WATCH:ಬೆಕ್ಕಿನಂತೆ ಸಿಂಹಿಣಿಯನ್ನು ಹೊತ್ತು ತಂದ ಮಹಿಳೆ.. ದೃಶ್ಯ ಕಂಡು ಅವಾಕ್ಕಾದ ನೆಟ್ಟಿಗರು

Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಸಿಂಹಿಣಿಯ ವಿಡಿಯೋ ವೈರಲ್ ಆಗುತ್ತಿದೆ.

Edited by - Chetana Devarmani | Last Updated : Jan 5, 2022, 05:16 PM IST
  • ಈ ಮಹಿಳೆ ಸಿಂಹಿಣಿಯನ್ನು ತನ್ನ ಮಡಿಲಲ್ಲಿ ಹೊತ್ತು ತರುತ್ತಿದ್ದಾರೆ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ
  • ದೃಶ್ಯ ಕಂಡು ಅವಾಕ್ಕಾದ ನೆಟ್ಟಿಗರು
WATCH:ಬೆಕ್ಕಿನಂತೆ ಸಿಂಹಿಣಿಯನ್ನು ಹೊತ್ತು ತಂದ ಮಹಿಳೆ.. ದೃಶ್ಯ ಕಂಡು ಅವಾಕ್ಕಾದ ನೆಟ್ಟಿಗರು   title=
ಸಿಂಹಿಣಿ

ನಾವು ಆನ್‌ಲೈನ್‌ನಲ್ಲಿ ನೋಡುವ ಎಲ್ಲವನ್ನೂ ನಂಬಲು ಸಾಧ್ಯವಿಲ್ಲ, ಅದರಲ್ಲೂ ವಿಶೇಷವಾಗಿ ಮಹಿಳೆಯು ಸಿಂಹಿಣಿಯೊಂದಿಗೆ (lioness) ರಸ್ತೆಯಲ್ಲಿ ನಡೆದುಕೊಂಡು ಹೋಗುವ ವಿಚಾರ ನಂಬಲಾಗದ ವಿಷಯ. ಆದ್ರೆ ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

ವಿಡಿಯೋದಲ್ಲಿ ಹಿಜಾಬ್ ಧರಿಸಿರುವ ಯುವತಿಯೊಬ್ಬಳು ಸಿಂಹಿಣಿಯನ್ನು ರಸ್ತೆಯಲ್ಲಿ ಹೊತ್ತುಕೊಂಡು ಹೋಗಿದ್ದಾರೆ. ಪ್ರಾಣಿ ತುಂಬಾ ಅಸಮಾಧಾನ ತೋರುತ್ತಿದ್ದರೂ, ಅದನ್ನು ತನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುತ್ತದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ಸಖತ್ ವೈರಲ್ ಆಗುತ್ತಿದೇ. ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲದ ಕಾರಣ ಹಲವರು ಇದರ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೋ ನೋಡಿ ಕೆಲವರು ಗೇಲಿ ಕೂಡ ಮಾಡಿದ್ದಾರೆ. 

 

 

ಮಾಹಿತಿಯ ಪ್ರಕಾರ, ಜನವರಿ 1, 2022 ರಂದು, ಕುವೈತ್‌ನ ಸಬಾಹಿಯಾ ಜಿಲ್ಲೆಯ ಕಟ್ಟಡದಿಂದ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಕುವೈತ್ ಪತ್ರಿಕೆ ಅಲ್-ಅನ್ಬಾ ಪ್ರಕಾರ, ವಿಡಿಯೋದಲ್ಲಿ, ಸಿಂಹಿಣಿಯನ್ನು ಮಹಿಳೆ ಮತ್ತು ಆಕೆಯ ತಂದೆ ಸಾಕುಪ್ರಾಣಿಯಾಗಿ ಇಟ್ಟುಕೊಂಡಿದ್ದರು. ಅದನ್ನು ಕ್ಲಿಪ್‌ನಲ್ಲಿ ಕಾಣಬಹುದು.

ಮುದ್ದಿನ ಸಿಂಹಿಣಿ ಮಹಿಳೆಯ ಮನೆಯಿಂದ ಓಡಿ ಹೋದ ದೃಶ್ಯ ಸೆರೆಯಾಗಿದೆ. ಆದರೆ, ರಸ್ತೆಯಲ್ಲಿ ಸಿಂಹಿಣಿ ನಡೆದುಕೊಂಡು ಬರುತ್ತಿರುವುದನ್ನು ಕಂಡ ಜನವಸತಿ ಪ್ರದೇಶದ ಜನರು ಗಾಬರಿಗೊಂಡು ಓಡಲು ಆರಂಭಿಸಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಯುವತಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದೆ. ನಂತರ ಬಾಲಕಿ ಸಾಕು ಸಿಂಹದ ಮಾಲೀಕ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಬುಧ ದೋಷದಿಂದ ಉಂಟಾಗುತ್ತೆ ಇಷ್ಟೆಲ್ಲಾ ನಷ್ಟ.. ಇದರಿಂದ ಮುಕ್ತರಾಗಲು ಹೀಗೆ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News