PICS: ಸುಷ್ಮಾ ಸ್ವರಾಜ್ ನೆನಪಿಗಾಗಿ 1 ಸಾವಿರ ತುಪ್ಪದ ದೀಪ ಬೆಳಗಿಸಿದ ಭೂತಾನ್ ರಾಜ ಜಿಗ್ಮೆ ಖೇಸರ್

"ಸುಷ್ಮಾ ಸ್ವರಾಜ್ ಅವರ ಸಾವು ಭಾರತೀಯ ಜನತಾ ಪಕ್ಷಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೂ ದೊಡ್ಡ ನಷ್ಟವಾಗಿದೆ" ಎಂದು ಪ್ರಧಾನಿ ಲೊಟ್ಟೆ ಶೆರಿಂಗ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.  

Last Updated : Aug 10, 2019, 04:05 PM IST
PICS: ಸುಷ್ಮಾ ಸ್ವರಾಜ್ ನೆನಪಿಗಾಗಿ 1 ಸಾವಿರ ತುಪ್ಪದ ದೀಪ ಬೆಳಗಿಸಿದ ಭೂತಾನ್ ರಾಜ ಜಿಗ್ಮೆ ಖೇಸರ್  title=

ಭೂತಾನ್ ರಾಜ ಜಿಗ್ಮೆ ಖೇಸರ್ ನಮಗ್ಯಾಲ್ ವಾಂಗ್‌ಚಕ್, ಇತ್ತೀಚೆಗಷ್ಟೇ ನಿಧನರಾದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ನೆನಪಿಗಾಗಿ, ಇಲ್ಲಿರುವ ಒಂದು ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು ಮತ್ತು ಒಂದು ಸಾವಿರ ತುಪ್ಪದದೀಪಗಳನ್ನು ಬೆಳಗಿಸಿದರು. 

1. ಗುರುವಾರ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು
ಸುಷ್ಮಾ ಸ್ವರಾಜ್ ಅವರ ಹೆಸರಿನಲ್ಲಿ ಭೂತಾನ್ ರಾಜನ ಆದೇಶದ ಮೇರೆಗೆ ಗುರುವಾರ ಸಿಂಟೋಖಾ ಜೊಂಗ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದಿವಂಗತ ಸಚಿವರ ಕುಟುಂಬಕ್ಕೆ ಮತ್ತು ಭಾರತ ಸರ್ಕಾರಕ್ಕೂ ರಾಜನು ಸಂತಾಪ ಸಂದೇಶಗಳನ್ನು ಕಳುಹಿಸಿದ್ದಾರೆ.

2.  ಪ್ರಧಾನಿ ಲೊಟ್ಟೆ ಶೆರಿಂಗ್ ಸಂತಾಪ ಸಂದೇಶ 
"ಸುಷ್ಮಾ ಸ್ವರಾಜ್ ಅವರ ಸಾವು ಭಾರತೀಯ ಜನತಾ ಪಕ್ಷಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೂ ದೊಡ್ಡ ನಷ್ಟವಾಗಿದೆ" ಎಂದು ಪ್ರಧಾನಿ ಲೊಟ್ಟೆ ಶೆರಿಂಗ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

3. ಸುಷ್ಮಾ ಸ್ವರಾಜ್ ಭೂತಾನ್‌ನ  ಉತ್ತಮ ಸ್ನೇಹಿತೆ
"ಸುಷ್ಮಾ ಸ್ವರಾಜ್ ಭೂತಾನ್‌ನ  ಉತ್ತಮ ಸ್ನೇಹಿತರಾಗಿದ್ದರು. ಅವರು ಭೂತಾನ್-ಭಾರತ ಸಂಬಂಧಗಳನ್ನು ಹೆಚ್ಚಿಸಲು ದಣಿವರಿಯಿಲ್ಲದೆ ಕೆಲಸ ಮಾಡಿದರು" ಎಂದು ಅವರು ಹೇಳಿದರು.

4. ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೂತಾನ್ ಜೊತೆ ನಿಕಟವಾಗಿ ಕೆಲಸ ಮಾಡಿದರು
2014 ರಿಂದ 2019 ರವರೆಗೆ ಭಾರತದ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಭೂತಾನ್ ಜೊತೆ ನಿಕಟವಾಗಿ ಕೆಲಸ ಮಾಡಿದರು.

5. ಸುಷ್ಮಾ ಸ್ವರಾಜ್ ಭೂತಾನ್ ಸ್ನೇಹಿತರಾಗಿ ಕೆಲಸ ಮಾಡುತ್ತಿದ್ದರು
ಈ ಸಮಯದಲ್ಲಿ, ಅವರು ಭೂತಾನ್‌ನ ಸ್ನೇಹಿತರಾಗಿ ಕೆಲಸ ಮಾಡಿದರು ಮತ್ತು ಉಭಯ ದೇಶಗಳ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಹೆಚ್ಚಿನ ಕೊಡುಗೆ ನೀಡಿದರು.

(ಇನ್ಪುಟ್ - ಐಎಎನ್ಎಸ್)
 

Trending News