US election fraud case: ಡೊನಾಲ್ಡ್ ಟ್ರಂಪ್ ಬಂಧನ, ಅಮೆರಿಕ ಇತಿಹಾಸದಲ್ಲಿಯೇ ಮೊದಲು!

ಪೋರ್ನ್ ತಾರೆಯೊಬ್ಬರಿಗೆ ರಹಸ್ಯ ಹಣ ನೀಡಿದ ಆರೋಪದ ಮೇಲೆ ನ್ಯೂಯಾರ್ಕ್‍ನಲ್ಲಿ, ಉನ್ನತ ರಹಸ್ಯ ಸರ್ಕಾರಿ ದಾಖಲೆಗಳನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ಫ್ಲಾರಿಡಾದಲ್ಲಿ ಮತ್ತು 2020ರ ಚುನಾವಣೆಯ ಸೋಲನ್ನು ಸರಿದೂಗಿಸಲು ಪಿತೂರಿ ನಡೆಸಿದ ಆರೋಪ ಮೇಲೆ ವಾಷಿಂಗ್ಟನ್‍ನಲ್ಲಿ ಟ್ರಂಪ್ ವಿರುದ್ಧ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

Written by - Puttaraj K Alur | Last Updated : Aug 25, 2023, 09:49 AM IST
  • ಚುನಾವಣಾ ಆಕ್ರಮ ಪ್ರಕರಣ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ
  • ಜಾರ್ಜಿಯಾದ ಫುಲ್ವಾನ್ ಕೌಂಟಿಯ ಷೆರಿಫ್ ಕಚೇರಿಯಿಂದ ಅಟ್ಲಾಂಟಾ ಜೈಲಿನಲ್ಲಿರುವ ಟ್ರಂಪ್ ಚಿತ್ರ ಬಿಡುಗಡೆ
  • $200,000 ಬಾಂಡ್ ಮತ್ತು ಇತರ ಷರತ್ತುಗಳಿಗೆ ಒಪ್ಪಿಕೊಂಡ ನಂತರ ಟ್ರಂಪ್ ಬಿಡುಗಡೆ
US election fraud case: ಡೊನಾಲ್ಡ್ ಟ್ರಂಪ್ ಬಂಧನ, ಅಮೆರಿಕ ಇತಿಹಾಸದಲ್ಲಿಯೇ ಮೊದಲು! title=
ಡೊನಾಲ್ಡ್ ಟ್ರಂಪ್ ಬಂಧನ!

ನವದೆಹಲಿ: ಚುನಾವಣಾ ಆಕ್ರಮ ಪ್ರಕರಣ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ. ಜಾರ್ಜಿಯಾದ ಫುಲ್ವಾನ್ ಕೌಂಟಿಯ ಷೆರಿಫ್ ಕಚೇರಿಯು ಅಟ್ಲಾಂಟಾ ಜೈಲಿನಲ್ಲಿರುವ ಟ್ರಂಪ್ ಚಿತ್ರವನ್ನು ಬಿಡುಗಡೆ ಮಾಡಿದೆ. 2020ರ ಜಾರ್ಜಿಯಾ ಚುನಾವಣಾ ಅಕ್ರಮ ಪ್ರಕರಣ ಸಂಬಂಧ ಗುರುವಾರ ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಮೂಲಕ ಅಮೆರಿಕದ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಮಾಜಿ ಅಧ್ಯಕ್ಷರ ಬಂಧನವಾದಂತಾಗಿದೆ.

ಟ್ರಂಪ್ ವಿರುದ್ಧ ಕಳೆದ ಮಾರ್ಚ್‍ನಿಂದ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಇದು 4ನೇಯದಾಗಿದೆ. ಪೋರ್ನ್ ತಾರೆಯೊಬ್ಬರಿಗೆ ರಹಸ್ಯ ಹಣ ನೀಡಿದ ಆರೋಪದ ಮೇಲೆ ನ್ಯೂಯಾರ್ಕ್‍ನಲ್ಲಿ, ಉನ್ನತ ರಹಸ್ಯ ಸರ್ಕಾರಿ ದಾಖಲೆಗಳನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ಫ್ಲಾರಿಡಾದಲ್ಲಿ ಮತ್ತು 2020ರ ಚುನಾವಣೆಯ ಸೋಲನ್ನು ಸರಿದೂಗಿಸಲು ಪಿತೂರಿ ನಡೆಸಿದ ಆರೋಪ ಮೇಲೆ ವಾಷಿಂಗ್ಟನ್‍ನಲ್ಲಿ ಟ್ರಂಪ್ ವಿರುದ್ಧ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ: Viral Video: ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆಂದ ಪಾಕ್ ಪ್ರಜೆ..!

ಷೆರಿಫ್ ಕಚೇರಿ ಬಿಡುಗಡೆಗೊಳಿಸಿರುವ ಚಿತ್ರದಲ್ಲಿ ಟ್ರಂಪ್ ನೀಲಿ ಸೂಟ್ ಮತ್ತು ಕೆಂಪು ಟೈ ಧರಿಸಿ ಮುಖ ಸಿಂಡರಿಸಿಕೊಂಡಿರುವುದು ಕಂಡುಬಂದಿದೆ. ಈ ಪ್ರಕರಣ ಸಂಬಂಧ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಎದುರಿಸಲು ತಾನು ಜಾರ್ಜಿಯಾ ಅಧಿಕಾರಿಗಳಿಗೆ ಶರಣಾಗುವುದಾಗಿ ಟ್ರಂಪ್ ಹೇಳಿದ್ದರು. ‘ನಿಮಗೆ ಇದನ್ನು ನಂಬಲು ಸಾಧ‍್ಯವೆ..? ನಾನು ಅರೆಸ್ಟ್ ಆಗಲು ಜಾರ್ಜಿಯಾದ ಅಟ್ಲಾಂಟಾಕ್ಕೆ ಹೋಗುತ್ತೇನೆ’ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಬಾಂಡ್ ಮೇಲೆ ಟ್ರಂಪ್ ಬಿಡುಗಡೆ

ಚುನಾವಣಾ ಅಕ್ರಮ ಮತ್ತು ಪಿತೂರಿ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್‍ರನ್ನು ಬಂಧಿಸಿದ್ದ ಪೊಲೀಸರು $200,000 ಬಾಂಡ್‌ನ ಆಧಾರದ ಮೇಲೆ ಬಿಡುಗಡೆ ಮಾಡಿದರು. ಬಿಡುಗಡೆಯಾದ ನಂತರ ಟ್ರಂಪ್ ನ್ಯೂಜೆರ್ಸಿಗೆ ಹಿಂತಿರುಗಿದರು. $200,000 ಬಾಂಡ್ ಮತ್ತು ಇತರ ಬಿಡುಗಡೆ ಷರತ್ತುಗಳಿಗೆ ಒಪ್ಪಿಕೊಂಡ ನಂತರ ಟ್ರಂಪ್ ಅವರನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಸಹ-ಪ್ರತಿವಾದಿಗಳು ಅಥವಾ ಪ್ರಕರಣದ ಸಾಕ್ಷಿಗಳನ್ನು ಬೆದರಿಸಲು ಸಾಮಾಜಿಕ ಮಾಧ್ಯಮವನ್ನು ಬಳಸದಿರುವುದು ಸೇರಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಾಲ್ಕು ದೇಶಗಳಲ್ಲಿ ರೂಪ ಬದಲಿಸಿ ಮತ್ತೆ ತಾಂಡವವಾಡುತ್ತಿದೆ ಕೋವಿಡ್ ಹೊಸ ರೂಪಾಂತರಿ, ಭಾರತದಲ್ಲಿ ಸ್ಥಿತಿ ಹೇಗಿದೆ?

‘ಇಲ್ಲಿ ನಡೆದಿರುವುದು ನ್ಯಾಯದ ಅಪಹಾಸ್ಯ. ನಾವು ಯಾವುದೇ ತಪ್ಪು ಮಾಡಿಲ್ಲ. ನಾನೇನೂ ತಪ್ಪು ಮಾಡಿಲ್ಲ’ ಎಂದು ಟ್ರಂಪ್ ಅವರು ಫುಲ್ಟನ್ ಕೌಂಟಿ ಜೈಲಿನಲ್ಲಿರಿಸಿ ಅವರ ಛಾಯಾಚಿತ್ರ ತೆಗೆದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News