Viral Video: ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆಂದ ಪಾಕ್ ಪ್ರಜೆ..!

Chandrayaan-3 mission: ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪಾಕ್‌ ಪ್ರಜೆಯ ಹಾಸ್ಯದ ಉತ್ತರಕ್ಕೆ ನೆಟಿಜನ್‍ಗಳು ಫಿದಾ ಆಗಿದ್ದಾರೆ. @Joydas ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ.  

Written by - Puttaraj K Alur | Last Updated : Aug 24, 2023, 05:41 PM IST
  • ಚಂದ್ರಯಾನದ ಯಶಸ್ಸಿನ ಬಗ್ಗೆ ಪಾಕಿಸ್ತಾನದ ಪ್ರಜೆ ಮಾತನಾಡಿರುವ ವಿಡಿಯೋ ವೈರಲ್
  • ಯುಟ್ಯೂಬರ್ ಪ್ರಶ್ನೆಗೆ ನಾವು ಈಗಾಗಲೇ ಚಂದ್ರನಲ್ಲಿಯೇ ಬದುಕುತ್ತಿದ್ದೇವೆಂದ ಯುವಕ
  • ಪಾಕಿಸ್ತಾನದಲ್ಲಿನ ಪರಿಸ್ಥಿತಿ ಬಗ್ಗೆ ಹಾಸ್ಯದ ದಾಟಿಯಲ್ಲಿ ಉತ್ತರ ನೀಡಿದ ಯುವಕನ ವಿಡಿಯೋ ವೈರಲ್
Viral Video: ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆಂದ ಪಾಕ್ ಪ್ರಜೆ..! title=
ಪಾಕಿಸ್ತಾನದ ಪ್ರಜೆ ಮಾತನಾಡಿರುವ ವಿಡಿಯೋ ವೈರಲ್!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ()ಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಆಗಿದೆ. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿಯಾಗಿದ್ದು, ಇಸ್ರೋದ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೋದ ಕೀರ್ತಿ ಮತ್ತೊಮ್ಮೆ ವಿಶ್ವವ್ಯಾಪಿ ತಲುಪಿದೆ.

ಚಂದ್ರಯಾನ-3ರ ಬಗ್ಗೆ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್‌ ಲ್ಯಾಂಡಿಂಗ್ ಆಗುವ ದೃಶ್ಯವನ್ನು ರಾಷ್ಟ್ರೀಯ ದೂರದರ್ಶನದಲ್ಲಿ ನೇರ ಪ್ರಸಾರ ಮಾಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಅವರು ಮನವಿ ಮಾಡಿದ್ದರು. ಚೌಧರಿ ಅವರ ಈ ಹೇಳಿಕೆ ಪಾಕ್‍ನಲ್ಲಿ ಪರ-ವಿರೋಧ ಚರ್ಚೆ ಹುಟ್ಟುಹಾಕಿತ್ತು. ಇದೆಲ್ಲದರ ಮಧ್ಯೆ ಯುಟ್ಯೂಬರ್ ಜೊತೆಗೆ ಪಾಕಿಸ್ತಾನದ ಪ್ರಜೆಯೊಬ್ಬ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.  

ಇದನ್ನೂ ಓದಿ: Luna 25 : ಚಂದ್ರಯಾನ ವಿಫಲ ಆಘಾತದಿಂದ ಆಸ್ಪತ್ರೆ ಸೇರಿದ ವಿಜ್ಞಾನಿ

ಯೂಟ್ಯೂಬರ್ ಒಬ್ಬರು ಚಂದ್ರಯಾನ-3ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ನೀಡಿರುವ ಉತ್ತರ ಸಖತ್ ಸೌಂಡ್ ಮಾಡುತ್ತಿದೆ. ಭಾರತದ ಚಂದ್ರಯಾನ-3 ಯಶಸ್ವಿಯಾಗಿದೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಯುಟ್ಯೂಬರ್ ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಆ ವ್ಯಕ್ತಿ ‘ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆ. ನಿಮಗೆ ಗೊತ್ತಿಲ್ಲವಾ..? ಚಂದ್ರ ಮತ್ತು ಪಾಕಿಸ್ತಾನದ  ನಡುವೆ ಸಾಮ್ಯತೆಯಿದೆ. ಚಂದ್ರನಲ್ಲಿ ನೀರು ಇಲ್ಲ, ಇಲ್ಲಿಯೂ ಅಂದರೆ ಪಾಕಿಸ್ತಾನದಲ್ಲಿಯೂ ನೀರು ಇಲ್ಲ. ಅಲ್ಲಿಯೂ ಗ್ಯಾಸ್ ಇಲ್ಲ, ಇಲ್ಲಿಯೂ ಗ್ಯಾಸ್ ಇಲ್ಲ. ಅದೇ ರೀತಿ ಚಂದ್ರನ ಮೇಲೆ ವಿದ್ಯುತ್ ಇಲ್ಲ, ಇಲ್ಲಿಯೂ ಸಹ ವಿದ್ಯುತ್ ಇಲ್ಲ ನೋಡಿ ಅಂತಾ ತೋರಿಸುತ್ತಾನೆ.   

ಪಾಕಿಸ್ತಾನದ ಜನರು ಚಂದ್ರನ ಬಳಿಗೆ ಹೋಗುವ ಅಗತ್ಯವೇ ಇಲ್ಲ. ಯಾಕೆಂದರೆ ಚಂದ್ರನಲ್ಲಿರುವ ವಾತಾವರಣವನ್ನು ಇಲ್ಲಿನ ಪ್ರಜೆಗಳು ಈಗಾಗಲೇ ಇಲ್ಲಿಯೇ ಅನುಭವಿಸುತ್ತಿದ್ದಾರೆ ಎಂದು ತಮ್ಮ ದೇಶದ ಪರಿಸ್ಥಿತಿ ಬಗ್ಗೆ ಹಾಸ್ಯಾಸ್ದದವಾಗಿ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪಾಕ್‌ ಪ್ರಜೆಯ ಹಾಸ್ಯದ ಉತ್ತರಕ್ಕೆ ನೆಟಿಜನ್‍ಗಳು ಫಿದಾ ಆಗಿದ್ದಾರೆ. @Joydas ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತವು ಶೀಘ್ರದಲ್ಲೇ ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ: ಪ್ರಧಾನಿ ಮೋದಿ

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News