Britain's Home Secretary Priti Patel: 'ಸೇವೆಯ' ಬಗ್ಗೆ ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿಕೆ ಕೇಳಿದರೆ ನೀವೂ ಹೆಮ್ಮೆ ಪಡುತ್ತೀರಿ

ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಹಿಂದೂ ಪದವಾದ 'ಸೇವಾ' ತನ್ನ ಸ್ಫೂರ್ತಿಯಾಗಿದೆ ಎಂದು ವಿವರಿಸಿದರು ಮತ್ತು ನಮ್ಮ ಮೌಲ್ಯಗಳು ನಮ್ಮ ಮುಂದೆ ಸೇವೆಯನ್ನು ಒಳಗೊಂಡಿವೆ ಎಂದು ಹೇಳಿದರು. ಇದನ್ನು ಹಿಂದು ಪದ 'ಸೇವಾ' ದಿಂದ ಚೆನ್ನಾಗಿ ವ್ಯಾಖ್ಯಾನಿಸಬಹುದು, ಅಂದರೆ ಇತರ ಜನರಿಗೆ ಸೇವೆ, ಸಮರ್ಪಣೆ ಮತ್ತು ಸಂಕಲ್ಪ.

Written by - Yashaswini V | Last Updated : Oct 6, 2021, 09:48 AM IST
  • ಕನ್ಸರ್ವೇಟಿವ್ ಪಕ್ಷದ ಸಮಾವೇಶದಲ್ಲಿ ಇದನ್ನು ಉಲ್ಲೇಖಿಸಿದ ಪ್ರೀತಿ ಪಟೇಲ್
  • ಪ್ರೀತಿ ಪಟೇಲ್ ಬ್ರಿಟನ್‌ನ ಗೃಹ ಮಂತ್ರಿ
  • ಇವರು ಪ್ರತಿಯೊಂದು ವಿಚಾರದಲ್ಲೂ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ
Britain's Home Secretary Priti Patel: 'ಸೇವೆಯ' ಬಗ್ಗೆ ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿಕೆ ಕೇಳಿದರೆ ನೀವೂ ಹೆಮ್ಮೆ ಪಡುತ್ತೀರಿ title=
Britain's Home Secretary Priti Patel

ಲಂಡನ್: ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಹಿಂದೂ ಪದ 'ಸೇವಾ' ದಿಂದ ಕೆಲಸ ಮಾಡಲು ತಮಗೆ ಸ್ಫೂರ್ತಿ ದೊರೆತಿದೆ ಎಂದು ಹೇಳಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಕನ್ಸರ್ವೇಟಿವ್ ಪಕ್ಷದ ವಾರ್ಷಿಕ ಸಮಾವೇಶದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಪ್ರೀತಿ ಪಟೇಲ್, ಈ ಸ್ಥಾನದಲ್ಲಿ ಕೆಲಸ ಮಾಡಲು ನನಗೆ ಹಿಂದೂ ಪದ 'ಸೇವಾ' ದಿಂದ ಸ್ಫೂರ್ತಿ ದೊರೆತಿದೆ. ಇದು ಇತರ ಜನರ ಹಿತಾಸಕ್ತಿಗೆ ಆದ್ಯತೆ ನೀಡುತ್ತದೆ ಎಂದು ಹೇಳಿದರು. 

ಕನ್ಸರ್ವೇಟಿವ್ ಪಕ್ಷದ ವಾರ್ಷಿಕ ಸಮಾವೇಶದಲ್ಲಿ (Conservative Party Conference) ಮಾತನಾಡಿದ ಪ್ರೀತಿ ಪಟೇಲ್, ಸರ್ಕಾರವು ಅಪರಾಧದ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಹೆದ್ದಾರಿಗಳನ್ನು ತಡೆದ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಮಹಿಳೆಯರ ವಿರುದ್ಧದ ಅಪರಾಧ ಮತ್ತು ಮಾದಕದ್ರವ್ಯ ಪ್ರಕರಣಗಳಲ್ಲಿ ಭಾಗಿಯಾದವರ ತನಿಖೆಯನ್ನು ಹೆಚ್ಚಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಸ್ತೆಗಳು, ರೈಲ್ವೇ ಇತ್ಯಾದಿಗಳನ್ನು ಅಡ್ಡಿಪಡಿಸುವವರನ್ನು ಕಠಿಣವಾಗಿ ಶಿಕ್ಷಿಸಲಾಗಿದೆ ಎಂದು ತಮ್ಮ ಸರ್ಕಾರದ ಕಾರ್ಯವೈಖರಿಯ ಬಗ್ಗೆ ವಿವರಿಸಿದರು. 

ಇದನ್ನೂ ಓದಿ- ಗಡಿ ನಿಯಂತ್ರಣ ರೇಖೆಯುದ್ದಕ್ಕೂ ವಾಯುಪಡೆ ನಿಯೋಜಿಸಿದ ಚೀನಾ

'ನಮ್ಮ ಮೌಲ್ಯಗಳು ಸ್ವಯಂ ಮೊದಲು ಸೇವೆಯನ್ನು ಒಳಗೊಂಡಿರುತ್ತದೆ. ಇದನ್ನು 'ಸೇವಾ' (Sewa) ಎಂಬ ಹಿಂದೂ ಪದದಿಂದ ಚೆನ್ನಾಗಿ ವ್ಯಾಖ್ಯಾನಿಸಬಹುದು, ಅಂದರೆ 'ಸೇವೆ, ಭಕ್ತಿ ಮತ್ತು ಇತರ ಜನರಿಗೆ ಸಂಕಲ್ಪ' ಎಂದು ಅವರು ವಿವರಿಸಿದರು.  ಭಾರತೀಯ ಮೂಲದ ಕ್ಯಾಬಿನೆಟ್ ಮಂತ್ರಿ ಪ್ರೀತಿ ಪಟೇಲ್ (Priti Patel) ಅವರು ಕಳೆದ ವರ್ಷ ಪರಿಚಯಿಸಿದ ವಲಸಿಗರಿಗೆ ಬ್ರೆಕ್ಸಿಟ್ ನಂತರದ ವ್ಯವಸ್ಥೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ- ಭಾರತದ ವಿರುದ್ಧದ ಚಟುವಟಿಕೆಗೆ ಶ್ರೀಲಂಕಾವನ್ನು ಬಳಸಲಾಗುವುದಿಲ್ಲ-ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ

ಬೋರಿಸ್ ಜಾನ್ಸನ್ ಇಂದು ಭಾಷಣ ಮಾಡಲಿದ್ದಾರೆ:
ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ವಾರ್ಷಿಕ ಸಮಾವೇಶವು ಇಂದು (ಬುಧವಾರ) ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ (Boris Johnson) ಅವರ ಭಾಷಣದೊಂದಿಗೆ ಮುಕ್ತಾಯಗೊಳ್ಳಲಿದೆ. ಗಮನಾರ್ಹವಾಗಿ, ಬೋರಿಸ್ ಸರ್ಕಾರವನ್ನು ಬ್ರಿಟನ್‌ನ ಪೆಟ್ರೋಲ್ ಬಿಕ್ಕಟ್ಟಿಗೆ ಟೀಕಿಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ, ದೇಶಾದ್ಯಂತ ಪೆಟ್ರೋಲ್‌ನ ತೀವ್ರ ಕೊರತೆಯಿದೆ. 90% ಕ್ಕಿಂತ ಹೆಚ್ಚು ಪೆಟ್ರೋಲ್ ಪಂಪ್‌ಗಳು ಒಣಗಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News