ಕರಾಚಿ: ಪಾಕಿಸ್ತಾನದಲ್ಲಿಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಏತನ್ಮಧ್ಯೆ, ಬಲೂಚಿಸ್ತಾನದ ಕ್ವೆಟ್ಟಾ ಪ್ರದೇಶದಲ್ಲಿ ಹಿಂಸಾಚಾರದ ಬಗ್ಗೆ ವರದಿಯಾಗಿದೆ. ಈ ಪ್ರದೇಶದಲ್ಲಿ ಜನಜಂಗುಳಿ ಹೆಚ್ಚಾಗಿದ್ದ ಮತಗಟ್ಟೆಯೊಂದರ ಹೊರಗೆ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದಲ್ಲಿ 25 ಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
#UPDATE Death toll rises to 25 in a blast near eastern bypass in #Balochistan's #Quetta: Pakistan media. #PakistanElections2018
— ANI (@ANI) July 25, 2018
ಮಾಧ್ಯಮ ವರದಿ ಪ್ರಕಾರ, ಸ್ಫೋಟ ಸಂಭವಿಸಿದ ಕ್ವೆಟ್ಟಾ ಪ್ರದೇಶವು ಪೂರ್ವ ಬೈಪಾಸ್ ಗೆ ಹತ್ತಿರದಲ್ಲಿದೆ. ನ್ಯಾಷನಲ್ ಅಸೆಂಬ್ಲಿ 260 ರಲ್ಲಿ 11 ಗಂಟೆಯ ವೇಳೆಗೆ ಈ ಸ್ಫೋಟ ಸಂಭವಿಸಿದೆ. ಈ ಸ್ಫೋಟವು ಪೋಲೀಸ್ ವ್ಯಾನ್ನ ಬಳಿ ಸಂಭವಿಸಿದೆ, ಅದು ವಾಡಿಕೆಯಂತೆ ಪ್ರದೇಶವನ್ನು ಗಸ್ತು ತಿರುಗುತ್ತಿತ್ತು. ಮೂರು ಪೊಲೀಸ್ ಅಧಿಕಾರಿಗಳು ಕೂಡ ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ ಎರಡು ಮಕ್ಕಳ ಸಾವಿನ ಬಗ್ಗೆ ಕೂಡ ವರದಿಯಾಗಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಲಯ ಡಿಐಜಿ ಅಬ್ದುಲ್ ರಝಾಕ್ ಚೀಮಾ ಹೇಳಿದ್ದಾರೆ.
ಮತ್ತೊಂದೆಡೆ, ಪಾಕಿಸ್ತಾನದ ಚುನಾವಣೆಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಖಾಸಗಿ ಚಾನಲ್ ಗಳು ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ ತಿಳಿಸಿದೆ.