K Sudhakar : 'ಕಣ್ಣಿಗೆ ಬ್ಲಾಕ್ ಫಂಗಸ್ ಬಂದ್ರೆ ಕಣ್ಣು ತೆಗೆಯಲೇ ಬೇಕಾಗುತ್ತದೆ'

ಬ್ಲಾಕ್ ಫಂಗಸ್ ಔಷಧಿ ಕೊರತೆ ನೀಗಿಸಲು ನಾನು ಕೇಂದ್ರ ಸಚಿವ ಸದಾನಂದಗೌಡರ ಜೊತೆ ಪ್ರತಿದಿನ ಮಾತಾಡುತ್ತಾ ಇದ್ದೇನೆ. ನಾಲ್ಕು ಹಾಗೂ ಐದನೇ ತಾರೀಖಿನ ವೇಳೆಗೆ ಹೆಚ್ಚು ಕಳುಹಿಸುವುದಾಗಿ ಹೇಳಿದ್ದಾರೆ

Last Updated : Jun 1, 2021, 02:42 PM IST
  • ಬ್ಲಾಕ್ ಫಂಗಸ್ ಕಣ್ಣಿಗೆ ತಲುಪಿದ ಮೇಲೆ ಕಣ್ಣು ತೆಗೆಯಲೇ ಬೇಕಾಗುತ್ತದೆ
  • ಬ್ಲಾಕ್ ಫಂಗಸ್ ಔಷಧಿ 1300 ವಯಲ್ಸ್ ನೀಡಿದ್ದು
  • ಮೂರು ಲಕ್ಷ ಕೋವಿಡ್ ಲಸಿಕೆ ಡೋಸ್ ಬಂದಿದೆ.
K Sudhakar : 'ಕಣ್ಣಿಗೆ ಬ್ಲಾಕ್ ಫಂಗಸ್ ಬಂದ್ರೆ ಕಣ್ಣು ತೆಗೆಯಲೇ ಬೇಕಾಗುತ್ತದೆ' title=

ಬೆಂಗಳೂರು : ಬ್ಲಾಕ್ ಫಂಗಸ್ ಕಣ್ಣಿಗೆ ತಲುಪಿದ ಮೇಲೆ ಕಣ್ಣು ತೆಗೆಯಲೇ ಬೇಕಾಗುತ್ತದೆ. ಅದು ಮಿದುಳಿಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್(K Sudhakar), ಮೊದಲು ಡೆಂಟಲ್ ಪರೀಕ್ಷೆ ಮಾಡುತ್ತಾರೆ. ಬಳಿಕ ಕಣ್ಣಿನ ತಜ್ಞರು ಎಲ್ಲಾ ಸೇರಿ ಪರೀಕ್ಷೆ ಮಾಡುತ್ತಾರೆ. ಬ್ಲಾಕ್ ಫಂಗಸ್ ಔಷಧಿ 1300 ವಯಲ್ಸ್ ನೀಡಿದ್ದು, ಅದು ರಾಜ್ಯದ ರೋಗಿಗಳಿಗೆ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : Siddaramaiah : ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಅಸ್ವಸ್ಥ!

ಬ್ಲಾಕ್ ಫಂಗಸ್ ಔಷಧಿ ಕೊರತೆ ನೀಗಿಸಲು ನಾನು ಕೇಂದ್ರ ಸಚಿವ ಸದಾನಂದಗೌಡರ(DV Sadanandagowda) ಜೊತೆ ಪ್ರತಿದಿನ ಮಾತಾಡುತ್ತಾ ಇದ್ದೇನೆ. ನಾಲ್ಕು ಹಾಗೂ ಐದನೇ ತಾರೀಖಿನ ವೇಳೆಗೆ ಹೆಚ್ಚು ಕಳುಹಿಸುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Covid Relief Package : ರಾಜ್ಯದ ಖಾಸಗಿ ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್!

ಮೂರು ಲಕ್ಷ ಕೋವಿಡ್ ಲಸಿಕೆ(Corona Vaccine) ಡೋಸ್ ಬಂದಿದೆ. ಎರಡನೇ ಡೋಸ್ ನೀಡಲು ಸಹಾಯವಾಗುತ್ತಿದೆ ಎಂದರು. ಪ್ರತಿ ಜಿಲ್ಲೆಗಳಲ್ಲೂ ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಾಯಕರು ಅಂತಿಮವಾಗಿ ನಿರ್ಣಯಗಳನ್ನ ತೆಗೆದುಕೊಳ್ಳುತ್ತಾರೆ. ಜನಹಿತದ ಅಭಿಪ್ರಾಯಗಳನ್ನು ಕೊಡುತ್ತೇವೆ. ಅಂತಿಮವಾಗಿ ಮುಖ್ಯಮಂತ್ರಿ ನಿರ್ಣಯ ತೆಗೆದುಕೊಳ್ತಾರೆ. ನಾವ್ಯಾರು ನಿರ್ಧಾರ ತೆಗೆದುಕೊಳ್ಳೋಕೆ ಆಗೋದಿಲ್ಲ. ಅದು ಆಗಲಬಾರದು. ಹೀಗಾಗಿ ನಮ್ಮ ಅಭಿಪ್ರಾಯ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ : Heavy Rainfall : ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆ..!

ಲಾಕ್ ಡೌನ್(Lockdown) ಕುರಿತು ಮಾತನಾಡಿದ ಅವರು, ತಜ್ಞರು ನೀಡಿದ ವರದಿಯನ್ನು ಸಿಎಂಗೆ  ನೀಡಿದ್ದೇನೆ. ಶೇ.5 ಕ್ಕಿಂತ ಕಡಿಮೆ ಪಾಸಿಟಿವ್ ದರ, 5 ಸಾವಿರಕ್ಕೂ ಕಡಿಮೆ ಕೇಸ್ ಬಂದಾಗ ಮಾತ್ರ ಲಾಕ್ ಡೌನ್ ನಿರ್ಬಂಧ ಸಡಿಲ ಮಾಡಲು ಸೂಚಿಸಿದ್ದಾರೆ. ಹಂತ ಹಂತವಾಗಿ ಕಡಿಮೆ ಮಾಡಲು ಹೇಳಿದ್ದಾರೆ.‌ ಕಡಿಮೆ ಆಗಿದೆ. ಆದರೆ ಶೇ.5 ರಷ್ಟು ಕಡಿಮೆ ಆಗಿಲ್ಲ. ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಮಕ್ಕಳ ತಜ್ಞರು ಇದ್ದಾರೆ. ಮೂರನೇ ಅಲೆ ಎದುರಿಸಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News