ದುಬೈನಲ್ಲಿ ಬಸ್ ಅಪಘಾತ; 8 ಭಾರತೀಯರೂ ಸೇರಿ 17 ಮಂದಿ ದುರ್ಮರಣ

ಪ್ರವಾಸಿಗರ ಬಸ್ ನಲ್ಲಿ ವಿವಿಧ ರಾಷ್ಟ್ರಗಳ 31 ಪ್ರಯಾಣಿಕರಿದ್ದರು ಎನ್ನಲಾಗಿದ್ದು,  ಗುರುವಾರ ಸಂಜೆ 5:40ರಲ್ಲಿ ಮೆಟ್ರೋ ನಿಲ್ದಾಣದ ಅಲ್ ರಶಿಡಿಯಾ ನಿರ್ಗಮನದಲ್ಲಿನ ಸೈನ್ ಬೋರ್ಡ್ ಗೆ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ.

Last Updated : Jun 7, 2019, 10:42 AM IST
ದುಬೈನಲ್ಲಿ ಬಸ್ ಅಪಘಾತ; 8 ಭಾರತೀಯರೂ ಸೇರಿ 17 ಮಂದಿ ದುರ್ಮರಣ title=

ಅಬುದಾಬಿ: ಒಮಾನ್ ನಿಂದ ದುಬೈಗೆ ಹೋಗುತ್ತಿದ್ದ ಪ್ರವಾಸಿಗರಿದ್ದ ಬಸ್ ಅಪಘಾತಕ್ಕೀಡಾಗಿದ್ದು, 8 ಮಂದಿ ಭಾರತೀಯರೂ ಸೇರಿ ಒಟ್ಟು 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಶುಕ್ರವಾರ ತಿಳಿಸಿದೆ. 

"ಸ್ಥಳೀಯ ಅಧಿಕಾರಿಗಳು ಮತ್ತು ಸಂಬಂಧಿಕರ ಪ್ರಕಾರ 8 ಮಂದಿ ಭಾರತೀಯರು ದುಬೈ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ಭಾರತೀಯ ರಾಯಭಾರ ಕಚೇರಿ ಮೃತರ ಸಂಬಂಧಿಗಳೊಂದಿಗೆ ಸಂಪರ್ಕದಲ್ಲಿದೆ. ಇತರರ ಕುಟುಂಬಗಳಿಗೆ ವಿಷಯ ಮುಟ್ಟಿಸಲು ಮತ್ತಷ್ಟು ಮಾಹಿತಿಯ ನಿರೀಕ್ಷೆಯಲ್ಲಿದೆ" ಎಂದು ಸಿಜಿಐ ದುಬೈ  ಟ್ವೀಟ್ ಮಾಡಿದೆ.

ಅಷ್ಟೇ ಅಲ್ಲದೆ, ಮೃತರ ಹೆಸರನ್ನೂ ಸಹ ಸಿಜಿಐ ಬಹಿರಂಗಪಡಿಸಿದ್ದು, ರಜಗೋಪಾಲನ್,  ಫಿರೋಜ್ ಖಾನ್ ಪಠಾಣ್, ರೇಷ್ಮಾ ಫಿರೋಜ್ ಖಾನ್ ಪಠಾಣ್, ದೀಪಕ್ ಕುಮಾರ್, ಶ್ರೀ ಜಮಾಲುದ್ದೀನ್ ಅರಕ್ಕವೀಟೈಲ್, ಕಿರಣ್ ಜಾನಿ, ವಾಸುದೇವ್, ತಿಲಕರಾಮ್ ಜವಾಹರ್ ಠಾಕೂರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮಾಡಿದೆ.

ಪ್ರವಾಸಿಗರ ಬಸ್ ನಲ್ಲಿ ವಿವಿಧ ರಾಷ್ಟ್ರಗಳ 31 ಪ್ರಯಾಣಿಕರಿದ್ದರು ಎನ್ನಲಾಗಿದ್ದು,  ಗುರುವಾರ ಸಂಜೆ 5:40ರಲ್ಲಿ ಮೆಟ್ರೋ ನಿಲ್ದಾಣದ ಅಲ್ ರಶಿಡಿಯಾ ನಿರ್ಗಮನದಲ್ಲಿನ ಸೈನ್ ಬೋರ್ಡ್ ಗೆ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ.  ಒಂದು ಚಿಹ್ನೆಗೆ ಅಪ್ಪಳಿಸಿ, 17 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 9 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Trending News