ಪೂರ್ವ ಚೀನಾದ ಕಾರ್ಖಾನೆಯಲ್ಲಿ ಬೆಂಕಿ: 19 ಮಂದಿ ಸಾವು

ನಿಂಗ್ಬೋ ಜಿಲ್ಲೆಯ ಆಡಳಿತದಲ್ಲಿರುವ ನಿಂಗೈ ಕೌಂಟಿಯ ಗ್ರಾಹಕ ಸರಕುಗಳ ಕಾರ್ಖಾನೆಯಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಅವಘಡ ನಡೆದಿದೆ.

Updated: Sep 30, 2019 , 09:07 AM IST
ಪೂರ್ವ ಚೀನಾದ ಕಾರ್ಖಾನೆಯಲ್ಲಿ ಬೆಂಕಿ: 19 ಮಂದಿ ಸಾವು

ಪೂರ್ವ ಚೀನಾದ ಪ್ರಾಂತ್ಯದ ಝೀಜಿಯಾಂಗ್‌ನಲ್ಲಿನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 19 ಜನರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಈ ಅವಘಡದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಿಂಗ್ಬೋ ಜಿಲ್ಲೆಯ ಆಡಳಿತದಲ್ಲಿರುವ ನಿಂಗೈ ಕೌಂಟಿಯ ಗ್ರಾಹಕ ಸರಕುಗಳ ಕಾರ್ಖಾನೆಯಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಅವಘಡ ನಡೆದಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. 

ಕೂಡಲೇ ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆಯವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರಾದರೂ ಅತಿ ಹೆಚ್ಚು ಸಂಖ್ಯೆಯ ಸಾವನ್ನು ತಪ್ಪಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಭಾನುವಾರ ರಾತ್ರಿ ವೇಳೆಗೆ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ. ಇನ್ನೂ ಮೂರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಎಎನ್ಐಗೆ ತಿಳಿಸಿದ್ದಾರೆ.