Global Risk Report-2021: ಕೊರೊನಾ ಬಳಿಕ ಇದೀಗ ಬರಲಿದೆ ಈ ಮಹಾ ಸಂಕಟ

Global Risk Report-2021: ಪ್ರಸ್ತುತ ಕೊರೊನಾ ಪ್ರಕೋಪದ ಹಿನ್ನೆಲೆ ಇಡೀ ವಿಶ್ವವೇ ನರಳುತ್ತಿದೆ. ಈ ರೋಗದ ಪ್ರಭಾವಕ್ಕೆ ಒಳಗಾಗದೆ ಜೀವಿಯೇ ಇಲ್ಲ. ಏತನ್ಮಧ್ಯೆ ಈ ವರ್ಷದ ಜಾಗತಿಕ ಅಪಾಯದ ವರದಿ (Global Risk Report-2021) ಕೂಡ ಬಹಿರಂಗಗೊಂಡಿದೆ. ವರದಿಯ ಪ್ರಕಾರ, ಮುಂಬರುವ ದಿನಗಳಲ್ಲಿ ಮತ್ತೊಂದು ಮಹಾವಿಪತ್ತಿಗೆ ಜಗತ್ತು ಸಾಕ್ಷಿಯಾಗಲಿದೆ ಎನ್ನಲಾಗಿದೆ.

Written by - Nitin Tabib | Last Updated : Jan 20, 2021, 02:46 PM IST
  • ಅಪಾಯ ಇನ್ನೂ ದೂರಾಗಿಲ್ಲ
  • ಕೊರೊನಾ ಬಳಿಕ ಮತ್ತೊಂದು ಮಹಾಸಂಕಟ ಎದುರಾಗಲಿದೆ.
  • ಗ್ಲೋಬಲ್ ರಿಸ್ಕ್ ರಿಪೋರ್ಟ್ 2021ರಲ್ಲಿ ಈ ಅಂಶ ಬಹಿರಂಗ.
Global Risk Report-2021: ಕೊರೊನಾ ಬಳಿಕ ಇದೀಗ ಬರಲಿದೆ ಈ ಮಹಾ ಸಂಕಟ title=
Global Risk Report-2021 (File Photo)

Global Risk Report-2021-ನವದೆಹಲಿ: ಕೊರೊನಾ ಪ್ರಕೊಪದಿಂದ ವಿಶ್ವ ಸರಿಯಾಗಿ ಚೇತರಿಸಿಕೊಳ್ಳುವ ಮೊದಲೇ ಈ ವರ್ಷದ ಗ್ಲೋಬಲ್ ರಿಸ್ಕ್ ರಿಪೋರ್ಟ್ (Global Risk Report-2021) ಬಹಿರಂಗಗೊಂಡಿದೆ. ಈ ವರದಿಯಲ್ಲಿ ವಿಶ್ವದ ಮೇಲೆ ಬರುತ್ತಿರುವ ಅಪಾಯಗಳ ಕಾರ್ಮೋಡಗಳ ಕುರಿತು ಎಚ್ಚರಿಕೆ ನೀಡಲಾಗಿದೆ.

ಈ ದಶಕ ಹೇಗಿರಲಿದೆ?
ಗ್ಲೋಬಲ್ ರಿಸ್ಕ್ ವರದಿಯ ಪ್ರಕಾರ, ಕರೋನಾಕ್ಕಿಂತ ದೊಡ್ಡಅಪಾಯವೊಂದು ಮುಂದಿನ ದಿನಗಳಲ್ಲಿ ಎದುರಾಗಲಿದೆ. ಹೌದು, ಮುಂದಿನ 5 ರಿಂದ 10 ವರ್ಷಗಳಲ್ಲಿ ಭೌಗೋಳಿಕ ರಾಜಕೀಯ ಸ್ಥಿರತೆ (Geopolitical Stability) ತೀವ್ರವಾಗಿ ದುರ್ಬಲಗೊಳ್ಳಲಿದೆ. ಜಾಗತಿಕ ಅಪಾಯದ ವರದಿಯ ಅಂದಾಜು ನಿಜವೆಂದು ಸಾಬೀತಾದರೆ, ಇಡೀ ಜಗತ್ತು ಶತಕೋಟಿ ರೂಪಾಯಿಗಳನ್ನು ಕಳೆದುಕೊಳ್ಳಲಿದೆ ಮತ್ತು ಇದರರ್ಥ ಮತ್ತೊಮ್ಮೆ ಜಾಗತಿಕ ಆರ್ಥಿಕತೆಯು (Global Economy) ಅಪಾಯದಲ್ಲಿದೆ. ಮುಂಬರುವ ಕಾಲದಲ್ಲಿ, ಜಾಗತಿಕ ಸಾಂಕ್ರಾಮಿಕ (Pandemic), ಆರ್ಥಿಕ ಹಿಂಜರಿತ (Economic Recession), ರಾಜಕೀಯ ಪ್ರಕ್ಷುಬ್ಧತೆ ಮತ್ತು ನಿರಂತರವಾಗಿ ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟು (Climate Crisis) ವಿಶ್ವದ ಮುಂದೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಲಿವೆ ಎನ್ನಲಾಗಿದೆ.

ಜಲವಾಯು ಸಂಕಷ್ಟ ತಲೆದೂರಲಿದೆ
2020 ರಲ್ಲಿ, ಕರೋನಾ ಇಡೀ ಜಗತ್ತು ಎದುರಿಸಿದ್ದ ಅತಿದೊಡ್ಡ ಬಿಕ್ಕಟ್ಟಾಗಿತ್ತು, ಆದರೆ ಇದರರ್ಥ ಹವಾಮಾನ ಸಂಬಂಧಿತ ವಿಷಯಗಳು ಕಡಿಮೆ ಅಪಾಯಕಾರಿ ಎಂದು ಅಲ್ಲ. ಹವಾಮಾನ ಬಿಕ್ಕಟ್ಟಿಗೆ ಸಂಬಂಧಿಸಿದ ವಿಷಯಗಳು ಇಡೀ ಮಾನವ ಜನಾಂಗಕ್ಕೆ  ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅವು ಹೆಚ್ಚು ಸೂಕ್ಷ್ಮವಾಗಿವೆ. ಲಾಕ್‌ಡೌನ್ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಪ್ರಯಾಣದ ನಿರ್ಬಂಧಗಳಿಂದಾಗಿ ಇಂಗಾಲದ ಹೊರಸೂಸುವಿಕೆಯ ಕುಸಿತದ ಹೊರತಾಗಿಯೂ, ಹವಾಮಾನ ಬಿಕ್ಕಟ್ಟು ಆತಂಕಕಾರಿ ವಿಷಯವಾಗಿದೆ. ಏಕೆಂದರೆ ಕರೋನಾ (Corona Pandemic) ಬಿಕ್ಕಟ್ಟಿನ ಬಳಿಕ ಜೀವನದ ಗಾಡಿ ಮತ್ತೆ ರಸ್ತೆಗಿಳಿದರೆ, ಆರ್ಥಿಕತೆಗಳು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತವೆ, ನಂತರ ಇಂಗಾಲದ ಹೊರಸೂಸುವಿಕೆಯಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆ ಇದ್ದು, ಜಲವಾಯು ಬಿಕ್ಕಟ್ಟಿನಲ್ಲಿ ಉಲ್ಭಣದ ಸ್ಥಿತಿ ಎದುರಾಗಲಿದೆ.

ಇದನ್ನು ಓದಿ- ಕರೋನಾ ಕೊನೆಯ ಸಾಂಕ್ರಾಮಿಕವಲ್ಲ, ಮುಂದಿನ ಸವಾಲಿಗೆ ಜಗತ್ತು ಸಿದ್ಧವಾಗಬೇಕಿದೆ: WHO

ಈ ವರದಿ ಹೇಗೆ ಸಿದ್ಧಪಡಿಸಲಾಗಿದೆ?
2021ರ Global Risks Report ಫೋರಮ್ ನ ನೇತೃತ್ವ ವಹಿಸಿರುವ ಹಲವು ಸಮುದಾಯಗಳ 650 ಕ್ಕೂ ಅಧಿಕ ಸದಸ್ಯರು ಕಠಿಣ ಪರಿಶ್ರಮದಿಂದ ಈ ವರದಿಯನ್ನು ಸಿದ್ಧಪಡಿಸಿದ್ದಾರೆ ಹಾಗೂ ಇದಕ್ಕಾಗಿ ಇಡೀ ವಿಶ್ವಾದ್ಯಂತ ದತ್ತಾಂಶ ಸಂಗ್ರಹ ಕಾರ್ಯ ನಡೆದಿದೆ. ಜಲವಾಯು ಸಂಕಟದ ಹೊರತಾಗಿ ಸಾಂಕ್ರಾಮಿಕ ರೋಗ, ಕಾಡ್ಗಿಚ್ಚು (Forest Fire) ಗಳಂತಹ ದೊಡ್ಡ ಸಂಕಷ್ಟಗಳ ಕಾರ್ಮೋಡ ವಿಶ್ವದ ಮೇಲೆ ಆವರಿಸಿದೆ. 

ಇದನ್ನು ಓದಿ-Corona ಮಹಾಮಾರಿ ವಿಶ್ವಾದ್ಯಂತ ಎಷ್ಟು ಜನರನ್ನು ಬಡತನಕ್ಕೆ ತಳ್ಳಲಿದೆ, World Bank ಹೇಳಿದ್ದೇನು?

ಎಲ್ಲ ದೇಶಗಳ ಆರೋಗ್ಯ ಬಿಗಡಾಯಿಸಿದ ಕೊರೊನಾ
2020 ಹಾಗೂ 2021ರಲ್ಲಿ ಇದುವರೆಗೆ ಎದುರಾಗಿರುವ ಪರಿಸ್ಥಿತಿಗಳ ಪ್ರಕಾರ, ಕೊರೊನಾ ವೈರಸ್ ಮಾಹಾಮಾರಿಯ ಬಳಿಕ ಸಾಂಕ್ರಾಮಿಕ ರೋಗಗಳ  (Infectious Diseases)ಮೊದಲ ಸ್ಥಾನಕ್ಕೇರಿದೆ. ಕಳೆದ ವರ್ಷ ಪ್ರಕಟಗೊಂಡ ಗ್ಲೋಬಲ್ ರಿಸ್ಕ್ ವರದಿಯಲ್ಲಿ ಇದು 10 ನೇ ಸ್ಥಾನದಲ್ಲಿತ್ತು.

ಇದನ್ನು ಓದಿ-ಭಾರತೀಯ ಅರ್ಥವ್ಯವಸ್ಥೆಯ ಕುರಿತು ಪ್ರಕಟಗೊಂಡಿದೆ ಒಂದು ಸಂತಸದ ಸುದ್ದಿ..

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News