ಅರ್ಮೇನಿಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಅಜರ್ಬೈಜಾನ್ ವಿಧಿಸಿದೆ 3 ಷರತ್ತು

1990ರ ದಶಕದಲ್ಲಿ ಅರ್ಮೇನಿಯನ್ ಸೈನ್ಯವು ಕಳೆದುಕೊಂಡ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ (Azerbaijani President Aliyev) ಹೇಳಿದ್ದಾರೆ.

Last Updated : Oct 5, 2020, 02:25 PM IST
  • ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಯುದ್ಧ
  • ಶಾಂತಿಯ ಮನವಿಯನ್ನು ಅನುಸರಿಸಲು ಉಭಯ ದೇಶಗಳು ಸಿದ್ಧವಿಲ್ಲ
  • ಈಗ ಅಜೆರ್ಬೈಜಾನ್ ಅಧ್ಯಕ್ಷರು ಅರ್ಮೇನಿಯಾದ ಮುಂದೆ ಮೂರು ಷರತ್ತುಗಳನ್ನು ಹಾಕಿದ್ದಾರೆ.
ಅರ್ಮೇನಿಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಅಜರ್ಬೈಜಾನ್ ವಿಧಿಸಿದೆ 3 ಷರತ್ತು  title=
Image courtesy: Reuters

ಬಾಕು: ಅರ್ಮೇನಿಯಾ ಮತ್ತು ಅಜೆರ್ಬೈಜಾನ್ (Azerbaijan)  ನಡುವಿನ ಯುದ್ಧ ಮುಂದುವರೆದಿದೆ. ಯುದ್ಧವನ್ನು ಕೊನೆಗೊಳಿಸುವ ಅಂತಾರಾಷ್ಟ್ರೀಯ ಸಮುದಾಯದ ಮನವಿಯನ್ನು ಎರಡೂ ದೇಶಗಳು ತಿರಸ್ಕರಿಸಿದೆ. ಏತನ್ಮಧ್ಯೆ ಅಜರ್ಬೈಜಾನ್ ಅಧ್ಯಕ್ಷರು ಯುದ್ಧವನ್ನು ಕೊನೆಗೊಳಿಸಲು ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಅರ್ಮೇನಿಯಾ ಈ ಷರತ್ತುಗಳನ್ನು ಒಪ್ಪಿಕೊಂಡರೆ ಅವರು ಯುದ್ಧವನ್ನು ಕೊನೆಗೊಳಿಸುವುದಾಗಿ ಅವರು ತಿಳಿಸಿದ್ದಾರೆ.

1990ರ ದಶಕದಲ್ಲಿ ಅರ್ಮೇನಿಯನ್ ಸೈನ್ಯವು ಕಳೆದುಕೊಂಡ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ (Azerbaijani President Ilham Aliyev) ಹೇಳಿದ್ದಾರೆ. ಅರ್ಮೇನಿಯಾ ಉದ್ದೇಶಪೂರ್ವಕವಾಗಿ ಯುದ್ಧವನ್ನು ಪ್ರಚೋದಿಸುತ್ತಿದೆ. ಅರ್ಮೇನಿಯನ್ ಸೈನ್ಯವು ತಕ್ಷಣವೇ ನಮ್ಮ ಪ್ರದೇಶದಿಂದ ಹಿಂದೆ ಸರಿದರೆ, ವಾಪಸಾತಿ ಗಡುವನ್ನು ಸಂಪೂರ್ಣವಾಗಿ ವಿವರಿಸುತ್ತದೆ ಮತ್ತು ತಾವು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದರೆ, ನಾವು ಯುದ್ಧವನ್ನು ಕೊನೆಗೊಳಿಸಲು ಸಿದ್ಧರಿದ್ದೇವೆ ಎಂದವರು ತಿಳಿಸಿದ್ದಾರೆ.

ಅರ್ಮೇನಿಯಾದೊಂದಿಗಿನ ಯುದ್ಧದಲ್ಲಿ 3,000ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡ ಅಜರ್ಬೈಜಾನಿ

ಯುದ್ಧ ಕೊನೆಗೊಳ್ಳಲು ಇದು ಒಂದೇ ದಾರಿ :
ಅಜೆರ್ಬೈಜಾನ್‌ನ ಪ್ರಾದೇಶಿಕ ಸಮಗ್ರತೆಯನ್ನು ಅರ್ಮೇನಿಯಾ (Armenia)  ಒಪ್ಪಿಕೊಳ್ಳಬೇಕು, ಯುದ್ಧವನ್ನು ಕೊನೆಗೊಳಿಸುವ ಏಕೈಕ ಮಾರ್ಗ ಇದಾಗಿದೆ ಎಂದು ಅಲಿಯೆವ್ ಹೇಳಿದರು. ಯುಎನ್ ನಿರ್ಣಯಗಳನ್ನು ಜಾರಿಗೆ ತರಲು ಮತ್ತು ಅಜೆರ್ಬೈಜಾನ್ ಪ್ರಭಾವದ ಪ್ರದೇಶಗಳಿಂದ ಅರ್ಮೇನಿಯನ್ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಲು ಅಂತರರಾಷ್ಟ್ರೀಯ ಸಮುದಾಯವು ವಿಫಲವಾಗಿದೆ ಎಂದು ಅವರು ಹೇಳಿದರು.

ರಷ್ಯಾ, ಯುಎಸ್ ಮತ್ತು ಇಯು ಕದನ ವಿರಾಮ ಕೋರಿಕೆಯನ್ನು ಸ್ವೀಕರಿಸುವ ಉದ್ದೇಶವಿಲ್ಲ ಎಂದು ಅಲಿಯೆವ್ ಅವರ ನಿಲುವಿನಿಂದ ಸ್ಪಷ್ಟವಾಗಿದೆ. ಅದೇ ಸಮಯದಲ್ಲಿ ಅಲಿಯೆವ್ ಅವರ ಭಾಷಣದ ನಂತರ ಅರ್ಮೇನಿಯನ್ ರಕ್ಷಣಾ ಸಚಿವಾಲಯವೂ ಹೇಳಿಕೆ ನೀಡಿದೆ. ನಮಗೆ ಯಾವುದೇ ಬೆದರಿಕೆ ಇಲ್ಲ ಎಂದು ಸಚಿವಾಲಯ ಹೇಳುತ್ತದೆ, ಆದರೆ ಇನ್ನೂ ನಾವು ಪ್ರತಿಯೊಂದು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದವರು ತಿಳಿಸಿದ್ದಾರೆ. ಗಮನಾರ್ಹವಾಗಿ ಈ ಹಿಂದೆ ಅರ್ಮೇನಿಯನ್ ಪ್ರಧಾನಿ ನಿಕೋಲ್ ಪಶಿನಿಯನ್ ಅವರು ಅಜೆರ್ಬೈಜಾನ್ ಜೊತೆ ಮಾತುಕತೆಗೆ ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈ ದೇಶಗಳಲ್ಲಿ ಆರಂಭವಾಗಿದೆ ಯುದ್ಧ, ಇದುವರೆಗೆ 23 ಮಂದಿ ಮೃತ, 100ಕ್ಕೂ ಹೆಚ್ಚು ಜನರಿಗೆ ಗಾಯ

ಇದು ದೊಡ್ಡ ಅಪಾಯ!
ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಇಬ್ಬರೂ ಪರಸ್ಪರ ಯುದ್ಧವನ್ನು ಪ್ರಚೋದಿಸುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ನಾಗರಿಕರ ಗುರಿಗಳನ್ನು ಸಹ ಎರಡೂ ಕಡೆಯಿಂದ ಗುರಿಯಾಗಿಸಲಾಗಿದೆ. ಈ ಯುದ್ಧದಲ್ಲಿ ರಷ್ಯಾದಂತಹ ಮಹಾಶಕ್ತಿಗಳ ಭಾಗಿಯಾಗುವ ಅಪಾಯವನ್ನು ನೋಡಿದ ಇಬ್ಬರೂ ವಿವಾದವನ್ನು ಶಾಂತಿಯಿಂದ ಬಗೆಹರಿಸುವಂತೆ ಮನವಿ ಮಾಡಲಾಗುತ್ತಿದೆ. ಯುಎಸ್ ಸೇರಿದಂತೆ ಹಲವಾರು ದೇಶಗಳು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಯುದ್ಧವನ್ನು ನಿಲ್ಲಿಸುವಂತೆ ಮನವಿ ಮಾಡಿವೆ. ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ರಷ್ಯಾ, ಟರ್ಕಿ, ಫ್ರಾನ್ಸ್, ಇರಾನ್ ಮತ್ತು ಇಸ್ರೇಲ್ ಸೇರುವ ಅಪಾಯವೂ ಹೆಚ್ಚಾಗಿದೆ.

ಇದು ವಿವಾದದ ಮೂಲ:-
ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಯುದ್ಧಕ್ಕೆ ಪ್ರಮುಖ ಕಾರಣವೆಂದರೆ ನಾಗೋರ್ನೊ-ಕರಬಖ್ (Nagorno-Karabakh) ಪ್ರದೇಶ. ಅಜರ್ಬೈಜಾನ್ ಈ ಪ್ರದೇಶದ ಪರ್ವತ ಪ್ರದೇಶವನ್ನು ತನ್ನದೇ ಎಂದು ಕರೆದರೆ, ಅರ್ಮೇನಿಯಾ ಈ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. 1994ರಲ್ಲಿ ಹೋರಾಟ ಕೊನೆಗೊಂಡಾಗಿನಿಂದ ಈ ಪ್ರದೇಶವು ಅರ್ಮೇನಿಯಾದ ಆಕ್ರಮಣದಲ್ಲಿದೆ. 2016ರಲ್ಲಿಯೂ ಈ ಪ್ರದೇಶದ ಮೇಲೆ ಉಭಯ ದೇಶಗಳ ನಡುವೆ ರಕ್ತಸಿಕ್ತ ಯುದ್ಧ ನಡೆದಿದ್ದು, ಇದರಲ್ಲಿ 200 ಜನರು ಸಾವನ್ನಪ್ಪಿದ್ದಾರೆ. ಈಗ ಮತ್ತೊಮ್ಮೆ ಎರಡೂ ದೇಶಗಳು ಮುಖಾಮುಖಿಯಾಗಿವೆ.

Trending News