಭಾಗವಾಗಿದೆ ಎಂದು ವಾದಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಪರ್ವತ ಶಿಖರಗಳು, ನದಿಗಳು ಮತ್ತು ವಸತಿ ಪ್ರದೇಶಗಳು ಸೇರಿದಂತೆ 11 ಭಾರತೀಯ ಸ್ಥಳಗಳನ್ನು ಚೀನಾ ಏಕಪಕ್ಷೀಯವಾಗಿ ಮರುನಾಮಕರಣ ಮಾಡಿತ್ತು. ಬೀಜಿಂಗ್ ಇಂತಹ ತಂತ್ರವನ್ನು ಅಳವಡಿಸಿಕೊಂಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2017 ಮತ್ತು 2021 ರಲ್ಲಿ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಇತರ ಭಾರತೀಯ ಸ್ಥಳಗಳನ್ನು ಮರುನಾಮಕರಣ ಮಾಡಿತು. ಇದು ಮತ್ತೊಂದು ರಾಜಕೀಯ ಘರ್ಷಣೆಗೆ ಕಾರಣವಾಯಿತು. ಆದಾಗ್ಯೂ, ಇಲ್ಲಿಯವರೆಗೆ ಭಾರತವು ಚೀನಾದ ವಿಸ್ತರಣಾವಾದಿ ಯೋಜನೆಗಳನ್ನು ತಿರಸ್ಕರಿಸುತ್ತಿದೆ.

ಇದನ್ನೂ ಓದಿ: ಬ್ರಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ನೋ ಎಂಟ್ರಿ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News