ಈ ಕಾಯಿಲೆ ಬಂದ್ರೆ 48 ಗಂಟೆಗಳಲ್ಲಿಯೇ ಸಾವು..! ಆತಂಕ ಸೃಷ್ಟಿಸುತ್ತಿದೆ ಮಾಂಸ ತಿನ್ನುವ ಬ್ಯಾಕ್ಟೀರಿಯಾ

Flesh Eating Bacteria symptoms : ಎರಡು ವರ್ಷಗಳ ಕಾಲ ಜಗತ್ತನ್ನು ಬೆಚ್ಚಿಬೀಳಿಸಿದ ಕೋವಿಡ್‌ ಸಾಂಕ್ರಾಮಿಕದ ನಂತರ, ಹೆಚ್ಚು ಭಯಾನಕ ಕಾಯಿಲೆಯ ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿವೆ. ಸಧ್ಯ ಇಂತಹುದೇ ಒಂದು ಮಾರಕ ಬ್ಯಾಕ್ಟೀರಿಯಾ ಹೆಸರು ಮುನ್ನಲೆ ಬಂದಿದ್ದು, ಈ ಸೋಂಕು ಕೇವಲ 48 ಗಂಟೆಗಳಲ್ಲಿ ಕೊಲ್ಲುತ್ತದೆ.. ಹೆಚ್ಚಿನ ವಿವರ ಇಲ್ಲಿದೆ..

Written by - Krishna N K | Last Updated : Jun 16, 2024, 04:30 PM IST
    • ಎರಡು ವರ್ಷಗಳ ಕಾಲ ಜಗತ್ತನ್ನು ಬೆಚ್ಚಿಬೀಳಿಸಿದ ಕೋವಿಡ್‌
    • ಸಧ್ಯ ಇಂತಹುದೇ ಒಂದು ಮಾರಕ ಬ್ಯಾಕ್ಟೀರಿಯಾ ಹೆಸರು ಮುನ್ನಲೆ ಬಂದಿದೆ
    • ಈ ಸೋಂಕು ತಗುಲಿದ ಕೇವಲ 48 ಗಂಟೆಗಳಲ್ಲಿ ಮನುಷ್ಯನ ಸಾವು
ಈ ಕಾಯಿಲೆ ಬಂದ್ರೆ 48 ಗಂಟೆಗಳಲ್ಲಿಯೇ ಸಾವು..! ಆತಂಕ ಸೃಷ್ಟಿಸುತ್ತಿದೆ ಮಾಂಸ ತಿನ್ನುವ ಬ್ಯಾಕ್ಟೀರಿಯಾ title=

Necrotizing Fasciitis : ಕೋವಿಡ್ 19 ಸಾಂಕ್ರಾಮಿಕದ ನಂತರ ಜಪಾನ್‌ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕು ಪತ್ತೆಯಾಗಿದೆ. ಈ ಸೋಂಕಿನ ಪ್ರಕರಣಗಳು ಕ್ರಮೇಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕ ಹುಟ್ಟಿಸಿದೆ. ಈ ಒಮ್ಮೆ ಸೋಂಕು ತಗುಲಿದರೆ 48 ಗಂಟೆಗಳಲ್ಲಿ ಸಾಯಬಹುದು. ಬನ್ನಿ ಈ ರೋಗದ ಲಕ್ಷಣಗಳು ಯಾವುವು, ಅದರ ನಿಯಂತ್ರಣ ಹೇಗೆ ಅಂತ ತಿಳಿಯೋಣ..

ಅತ್ಯಂತ ಅಪರೂಪದ ಫ್ಲಶ್-ತಿನ್ನುವ ಬ್ಯಾಕ್ಟೀರಿಯಾ ಜಪಾನ್‌ನಲ್ಲಿ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಈ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ಈ ಮಾರಕ ಬ್ಯಾಕ್ಟೀರಿಯಾಗಳು ಸ್ಪೆಕ್ಟ್ರೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅನ್ನು ಉಂಟುಮಾಡುತ್ತವೆ. ಇದು ಯಾವುದೇ ಸಮಯದಲ್ಲಿ ಮಾರಕವಾಗಬಹುದು. ಸೋಂಕು ತಗುಲಿದ 48 ಗಂಟೆಗಳಲ್ಲಿ ರೋಗಿಯು ಸಾಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. 

ಇದನ್ನೂ ಓದಿ:ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಬೆನ್ನಲ್ಲೇ ಕಿಚ್ಚ ಸುದೀಪ್ ಹೇಳಿಕೆ ವೈರಲ್!

ಈ ವರ್ಷ 2024 ರಿಂದ ಜೂನ್ ವರೆಗೆ 977 STSS ಪ್ರಕರಣಗಳು ಜಪಾನ್‌ನಲ್ಲಿ ವರದಿಯಾಗಿವೆ. ಕಳೆದ ವರ್ಷ 941 ಪ್ರಕರಣಗಳು ಬೆಳಕಿಗೆ ಬಂದಿದ್ದವು. ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯ ಪ್ರಕಾರ, ಇದೇ ಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚಾದರೆ, ಈ ವರ್ಷ ಅದು 2500 ಪ್ರಕರಣಗಳನ್ನು ತಲುಪಬಹುದು. ಸಾವಿನ ಪ್ರಮಾಣ 30 ಪ್ರತಿಶತ ಹೆಚ್ಚಾಗಬಹುದು ಎನ್ನಲಾಗಿದೆ.

ಫ್ಲಶ್ ತಿನ್ನುವ ಬ್ಯಾಕ್ಟೀರಿಯಾದ ಸೋಂಕಿನ ಲಕ್ಷಣಗಳು : ಸೋಂಕು ಆರಂಭದಲ್ಲಿ ಜ್ವರ ತರಹದ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಜ್ವರ, ಸ್ನಾಯು ನೋವು ಮತ್ತು ಗಂಟಲಿನ ನೋವು ಒಳಗೊಂಡಿರುತ್ತದೆ. ಅದರ ನಂತರ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ. ತೀವ್ರ ಜ್ವರ, ರಕ್ತದೊತ್ತಡ ಕುಸಿತ, ಚರ್ಮ ಕೆಂಪಾಗುವುದು ಕಂಡುಬರುತ್ತದೆ. ಇದುವರೆಗೂ ಈ ಬ್ಯಾಕ್ಟೀರಿಯಾದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಇದನ್ನು ತಡೆಗಟ್ಟಲು, ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯುವುದು ಮತ್ತು ಯಾವುದೇ ಗಾಯವಿದ್ದರೆ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಯಾವುದೇ ಇತರ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News