ಇಸ್ಲಾಮಾಬಾದ್: ಪ್ರಧಾನಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕ

ಅಗ್ನಿ ದುರಂತ ಸಂಭವಿಸಿದ ವೇಳೆ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ಕಚೇರಿಯಲ್ಲಿ ಉಪಸ್ಥಿತರಿರಲಿಲ್ಲ ಎನ್ನಲಾಗಿದೆ.

Last Updated : Apr 8, 2019, 03:17 PM IST
ಇಸ್ಲಾಮಾಬಾದ್: ಪ್ರಧಾನಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕ title=
Representational Image

ಇಸ್ಲಾಮಾಬಾದ್: ಸೋಮವಾರ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಕಚೇರಿಯ ಆರನೇ ಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಪ್ರಧಾನಿ ಕಚೇರಿಯಲ್ಲಿ ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.

ಅಗ್ನಿ ದುರಂತ ಸಂಭವಿಸಿದ ವೇಳೆ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ಕಚೇರಿಯಲ್ಲಿ ಉಪಸ್ಥಿತರಿರಲಿಲ್ಲ ಎನ್ನಲಾಗಿದೆ.

ಬೆಂಕಿ ದುರಂತದ ವಿಷಯ ತಿಳಿಯುತ್ತಿದ್ದಂತೆ ಕಛೇರಿಯಲ್ಲಿರುವ ಸಿಬ್ಬಂದಿಯನ್ನು ಮೊದಲು ರಕ್ಷಿಸುವಂತೆ ಪ್ರಧಾನಿ ಇಮ್ರಾನ್ ಖಾನ್ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ.

ಸ್ಥಳದಲ್ಲಿರುವ ರಕ್ಷಣಾ ತಂಡಗಳು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

Trending News