ನ್ಯೂಯಾರ್ಕ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೂಮಿ ಪೂಜೆ ನೆರವೇರಿಸಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಭಾರತೀಯರು ಈ ಕ್ಷಣವನ್ನು ಆಚರಿಸಿದ್ದಾರೆ. ಅಮೆರಿಕದ ರಾಜಧಾನಿಯಾದ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ಸಹ ಇಂದು ಹರ್ಷೋಲ್ಲಾಸ ಕಾಣಿಸಿಕೊಂಡಿದೆ. ಇಲ್ಲಿ ರಾಮ ಮಂದಿರ ಭಾವಚಿತ್ರಗಳನ್ನು ಡಿಜಿಟಲ್ ಬೋರ್ಡ್ ಮೂಲಕ ಪ್ರದರ್ಶಿಸಲಾಗಿದೆ. ಅಲ್ಲದೆ, ಈ ಸಂದರ್ಭದಲ್ಲಿ ಜನರು 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಡ ಮೊಳಗಿಸಿದ್ದಾರೆ.
#WATCH USA: A digital billboard of #RamMandir comes up in New York’s Times Square.
Prime Minister Narendra Modi performed 'Bhoomi Pujan' of #RamMandir in Ayodhya, Uttar Pradesh earlier today. pic.twitter.com/Gq4Gi2kfvR
— ANI (@ANI) August 5, 2020
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಲಖನೌದಲ್ಲಿರುವ ತಮ್ಮ ಸರ್ಕಾರಿ ಮನೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಯೋಧ್ಯೆಯ ಸರಯು ತೀರದಲ್ಲಿ ಆರತಿ ನೆರವೇರಿಸಿದ್ದಾರೆ.
ಭೂಮಿ ಪೂಜೆಯ ಬಳಿಕ ಅಯೋಧ್ಯಾ ಪಟ್ಟಣವನ್ನು ಸಂಪೂರ್ಣವಾಗಿ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ದೀಪ ಮತ್ತು ರಂಗುಗಳಿಂದ ನಗರ ಕಂಗೊಳಿಸುತ್ತಿತ್ತು. ಪ್ರಧಾನಿ ಮೋದಿ ಭೂಮಿ ಪೂಜೆಗಾಗಿ ದೆಹಲಿಯಿಂದ ಅಯೋಧ್ಯೆಗೆ ರವಾನೆಯಾದಾಗ ಸಾಂಪ್ರದಾಯಿಕ ಧೋತಿ ಹಾಗೂ ಕುರ್ತಾ ಧರಿಸಿದ್ದರು. ಪೂಜೆಯ ವೇಳೆ ಆರ್.ಎಸ್.ಎಸ್ ಮುಖ್ಯಸ್ಥ ಮೋಹನಜೀ ಭಾಗವತ್ ಅವರಿಗೆ ಸಾಥ್ ನೀಡಿದ್ದಾರೆ. ಜೊತೆಗೆ ಉತ್ತರ ಪ್ರದೇಶದ ಮೂಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಹಲವಾರು ಪ್ರಮುಖ ಧರ್ಮಗುರುಗಳು ಕೂಡ ಈ ಪೂಜೆಯಲ್ಲಿ ಶಾಮೀಲಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ಮಾಡುವ ಮೂಲಕ ಶ್ರೀ ರಾಮ್ ಜನ್ಮಭೂಮಿ ದೇವಸ್ಥಾನ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ. ಮತ್ತೊಂದೆಡೆ ಅವರ ತಾಯಿ ಹೀರಾಬೆನ್ ಟಿವಿಯಲ್ಲಿ ಈ ಐತಿಹಾಸಿಕ ಕ್ಷಣಗಳನ್ನು ನೋಡುತ್ತಾ ಸಾಕ್ಷಿಯಾಗಿದ್ದಾರೆ. ಪ್ರಧಾನಿ ಮೋದಿಯವರ ತಾಯಿಯ ಕೆಲವು ಚಿತ್ರಗಳು ಬಹಿರಂಗಗೊಂಡಿದ್ದು, ಇದರಲ್ಲಿ ಪ್ರಧಾನಿ ಅಯೋಧ್ಯೆಯ ಹನುಮಾನ್ ಗಡಿ ಆರತಿ ಮಾಡುತ್ತಿರುವಾಗ, ಅವರ ತಾಯಿ ಟಿವಿಯ ಮುಂದೆ ಕುಳಿತು ತಮ್ಮ ಮನೆಯಲ್ಲಿ ಇಡೀ ಕಾರ್ಯಕ್ರಮವನ್ನು ವಿಕ್ಷೀಸುತ್ತಿರುವುದು ಕೂಡ ಈ ಭಾವಚಿತ್ರಗಳಲ್ಲಿ ಒಂದಾಗಿದೆ.